ಬೆಳಗಾವಿ : ನಮ್ಮನ್ನು ಸೋಲಿಸಲು ಎಲ್ಲಿಂದ ನಿರ್ದೇಶನ ಬಂದಿದೆ ಎಂದು ಗೊತ್ತಿತ್ತು. ಘಾಟಗೆಯವರ ಚಾಡಿ ಮಾತು ಕೇಳುತ್ತಾರೆ ಎಂದು ಹೇಳಿದರು. ನಾನು ಘಾಟಗೆ ಅಲ್ಲ ಹೆಂಡತಿ ಮಕ್ಕಳ ಮಾತನ್ನು ಕೇಳಲ್ಲ. ಮಾಜಿ ಶಾಸಕ ಶ್ಯಾಮ್ ಘಾಟಗೆ ನೀವು ಕುಸ್ತಿ ಆಡಿ ನಮ್ಮ ಚುನಾವಣೆಗೆ ಯಾಕೆ ತೊಂದರೆ ಮಾಡಿದ್ರಿ? ನಿಮಗೆ ಟಿಕೆಟ್ ಕೊಡಿಸಿ ಸಪೋರ್ಟ್ ಮಾಡಿದ್ವಿ, ನೀವ್ಯಾಕೆ ಹೀಗೆ ಮಾಡಿದ್ರಿ ಎಂದು ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿಯಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಮಹೇಂದ್ರ ತಮ್ಮಣ್ಣನವರ್ ನೀವು ಸಣ್ಣವರಿದ್ದೀರಿ. ಈಗ ಒಂದು ವರ್ಷವಾಯಿತು ಅಷ್ಟೇ ಬಹಳ ನಿಧಾನವಾಗಿ ಹೋಗಬೇಕು. ಗಾಡಿ ಸ್ಲೋ ಇರಬೇಕು ವೇಗವಾಗಿ ಬಿಡಬಾರದು. ಬಿದ್ದರೆ ಆರ್ ಟಿ ಓ ಲೈಸೆನ್ಸ್ ಕೊಡಲ್ಲ. ಆರ್ ಟಿ ಓ ಕೈಯಲ್ಲಿ ದಾಟಬೇಕು ಎಲ್ಲಾ ಪರಿಶೀಲಿಸಿ, ನಂತರ ಲೈಸೆನ್ಸ್ ಕೊಡುತ್ತಾರೆ ನಮ್ಮ ವಿರುದ್ಧ ಹೇಳಿಕೆ ಕೊಡುವವರು ಕರ್ನಾಟಕದ ತುಂಬಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆಯಲ್ಲಿ 22 ಸಾವಿರ ಲೀಡ್ ಕೊಟ್ಟಿದ್ದೇನೇ ಎಂದಿದ್ದರು. ಕುಡಚಿ ಒಂದೇ ಊರಿನಲ್ಲಿ 18,000 ಮತಗಳು ಕಾಂಗ್ರೆಸ್ಸಿಗೆ ಬಂದಿವೆ. ವಿಧಾನಸಭಾ ಚುನಾವಣೆಯಲ್ಲಿ ನಿಮಗೆ ಬಿದ್ದ ಮತಗಳು ಬಿಜೆಪಿಗೆ ಹೋಗಿದೆ. ನಿಮ್ಮ ವಿರುದ್ಧ ಸುಮ್ಮನೆ ಆರೋಪ ಮಾಡಲು ನಾನು ಖಾಲಿ ಇಲ್ಲ. ಯಾರು ಕೆಲಸ ಮಾಡಿಲ್ಲವೋ ಅವರ ವಿರುದ್ಧ ಆರೋಪ ಮಾಡಿದ್ದೇನೆ ಎಂದರು.

ಎಲ್ಲಾ ಕಡೆ ಮೋಸವಾಗಿದ್ದರೆ ಚುನಾವಣೆ ಗೆಲ್ಲುವುದು ಕಠಿಣವಾಗುತ್ತಿತ್ತು. ತಪ್ಪಾಯ್ತು ಎಂದು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದು, ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಇದೆ ರಾಜಕಾರಣ ಎಂದು ಶಾಸಕ ಮಹೇಂದ್ರ ತಮ್ಮಣ್ಣನವರ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಎಚ್ ಡಿ ದೇವೇಗೌಡ ಬಿಎಸ್ ವೈ ಸಿದ್ದರಾಮಯ್ಯ ಎಷ್ಟು ಜನರನ್ನು ಬೆಳೆಸಿದರು? ಬೆಳೆದ ನಂತರ ನಾಯಕರನ್ನೇ ಬೈತಾರೆ.ಆದರೆ ನಾನು ಇದನ್ನು ಗಂಭೀರವಾಗಿ ಪರಿಗಣಿಸಲ್ಲ. ಬೇಟೆಗಾಗಿ ಕಾಯುತ್ತೇನೆ.ರಾಜಕಾರಣ ಯಾರ ಮನೆಯ ಆಸ್ತಿಯೂ ಇಲ್ಲ. ಜನ ಯಾರನ್ನ ಬೇಕಾದರೂ ಗೆಲ್ಲಿಸುತ್ತಾರೆ ಯಾರನ್ನ ಬೇಕಾದರೂ ಸೋಲಿಸುತ್ತಾರೆ ಎಂದರು.

ಬೇರೆ ಪಕ್ಷಗಳಿಗೆ ಭವಿಷ್ಯವಿಲ್ಲ ಎಂದು ಎಲ್ಲರೂ ಬಿಜೆಪಿಗೆ ಹೊರಟಿದ್ದರು. ಆದರೆ ಒಂದು ಚುನಾವಣೆ ಎಲ್ಲಾ ಸಾಧ್ಯವಿದೆ ಎಂದು ತೋರಿಸಿತು. ಯಾರನ್ನು ಬೇಕಾದರೂ ಸೋಲಿಸುತ್ತೇವೆ, ಗೆಲ್ಲಿಸುತ್ತೇವೆ ಎಂದು ಜನ ತೋರಿಸಿದ್ದಾರೆ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಲು ಕಲಿಯಬೇಕು ಎಂದು ಬೆಳಗಾವಿ ಜಿಲ್ಲೆಯ ಹಾರೋಗೇರಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

Share.
Exit mobile version