ಬೆಂಗಳೂರು: ಒಂದು ವರ್ಷದ ಹಿಂದೆ ತಿರುಪತಿ ತಿರುಮಲಕ್ಕೆ ಸಾಗಿಸಲಾಗುತ್ತಿದ್ದಂತ ನಂದಿನಿ ತುಪ್ಪದ ಸರಬರಾದು ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭಗೊಂಡಿದೆ. ಟ್ಯಾಂಕರ್ ಮೂಲಕ ನಂದಿನಿ ತುಪ್ಪವನ್ನು ತಿರುಪತಿ ತಿರುಮಲಕ್ಕೆ ಸಾಗಿಸಲು ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದ್ದಾರೆ.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ತಿರುಪತಿ ತಿರುಮಲಕ್ಕೆ ಸ್ಥಗಿತವಾಗಿದ್ದ ನಂದಿನಿ ತುಪ್ಪ ಸರಬಾಜಿಗೆ ಟ್ಯಾಂಕರ್ ಮೂಲಕ ಸಾಗಿಸುವುದಕ್ಕೆ ಚಾಲನೆ ನೀಡಿದರು. ಈ ವೇಳೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಎಂಡಿ ಜಗದೀಶ್ ಸೇರಿದಂತೆ ಹಲವರು ಉಪಸ್ಥಿತಿರಾಗಿದ್ದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು ಕಳೆದ 05 ದಶಕಗಳಿಂದಲೂ ತನ್ನ ಸದಸ್ಯ ಹಾಲು ಒಕ್ಕೂಟಗಳ ಮೂಲಕ ರಾಜ್ಯದ 24 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲನ್ನು ಖರೀದಿಸಿ, ಸಂಸ್ಕರಿಸಿ, “ಗೋವಿನಿಂದ ಗ್ರಾಹಕರವರೆಗೆ” ಎಂಬ ಶೀರ್ಷಿಕೆಯನ್ನು ಹೊತ್ತು “ನಂದಿನಿ” ಬ್ಯಾಂಡಿನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಚಯಿಸಿರುತ್ತದೆ. “ನಂದಿನಿ” ಯು ಕರ್ನಾಟಕ ರಾಜ್ಯದ ಮನೆ ಮಾತಾಗಿರುವ ಬ್ಯಾಂಡ್ ಆಗಿರುವುದಲ್ಲದೇ, ರಾಷ್ಟ್ರಾದ್ಯಂತ ಗ್ರಾಹಕರು ಗುರುತಿಸುವ ಪ್ರತಿಷ್ಠಿತ ಹಾಲಿನ ಬ್ಯಾಂಡ್ ಆಗಿ ಹೊರಹೊಮ್ಮಿರುತ್ತದೆ.
ಕಹಾಮದಿಂದ ತಿರುಮಲ ತಿರುಪತಿ ದೇವಸ್ಥಾನ, ಆಂಧ್ರಪ್ರದೇಶ ರವರಿಗೆ ಹಲವಾರು ವರ್ಷಗಳಿಂದ ಅಸ್ಮಾರ್ಕ್ ಸ್ಪೇಷಲ್ ಗ್ರೇಡ್ ಹೊಂದಿರುವ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪವಿತ್ರ ಶ್ರೀವಾರಿ ಪ್ರಸಾದ ತಯಾರಿಕೆಗೆ “ನಂದಿನಿ ತುಪ್ಪವನ್ನು” ಸರಬರಾಜು ಮಾಡಲಾಗಿರುತ್ತದೆ.
ಕಹಾಮದಿಂದ 2013-14ನೇ ಸಾಲಿನಿಂದ 2021-22ರ ವರೆವಿಗೂ 5000 ಮೆ.ಟನ್ ತುಪ್ಪವನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಲಾಗಿರುತ್ತದೆ.
ಪ್ರಸ್ತುತ “2024-25 ನೇ ಸಾಲಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರಾರಂಭಿಕವಾಗಿ 350 ಮೆ.ಟನ್ ನಂದಿನಿ ತುಪ್ಪವನ್ನು ಸರಬರಾಜು ಮಾಡಲು ಟೆಂಡ ಮೂಲಕ ಬೇಡಿಕೆಯನ್ನು ನೀಡಿರುತ್ತಾರೆ.
ಅದರಂತೆ ಬೇಡಿಕೆ ಅನುಗುಣವಾಗಿ ಹಸುವಿನ ತುಪ್ಪವನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ ಟ್ಯಾಂಕರ್ ಮಾಲಕ ಸರಬರಾಜು ಮಾಡಲಾಗುತ್ತಿದೆ.
BREAKING: ಟೆಲಿಗ್ರಾಮ್ ಸ್ಥಾಪಕ ಡುರೊವ್ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ | Telegram founder Durov
ಬಿಜೆಪಿ ಕೇಂದ್ರ ಸರ್ಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿವರ್ತನೆ ಪರ್ವ ಆರಂಭ…!