ಬೆಂಗಳೂರು : ನಂದಿನಿ ಹಾಲಿನ ದರ ಹೆಚ್ಚಳವಾದ ಬೆನ್ನೆಲೆ ಕಾಫಿ ಟೀ ಬೆಲೆ ಏರಿಕೆ ಮಾಡಲು ಮುಂದಾಗಿದ್ದ ಹೋಟೆಲ್ ಮಾಳಿಕರು ನಂತರ ಸಿದ್ದರಾಮಯ್ಯ ಅವರ ಖಡಕ್ ಸೂಚನೆಗೆ ದರ ಹೆಚ್ಚಳ ಮಾಡಲಿಲ್ಲ. ಆದರೆ ನಂದಿನಿ ಹಾಲಿನ ದರ ಹೆಚ್ಚಳ ಪರಿಣಾಮದಿಂದ ಇದೀಗ ಮಿಲ್ಕ್ ಶೇಕ್ ಐಸ್ ಕ್ರೀಮ್ ಹಾಗೂ ಧಾರವಾಡ ಪೇಡ ದರದಲ್ಲಿ ದರ ಏರಿಕೆಯಾಗಿದೆ.

ಹೌದು ರಾಜ್ಯದಲ್ಲಿ ನಂದಿನಿ ಹಾಲಿನ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್​​ಗಳಲ್ಲಿ 50 ಎಂಎಲ್​​​ ಹೆಚ್ಚುವರಿ ಹಾಲು ಸೇರಿಸಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದ ಹಾಲಿನಿಂದ ಮಾಡುವ ಉತ್ಪನ್ನಗಳಾದ ಸಿಹಿ ತಿಂಡಿಗಳು, ಐಸ್ ಕ್ರೀಂ ಹಾಗೂ ಮಿಲ್ಕ್ ಶೇಕ್ ದರ ಹೆಚ್ಚಳ‌ ಮಾಡಲು ಮಾಲೀಕರು ‌ಮುಂದಾಗಿದ್ದಾರೆ. ಪ್ರತಿ ಲೀಟರ್ ಐಸ್ ಕ್ರೀಂ ಬಾಕ್ಸ್ ಮೇಲೆ 10 ರಿಂದ 15 ರೂಪಾಯಿ ಹೆಚ್ಚಳವಾದರೆ, ಎಲ್ಲಾ ತರಹದ ಮಿಲ್ಕ್ ಶೇಕ್ ಗಳ ಮೇಲೆ 5 ರಿಂದ 10 ರೂಪಾಯಿ ಹೆಚ್ಚಳವಾಗಲಿದೆ.

ಸಾಮಾನ್ಯವಾಗಿ ಹೋಟೆಲ್ಗಳಲ್ಲಿ ಯಾವುದೇ ಸಿಹಿತಿಂಡಿ ತಯಾರಿಸ ಬೇಕಾದರೂ ಕನಿಷ್ಠವೆಂದರೂ 5 ರಿಂದ 10 ಲೀಟರ್ ಹಾಲು ಬೇಕೇ ಬೇಕಾಗುತ್ತದೆ ಹಾಗಾಗಿ ಹಾಲಿನ ಅದರ ಏರಿಕೆಯಾಗಿದ್ದರಿಂದ ಸಹಜವಾಗಿ ಸಿಹಿ ತಿಂಡಿಗಳ ಬೆಲೆ ಏರಿಕೆ ಅನಿವಾರ್ಯ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಬೇಕರಿಗಳಲ್ಲಿ ತಯಾರಿಸುವ ಸಿಹಿ ತಿಂಡಿಗಳಿಗಂತೂ ಹಾಲು ಬೇಕೆ ಬೇಕು. ಹಾಲು ಇಲ್ಲದೆ ಸ್ವೀಟ್ ತಯಾರು ಮಾಡುವುದು ಕಷ್ಟ. ಒಂದು ಕೆಜಿ ದೂದ್ ಪೇಡ, ಧಾರವಾಡ ಪೇಡ ಹಾಗೂ ಯಾವ ಸಿಹಿತಿಂಡಿ ‌ಮಾಡಬೇಕಂದರೂ ಕನಿಷ್ಠ 5 ಕೆಜಿ ಹಾಲು ಬೇಕಾಗುತ್ತದೆ.ಪೀಸ್ತಾ ರೋಲ್, ಮಿಲ್ಕ್ ಕೇಕ್, ಮಿಲ್ಕ್ ಬರ್ಫಿ, ದೂದ್ ಪೇಡ ಹಾಗೂ ಧಾರವಾಡ ಪೇಡ ಸದ್ಯ ಕೆಜಿ ಗೆ 400 ರೂಪಾಯಿ ಇದ್ದು ಹಾಲಿನ ಬೆಲೆ ಹೆಚ್ಚಳದಿಂದ 20 ರಿಂದ 25 ರಿಂದ ರೂಪಾಯಿ ಹೆಚ್ಚಳವಾಗಲಿದೆ.

ಒಟ್ಟಿನಲ್ಲಿ ಹಾಲಿನ ದರ ಹೆಚ್ಚಳದಿಂದ ಹಾಲಿನಿಂದ ಮಾಡುವ ತಿಂಡಿ ತಿನಿಸುಗಳ ದರ ಏರಿಕೆ ಆಗುವುದು ಖಚಿತವಾಗಿದೆ. ಬೇರೆ ಬ್ರಾಂಡ್​ಗಳ ಹಾಲಿನಲ್ಲಿ ಐಸ್ ಕ್ರೀಂ, ಮಿಲ್ಕ್ ಹಾಗೂ ಸ್ವೀಟ್ ಗಳು ರುಚಿ ಬರೋದಿಲ್ಲ. ಹಾಗಾಗಿ ನಂದಿನಿ ಹಾಲೇ ಬೆಸ್ಟ್ ಎನ್ನುತ್ತಾರೆ ವ್ಯಾಪಾರಿಗಳು.

Share.
Exit mobile version