ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 4 ರೂ.ಗಳಷ್ಟು ಹೆಚ್ಚಳ ಮಾಡುವುದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ. ಹಾಗಾದ್ರೇ ಯಾವ ಪ್ಯಾಕೇಟ್ ಹಾಲು ಎಷ್ಟು ರೂಪಾಯಿ ಹೆಚ್ಚಳವಾಗಲಿದೆ ಅಂತ ಮಾಹಿತಿ ಮುಂದಿದೆ ಓದಿ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ ರೂ.4 ಹೆಚ್ಚಳ ಮಾಡುವುದಕ್ಕೆ ಅನುಮೋದಿಸಿದೆ. ಈ ಮೂಲಕ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಅನ್ನು ಕಾಂಗ್ರೆಸ್ ಸರ್ಕಾರ ನೀಡಿದೆ.
ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ
- ನೀಲಿ ಪ್ಯಾಕೇಟ್ ಹಾಲಿನ ದರ 44 ರೂಪಾಯಿಯಿಂದ 48 ರೂಪಾಯಿಗೆ ಏರಿಕೆ.
- ಆರೇಂಜ್ ಪ್ಯಾಕೇಟ್ ನಂದಿನಿ ಹಾಲಿನ ದರ ರೂ.54 ರಿಂದ 58 ರೂಗೆ ಏರಿಕೆ.
- ಸಮೃದ್ಧಿ ಪ್ಯಾಕೇಟ್ ನಂದಿನಿ ಹಾಲಿನ ದರ ರೂ.56 ರಿಂದ 60ಕ್ಕೆ ಏರಿಕೆ.
- ಗ್ರೀನ್ ಸ್ಪೆಷಲ್ ಹಾಲಿನ ದರ ರೂ.54 ರಿಂದ 58ಕ್ಕೆ ಏರಿಕೆ.
- ನಾರ್ಮಲ್ ಗ್ರೀನ್ ಹಾಲಿನ ದರ ರೂ.52ರಿಂದ 56 ರೂಪಾಯಿಗೆ ಹೆಚ್ಚಳ
ಈ ಮೇಲ್ಕಂಡ ನೂತನ ನಂದಿನಿ ಹಾಲಿನ ದರ ಪಟ್ಟಿ ನಾಳೆಯಿಂದಲೇ ಜಾರಿಗೆ ಬರಲಿದೆ. ಹೀಗಾಗಿ ರಾಜ್ಯದ ಜನತೆಗೆ ನಾಳೆಯಿಂದ ನಂದಿನಿ ಹಾಲಿನ ದರ ಹೆಚ್ಚಳದ ಬರೆ ಬೀಳಲಿದೆ.
‘ಬಿಜೆಪಿ ನಾಯಕ’ರಿಗೆ ಈ ಸವಾಲ್ ಹಾಕಿದ ‘ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು’
BREAKING : ಕೇರಳದ ಸೀತಾದೇವಿ ಲವ್ ಕುಶ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದೆ ಪ್ರಿಯಾಂಕಾ ಗಾಂಧಿ | WATCH VIDEO