ನವದೆಹಲಿ: ಜೂನ್.9ರಂದು 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗಲಿದೆ.
#WATCH | Narendra Modi says, "…The President called me just now and asked me to work as the PM designate and she has informed me about the oath ceremony. I have told the President that we will be comfortable on the evening of the 9th of June. Now the Rashtrapati Bhavan will… pic.twitter.com/WLgn4G3R9L
— ANI (@ANI) June 7, 2024
ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಸಂಸದರ ಬೆಂಬಲದ ಪತ್ರದೊಂದಿಗೆ ಸರ್ಕಾರ ರಚಿಸೋದಕ್ಕೆ ಮೋದಿಯವರು ಹಕ್ಕು ಮಂಡನೆ ಮಾಡಿದರು. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 3ನೇ ಸಲ ದೇಶದ ಸೇವೆ ಮಾಡಲು ಅವಕಾಶ ಸಿಕ್ಕಿದೆ. 3ನೇ ಸಲ ಅವಕಾಶ ನೀಡಿದ್ದಕ್ಕೆ ದೇಶದ ಜನತೆಗೆ ಧನ್ಯವಾದಗಳು ಅಂತ ತಿಳಿಸಿದರು.
ದೇಶದ ಜನತೆಗೆ ಎನ್ ಡಿಎ ಮೈತ್ರಿ ಕೂಟದ ಮೇಲೆ ನಂಬಿಕೆಯಿದೆ. 2047ಕ್ಕೆ ಭಾರತ 100 ವರ್ಷ ಪೂರೈಸಲಿದೆ. 5 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಜೂನ್.9ರಂದು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಅಂತ ಹೇಳಿದರು.
“ಆಜಾದಿ ಕಾ ಅಮೃತ ಮಹೋತ್ಸವದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಮೂರನೇ ಬಾರಿಗೆ, ಎನ್ಡಿಎ ಸರ್ಕಾರಕ್ಕೆ ದೇಶ ಸೇವೆ ಮಾಡಲು ಜನರು ಅವಕಾಶ ನೀಡಿದ್ದಾರೆ… ಕಳೆದ ಎರಡು ಅವಧಿಗಳಲ್ಲಿ, ದೇಶವು ಮುಂದೆ ಸಾಗಿದ ವೇಗ, ಪ್ರತಿಯೊಂದು ಕ್ಷೇತ್ರದಲ್ಲೂ ಬದಲಾವಣೆ ಗೋಚರಿಸುತ್ತಿದೆ ಮತ್ತು 25 ಕೋಟಿ ಜನರು ಬಡತನದಿಂದ ಹೊರಬರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ” ಎಂದು ಹೇಳಿದರು.
#WATCH | Narendra Modi says, "This is the first election after Azadi Ka Amrit Mahotsav…For the third time, the NDA government has been given a chance by the people to serve to country…I assure the people of the country that in the last two terms, the speed with which the… pic.twitter.com/FDmw61Iswr
— ANI (@ANI) June 7, 2024
BREAKING: ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಮೋದಿ ಅಧಿಕೃತವಾಗಿ ಸರ್ಕಾರ ರಚಿಸಲು ಹಕ್ಕು ಮಂಡನೆ | PM Modi
BREAKING: ‘ಚೆಂದನ್ ಶೆಟ್ಟಿ-ನಿವೇದಿತಾ’ಗೆ ‘ವಿಚ್ಚೇದನ’ ಮಂಜೂರು: 4 ವರ್ಷಗಳ ‘ದಾಂಪತ್ಯ ಜೀವನ’ ಅಂತ್ಯ