ಬೆಂಗಳೂರು: ರಾಜ್ಯದಲ್ಲಿ ಹೈನೋದ್ಯಮಕ್ಕೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ರೈತರ ಆರ್ಥಿಕ ಸದೃಢತೆಗಾಗಿ ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆ ಮಾಡಲಾಗಿದೆ ಎಂಬುದಾಗಿ ಸರ್ಕಾರ ಸ್ಪಷ್ಟ ಪಡಿಸಿದೆ.
ಮುಂಬರುವ ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು ₹4 ಹೆಚ್ಚಳವಾಗಲಿದ್ದು, ಇಲ್ಲಿ ಏರಿಕೆಯಾಗುವ ದರದ ಲಾಭವು ರೈತರನ್ನು ತಲುಪಲಿದೆ. ದರ ಏರಿಕೆಯ ನಂತರವೂ ಒಂದು ಲೀಟರ್ ಹಾಲಿನ ಬೆಲೆ ₹46 ಆಗಲಿದ್ದು, ಇದು ಬೇರೆಲ್ಲಾ ರಾಜ್ಯಗಳಿಗಿಂತಲೂ ಕಡಿಮೆಯಿರಲಿದೆ ಎಂದಿದೆ.
ನಾಡಿನ ಲಕ್ಷಾಂತರ ಹಾಲು ಉತ್ಪಾದಕರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬಲ ತುಂಬುವ ಏಕೈಕ ಉದ್ದೇಶದ ಈ ಪ್ರಯತ್ನಕ್ಕೆ ಸಾರ್ವಜನಿಕರು ಬೆಂಬಲವಾಗಿ ನಿಲ್ಲುತ್ತೀರೆಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಹೈನೋದ್ಯಮಕ್ಕೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ರೈತರ ಆರ್ಥಿಕ ಸದೃಢತೆಗಾಗಿ ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆ ಮಾಡಲಾಗಿದೆ.
ಮುಂಬರುವ ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು ₹4… pic.twitter.com/lkEG8ieopE
— DIPR Karnataka (@KarnatakaVarthe) March 27, 2025
ಕರ್ನಾಟಕ ಹಾಲು ಮಹಾಮಂಡಳ (ಕೆ.ಎಂ.ಎಫ್) ಕಳೆದ ಐದು ದಶಕಗಳಿಂದ ರಾಜ್ಯದ ಹಾಲು ಉತ್ಪಾದಕರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ರೈತರ ಆರ್ಥಿಕ ಸದೃಡತೆಗಾಗಿ ಕೆಲಸ ಮಾಡುತ್ತಿದೆ. ಕೆ.ಎಂ.ಎಫ್‌ನ ಸದಸ್ಯ ಒಕ್ಕೂಟಗಳು ಹಾಲು ಉತ್ಪಾದಕರಿಂದ ಹಾಲು ಖರೀದಿಸಿ, ಸಂಸ್ಕರಿಸಿ, ನಂದಿನಿ ಬ್ರಾಂಡ್ ಅಡಿಯಲ್ಲಿ ವಿವಿಧ ಬಗೆಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದೆ ಎಂದಿದೆ.
ಪ್ರಸ್ತುತ, ರಾಜ್ಯದ 26.84 ಲಕ್ಷ ಹೈನುಗಾರ ರೈತರ ಪೈಕಿ ಸರಾಸರಿ 8.90 ಲಕ್ಷ ರೈತರು – ಪ್ರತಿ ದಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿದ್ದಾರೆ. ದೇಶದ ಎರಡನೇ ಅತಿದೊಡ್ಡ ಸಹಕಾರ ಹೈನೋದ್ಯಮವಾಗಿರುವ ಕೆ.ಎಂ.ಎಫ್, ಗ್ರಾಹಕರಿಂದ ಬರುವ ಪ್ರತಿಯೊಂದು ರೂಪಾಯಿಯಲ್ಲಿ 80 ಪೈಸೆಗಿಂತ ಹೆಚ್ಚು ಹಣ ರೈತರಿಗೆ ನೇರವಾಗಿ ನೀಡುತ್ತಿದೆ. ಪ್ರತಿದಿನ, ರಾಜ್ಯದ ಹಾಲು ರೂ.28.60 ಕೋಟಿ ಹಣ ನೇರವಾಗಿ ಪಾವತಿ ಉತ್ಪಾದಕರಿಗೆ ಸರಾಸರಿ ಮಾಡಲಾಗುತ್ತಿದೆ ಎಂಬುದಾಗಿ ತಿಳಿಸಿದೆ.
