ಶಿವಮೊಗ್ಗ : ಜನವರಿ.29, 2026ರ ನಾಳೆ ಸಂಜೆ 6.30ಕ್ಕೆ ಶಿವಮೊಗ್ಗ ರಂಗಾಯಣ ವತಿಯಿಂದ ಸಾಗರದ ಎಲ್.ಬಿ.ಕಾಲೇಜಿನ ದೇವರಾಜ ಅರಸು ಕಲಾಭವನದಲ್ಲಿ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಜ್ಞಾರಂಗ ತಂಡದ ಎಚ್.ಬಿ.ರಾಘವೇಂದ್ರ ತಿಳಿಸಿದ್ದಾರೆ. ನಾಟಕ ಪ್ರಿಯರು ತಪ್ಪದೇ ಆಗಮಿಸಿ, ವೀಕ್ಷಿಸುವಂತೆ ಅವರು ಮನವಿ ಮಾಡಿದ್ದಾರೆ.
ಮಂಗಳವಾರದಂದು ಶಿವಮೊಗ್ಗದ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಂಗಾಯಣ ನೇತೃತ್ವದಲ್ಲಿ ಪ್ರಜ್ಞಾರಂಗ ತಂಡ, ಮಲೆನಾಡು ಅಭಿವೃದ್ದಿ ಪ್ರತಿಷ್ಟಾನ, ರೈತ ಸಂಘದ ಸಹಯೋಗದಲ್ಲಿ ನಾಳೆ ನಮ್ಮೊಳಗೊಬ್ಬ ಗಾಂಧಿ ಉಚಿತ ನಾಟಕ ಪ್ರದರ್ಶನವಾಗುತ್ತಿದೆ. ಡಾ. ಡಿ.ಎಸ್.ಚೌಗಲೆ ರಚಿಸಿರುವ ನಾಟಕವನ್ನು ಚಿದಂಬರ ರಾವ್ ಜಂಬೆ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಓಂಕಾರ್ ಮೇಗಳಾಪುರ ಸಹ ನಿರ್ದೇಶನ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿಯವರು ಹಿಂಸೆಯನ್ನು ವಿರೋಧಿಸಿ ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖಪಾತ್ರ ವಹಿಸಿದವರು ಎಂದರು.
ಇತ್ತೀಚಿನ ವರ್ಷಗಳಲ್ಲಿ ಗಾಂಧೀಜಿಯವರ ಬಗ್ಗೆ ಸುಳ್ಳನ್ನು ಸೃಷ್ಟಿ ಮಾಡಿ ಗಾಂಧಿ ಅವರ ಕೊಡುಗೆಯನ್ನು ನೇಪಥ್ಯಕ್ಕೆ ಸರಿಯುವ ಪ್ರಯತ್ನ ನಡೆಯುತ್ತಿದೆ. ಯುವ ತಲೆಮಾರು ಗಾಂಧೀಜಿವರ ಕೊಡುಗೆಯನ್ನು ಅರ್ಥ ಮಾಡಿಕೊಳ್ಳಲೇ ಬೇಕಾದ ತುರ್ತು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಮ್ಮೊಳಗೊಬ್ಬ ಗಾಂಧಿ ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ. ಸುಮಾರು 10 ವರ್ಷಗಳ ಕಾಲ ಬ್ರಿಟೀಷರ ಸೆರೆವಾಸದಲ್ಲಿದ್ದು, ಉಪವಾಸ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ, ದಂಡಿ ಸತ್ಯಾಗ್ರಹದಂತಹವನ್ನು ನಡೆಸಿ ನಾಡನ್ನು ಸ್ವಾತಂತ್ರ್ಯಕ್ಕೆ ಸಜ್ಜಗೊಳಿಸಿದ ಮಹಾತ್ಮಾ ಗಾಂಧಿ ಅವರ ಕುರಿತು ಡಿ.ಎಸ್.ಚೌಗಲೆ ವಿಶೇಷವಾದ ಕೃತಿ ರಚಿಸಿದ್ದು, ಅದು ರಂಗಭೂಮಿ ಪ್ರದರ್ಶನ ಮೂಲಕ ಎಲ್ಲರನ್ನೂ ತಲುಪಬೇಕು ಎಂದರು
ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಮಾತನಾಡಿ, ನಮ್ಮೊಳಗೊಬ್ಬ ಗಾಂಧಿ 10-15 ಅಕರಗಳಿಂದ ಹೆಕ್ಕಿ ತೆಗೆದು ಅಕ್ಷರ ರೂಪ ನೀಡಲಾಗಿದೆ. ಡಾ. ಡಿ.ಎಸ್.ಚೌಗಲೆ ಅವರು ಗಾಂಧಿ ಅವರ ಹೆಜ್ಜೆಗುರುತು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂಸೆಗೆ ಅಹಿಂಸಾತ್ಮಕ ಹೋರಾಟದ ಮಾರ್ಗ ತೋರಿಸಿದ್ದು ಮಹಾತ್ಮ ಗಾಂಧಿಯವರು. ಮಹಾತ್ಮಾ ಗಾಂಧಿ ಎನ್ನುವುದು ಮೂರ್ತರೂಪ. ಅದನ್ನು ಯುವ ಪೀಳಿಗೆಗೆ ತಿಳಿಸಿ ಕೊಡಬೇಕಾಗಿದೆ. ನಮ್ಮೊಳಗೊಬ್ಬ ಗಾಂಧಿ ರಾಜ್ಯದ ಬೇರೆಬೇರೆ ಭಾಗದಲ್ಲಿ ೨೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ ಎಂದು ತಿಳಿಸಿದರು.
ನಾಳೆ ಸಂಜೆ 6.30ಕ್ಕೆ ನಮ್ಮೊಳಗೊಬ್ಬ ಗಾಂಧಿ ನಾಟಕ ಪ್ರದರ್ಶನ ಸಾಗರದ ಎಲ್ ಬಿ ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಶುರುವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು, ಗಾಂಧಿ ಅನುಯಾಯಿಗಳು ಆಗಮಿಸಿ, ನಾಟಕ ಪ್ರದರ್ಶನ ವೀಕ್ಷಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
ಈ ಗೋಷ್ಟಿಯಲ್ಲಿ ನಿರ್ದೇಶಕ ಚಿದಂಬರ ರಾವ್ ಜಂಬೆ, ಪ್ರಮುಖರಾದ ಶಿವಾನಂದ ಕುಗ್ವೆ, ಮನೋಜ್ ಕುಗ್ವೆ, ಸಂದೀಪ್, ಅಣ್ಣಪ್ಪ ಹಾಜರಿದ್ದರು.
BREAKING: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ಸ್ಪೋಟ: ಮಾಜಿ MLC ನಟ ಅಂಬರೀಶ್, HDK ವಿರುದ್ಧ ಅಶ್ಲೀಲ ಪದ ಬಳಕೆ
ಅಜಿತ್ ಪವಾರ್ ಇದ್ದ ವಿಮಾನ ಪಥನದ ಹಿಂದಿನ ಕಾರಣ ಬಿಚ್ಚಿಟ್ಟ DGCA: ಅದೇನು ಗೊತ್ತಾ? | Ajit Pawar plane crash
ನಾಳೆ ಬೆಳಗ್ಗೆ 11 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಜಿತ್ ಪವಾರ್ ಅಂತ್ಯಕ್ರಿಯೆ | Ajit Pawar plane crash








