ಬೆಳಗಾವಿ: ಧಾರವಾಡ ಹೆಚ್ಚುವರಿ ಎಎಸ್ಪಿಯಾಗಿದ್ದಂತ ನಾರಾಯಣ ಭರಮನಿ, ಸಿಎಂ ಸಿದ್ಧರಾಮಯ್ಯ ಕಪಾಳಮೋಕ್ಷಕ್ಕೆ ಕೈ ಎತ್ತಿದ್ದರಿಂದ ಬೇಸರಿಸಿ ಸ್ವಯಂ ನಿವೃತ್ತಿಗೆ ಮುಂದಾಗಿದ್ದರು. ಅವರನ್ನು ಮನವೊಲಿಸಲು ಸರ್ಕಾರ ಯಶಸ್ಸಾಗಿತ್ತು. ಇಂತಹ ನಾರಾಯಣ ಭರಮನಿ ಅವರನ್ನು ಇದೀಗ ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಸಿಎಂ ಅವರಿಂದ ಅಪಮಾನಕ್ಕೆ ಒಳಗಾಗಿದ್ದಂತ ನಾರಾಯಣ ಭರಮನಿಗೆ ಸಿದ್ಧರಾಮಯ್ಯ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಅವರನ್ನು ಎಎಸ್ಪಿಯಿಂದ ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.
ಅಂದಹಾಗೇ ಏಪ್ರಿಲ್.28ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದರಿಂದ ಸಿಟ್ಟಾಗಿದ್ದಂತ ಸಿಎಂ ಸಿದ್ಧರಾಮಯ್ಯ ಏಯ್ ಯಾರಿಲ್ಲಿ ಪೊಲೀಸ್ ಅಧಿಕಾರಿ ಎಂದಾಗ ಧಾರವಾಡ ಹೆಚ್ಚುವರಿ ಎಎಸ್ಪಿ ನಾರಾಯಣ ಭರಮನಿ ಅವರ ಮುಂದೆ ಹೋಗಿ ನಿಂತಿದ್ದರು.
ಈ ಸಂದರ್ಭದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ನಾರಾಯಣ ಭರಮನಿಗೆ ಕಪಾಳ ಮೋಕ್ಷ ಮಾಡಲು ಕೈ ಎತ್ತಿ ಕೆಳಗಿಳಿಸಿದ್ದರು. ಈ ಘಟನೆಯಿಂದಾಗಿ ನಾರಾಯಣ ಭರಮನಿ ಅವರು ಸ್ವಯಂ ನಿವೃತ್ತಿ ಪಡೆಯುವಂತ ನಿರ್ಧಾರಕ್ಕೆ ಬಂದು ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದರು. ಆ ಬಳಿಕ ಅವರನ್ನು ಸಿಎಂ ಸಿದ್ಧರಾಮಯ್ಯ, ಗೃಹ ಸಚಿವರು ಮನವೊಲಿಸಿದ್ದರು.
ಸಿಎಂ ಮಾಧ್ಯಮ ಸಂಜೀವಿನಿ ಯೋಜನೆ ಷರತ್ತು ಸಡಿಲಿಕೆಗೆ ‘ಕೆ.ಪಿ ಪ್ರಭಾಕರ್’ಗೆ ಕೆಯುಡಬ್ಲೂಜೆ ಮನವಿ
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!