ರಾಜ್ಯದ ಲಕ್ಷಾಂತರ ಹೈನುಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಹಾಗೂ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಪ್ರಸ್ತುತ ದರ ಏರಿಕೆ ನಿರ್ಧಾರವನ್ನು ರಾಜ್ಯ ಸರ್ಕಾರವು ಕೈಗೊಂಡಿದೆ. ರಾಷ್ಟ್ರದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಅತ್ಯಂತ ಕಡಿಮೆಯಿದೆ. ರಾಜಧಾನಿ ಸೇರಿದಂತೆ ಪ್ರಮುಖ ರಾಜ್ಯಗಳ ಹಾಲಿನ ದರ ಪಟ್ಟಿ ಈ… pic.twitter.com/7pOQAkd8VH
— DIPR Karnataka (@KarnatakaVarthe) March 27, 2025
ಕೆ.ಎಂ.ಎಫ್ ಹೈನುಗಾರಿಕೆಗೆ ಪೂರಕವಾಗಿ ಪಶುವೈದ್ಯಕೀಯ ಸೇವೆ, ಕೃತಕ ಗರ್ಭಧಾರಣೆ, ಪಶು ಆಹಾರ ಪೂರೈಕೆ, ಮೇವು ಅಭಿವೃದ್ಧಿ ತರಬೇತಿ ಮುಂತಾದ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸುತ್ತಿದೆ. ರೈತರ ಸುಧಾರಿತ ಅನುಕೂಲಕ್ಕಾಗಿ ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್ ಮುಂತಾದ ಉಪಕರಣಗಳನ್ನೂ ವಿತರಿಸುತ್ತಿದೆ. ವರ್ಷದ ಎಲ್ಲಾ ಸಮಯದಲ್ಲೂ ರೈತರಿಂದ ನಿರಂತರವಾಗಿ ಹಾಲು ಖರೀದಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಶು ಆಹಾರ ಉತ್ಪಾದನೆಗೆ ಬಳಸುವ ಮೆಕ್ಕೆಜೋಳ, ಅಕ್ಕಿತೌಡು, ಹತ್ತಿಕಾಳು ಹಿಂಡಿ, ಖನಿಜ ಪದಾರ್ಥಗಳ ಬೆಲೆ ಶೇ.35-40ರಷ್ಟು ಹೆಚ್ಚಳವಾಗಿದೆ ಹಾಗೂ ಹೈನುರಾಸುಗಳ ನಿರ್ವಹಣಾ ವೆಚ್ಚವೂ ಸಹ ಗಣನೀಯವಾಗಿ ಅಧಿಕವಾಗಿದೆ ಎಂದಿದೆ.
ದಿನಾಂಕ: 27.03.2025ರಂದು ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ರಾಜ್ಯದಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್/ಕೆಜಿಗೆ ರೂ.4/- ರಂತೆ ಹೆಚ್ಚಿಸಲು ಸಮ್ಮತಿಸಲಾಯಿತು. ದರ ಪರಿಷ್ಕರಣೆಯ ಮೊತ್ತವು ರಾಜ್ಯದ ಹಾಲು ಉತ್ಪಾದಕರಿಗೆ ನೇರವಾಗಿ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಈ ಹಿಂದೆ ದಿನಾಂಕ 26.06.2024 ರಿಂದ ಪ್ರತಿ 1 ಲೀಟರ್ ನಂದಿನಿ ಹಾಲಿಗೆ 50 ಮಿಲಿ ಹೆಚ್ಚುವರಿ ನೀಡಿ ಸದರಿ ಪ್ರಮಾಣಕ್ಕೆ ರೂ.2/- ರಂತೆ ಹೆಚ್ಚಿಸಲಾಗಿದ್ದ ದರವನ್ನು ಹಿಂಪಡೆದು ಮೊದಲಿನಂತೆ ಯಥಾಸ್ಥಿತಿ 500 ಮಿಲಿ ಮತ್ತು 1 ಲೀಟರ್ ಮೊಟ್ಟಣದಲ್ಲಿ ಪ್ರಸ್ತುತ ರೂ.4/- ದರ ಪರಿಷ್ಕರಣೆಯನ್ನು ಅಳವಡಿಸಿಕೊಂಡು ಮಾರಾಟಕ್ಕೆ ಕ್ರಮವಿಡಲು ತಿಳಿಸಲಾಗಿದೆ ಎಂದು ಹೇಳಿದೆ.
ಅದರಂತೆ ಪ್ರಮುಖ ಹಾಲಿನ ಮಾದರಿಗಳ ಮತ್ತು ಮೊಸರಿನ ಪರಿಷ್ಕರಿಸಿದ ಮಾರಾಟ ದರಗಳ ವಿವರಗಳು ಈ ಕೆಳಗಿನಂತಿರುತ್ತದೆ.
- ಟೋನ್ಡ್ ಹಾಲು – ನೀಲಿ ಪೊಟ್ಟಣ : 42 ರಿಂದ 46 ರೂಗೆ ಎರಿಕೆ
- ಹೋಮೋಜೀನೈಡ್ ಟೋನ್ಡ್ ಹಾಲು : 43 ರಿಂದ ರೂ.47ಕ್ಕೆ ಏರಿಕೆ.
- ಹಸುವಿನ ಹಾಲು (ಹಸಿರು ಪೊಟ್ಟಣ) : 46 ರಿಂದ 50 ರೂಗೆ ಏರಿಕೆ
- ಶುಭಂ (ಕೇಸರಿ ಪೊಟ್ಟಣ), ಸ್ಪೆಷಲ್ ಹಾಲು : 48 ರಿಂದ 52 ರೂಪಾಯಿಗೆ ಏರಿಕೆ
- ಮೊಸರು, ಪ್ರತಿ ಕೆಜಿಗೆ: 50ರಿಂದ 54 ರೂಪಾಯಿಗೆ ಏರಿಕೆ
ಹಾಲಿನ ದರ ಯಾವ ರಾಜ್ಯದಲ್ಲಿ ಎಷ್ಟು ಇದೆ.?
- ಕೇರಳ – ಪ್ರತಿ ಲೀಟರ್ ದರ ರೂ.52
- ಗುಜರಾಜ್ – ಪ್ರತಿ ಲೀಟರ್ ದರ ರೂ.53
- ದೆಹಲಿ – ಪ್ರತಿ ಲೀಟರ್ ದರ ರೂ.55
- ಮಹಾರಾಷ್ಟ್ರ – ಪ್ರತಿ ಲೀಟರ್ ದರ ರೂ.52
- ತೆಲಂಗಾಣ – ಪ್ರತಿ ಲೀಟರ್ ದರ ರೂ.58
- ಕರ್ನಾಟಕ – ಪ್ರತಿ ಲೀಟರ್ ದರ ರೂ.46