ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 4 ರೂ.ಗಳಷ್ಟು ಹೆಚ್ಚಳ ಮಾಡುವುದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ. ಏಪ್ರಿಲ್ 1ರಿಂದ ನೂತನ ದರ ಜಾರಿಗೊಳ್ಳಲಿದೆ. ಈ ನೂತನ ದರಪಟ್ಟಿಯಂತೆ ಯಾವ ಪ್ಯಾಕೇಟ್ ಹಾಲು ಎಷ್ಟು ರೂಪಾಯಿ ಹೆಚ್ಚಳವಾಗಲಿದೆ ಅಂತ ಮಾಹಿತಿ ಮುಂದಿದೆ ಓದಿ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ ರೂ.4 ಹೆಚ್ಚಳ ಮಾಡುವುದಕ್ಕೆ ಅನುಮೋದಿಸಿದೆ. ಏಪ್ರಿಲ್ 1ರಿಂದ ರಾಜ್ಯದಲ್ಲಿ 4 ರೂಪಾಯಿ ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ. ಹಾಗಾದ್ರೇ ಯಾವ ಮಾದರಿಯ ಹಾಲಿಗೆ ಎಷ್ಟು ಬೆಲೆ ಹೆಚ್ಚಳ ಅಂತ ಈ ಕೆಳಗಿದೆ ನೂತನ ಪರಿಷ್ಕೃತ ದರಪಟ್ಟಿ.
ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ
- ನೀಲಿ ಪ್ಯಾಕೇಟ್ ಹಾಲಿನ ದರ 44 ರೂಪಾಯಿಯಿಂದ 48 ರೂಪಾಯಿಗೆ ಏರಿಕೆ.
- ಆರೇಂಜ್ ಪ್ಯಾಕೇಟ್ ನಂದಿನಿ ಹಾಲಿನ ದರ ರೂ.54 ರಿಂದ 58 ರೂಗೆ ಏರಿಕೆ.
- ಸಮೃದ್ಧಿ ಪ್ಯಾಕೇಟ್ ನಂದಿನಿ ಹಾಲಿನ ದರ ರೂ.56 ರಿಂದ 60ಕ್ಕೆ ಏರಿಕೆ.
- ಗ್ರೀನ್ ಸ್ಪೆಷಲ್ ಹಾಲಿನ ದರ ರೂ.54 ರಿಂದ 58ಕ್ಕೆ ಏರಿಕೆ.
- ನಾರ್ಮಲ್ ಗ್ರೀನ್ ಹಾಲಿನ ದರ ರೂ.52ರಿಂದ 56 ರೂಪಾಯಿಗೆ ಹೆಚ್ಚಳ
ಈ ಮೇಲ್ಕಂಡ ನೂತನ ನಂದಿನಿ ಹಾಲಿನ ನೂತನ ದರ ಪಟ್ಟಿ ಏಪ್ರಿಲ್.1ರಿಂದ ಜಾರಿಗೆ ಬರಲಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೇ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಕಡಿಮೆ ಇದೆ ಅಂತ ಪಶು ಸಂಗೋಪನಾ ಸಚಿವ ವೆಂಕಟೇಶ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಕಳಪೆ ಮೂಲಸೌಕರ್ಯ ಹೊಂದಿರೋ ‘ಪ್ಯಾರಾ ಮೆಡಿಕಲ್ ಸಂಸ್ಥೆ’ಗಳಿಗೆ ಶಾಕ್
BREAKING : ಕೇರಳದ ಸೀತಾದೇವಿ ಲವ್ ಕುಶ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದೆ ಪ್ರಿಯಾಂಕಾ ಗಾಂಧಿ | WATCH VIDEO