Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ‘ಹಾಲು’ ಕುಡಿಯುತ್ತೀರಾ.? ಆರೋಗ್ಯ ತಜ್ಞರು ಹೇಳುವುದೇನು ಗೊತ್ತಾ.?

04/08/2025 10:10 PM

ಅಸಂಘಟಿತ ಕಾರ್ಮಿಕರ ಹಿತಕಾಯಲು ಸರ್ಕಾರ ಬದ್ಧ: ಸಚಿವ ಸಂತೋಷ್‌ ಲಾಡ್

04/08/2025 9:52 PM

ಒಂದೇ ಹಳ್ಳಿಯಲ್ಲಿ 47 ‘IAS, IPS ಅಧಿಕಾರಿ’ಗಳು.! ಪ್ರತಿ ಮನೆಯಲ್ಲೂ ಒಬ್ಬ ಅಧಿಕಾರಿ, ಇದು ಭಾರತದ ‘UPSC ವಿಲೇಜ್’

04/08/2025 9:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘X’ನಲ್ಲಿ #NammaBudget2024 ಪುಲ್ ಟ್ರೆಂಡಿಂಗ್: ಭಾರತದಲ್ಲಿ ನಂ.1 ‘ಹ್ಯಾಷ್ ಟ್ಯಾಗ್’ ಹೆಗ್ಗಳಿಕೆ
KARNATAKA

‘X’ನಲ್ಲಿ #NammaBudget2024 ಪುಲ್ ಟ್ರೆಂಡಿಂಗ್: ಭಾರತದಲ್ಲಿ ನಂ.1 ‘ಹ್ಯಾಷ್ ಟ್ಯಾಗ್’ ಹೆಗ್ಗಳಿಕೆ

By kannadanewsnow0916/02/2024 12:19 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಕರ್ನಾಟಕ ಬಜೆಟ್ 2024-25 ಮಂಡಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಅವರು ರಾಜ್ಯ ಬಜೆಟ್ ಮಂಡಿಸುತ್ತಿದ್ದರೇ ಎಕ್ಸ್ ನಲ್ಲಿ ನಮ್ಮ ಬಜೆಟ್ 2024 ( #NammaBudget2024 ) ಹ್ಯಾಷ್ ಟ್ಯಾಗ್ ಪುಲ್ ಟ್ರೆಂಡಿಂಗ್ ಆಗಿದೆ. ಭಾರತದಲ್ಲಿ ನಂಬರ್.1 ಹ್ಯಾಷ್ ಟ್ಯಾಗ್ ಹೆಗ್ಗಳಿಕೆ ಗಳಿಸಿದೆ.

ಇಂದು ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡಿಸಿ ಮಾತನಾಡಿದಂತ ಸಿಎಂ ಸಿದ್ಧರಾಮಯ್ಯ ಅವರು, ನಾನು 2024-25ನೇ ಸಾಲಿನ ಆಯವ್ಯಯವನ್ನು ಸದನದ ಮುಂದೆ ಮಂಡಿಸುತ್ತಿದ್ದೇನೆ.

ಭಾರತ ದೇಶ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸುಸಂದರ್ಭದಲ್ಲಿ ನನ್ನ 1೫ನೇ ಆಯವ್ಯಯವನ್ನು ಮಂಡಿಸಲು ಹರ್ಷಿಸುತ್ತೇನೆ. ಡಾ|| ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ರೂಪಿಸಿದ ಸಂವಿಧಾನದ ಆಶಯದಂತೆ ನ್ಯಾಯ, ಸಮಾನತೆ ಹಾಗೂ ಭ್ರಾತೃತ್ವದ ತಳಹದಿಯ ಮೇಲೆ ಕರ್ನಾಟಕ ಮಾದರಿ ಅಭಿವೃದ್ಧಿಯ ಹೊಸ ದೃಷ್ಟಾಂತವನ್ನು ರೂಪಿಸಲು ನಾವು ಹೆಜ್ಜೆಯಿಟ್ಟಿದ್ದೇವೆ ಎಂದರು.

ಸಾಮಾಜಿಕ ನ್ಯಾಯ ಎನ್ನುವುದು ನಮ್ಮ ನಂಬಿಕೆ ಮಾತ್ರವಲ್ಲ; ಅದು ಉದಾತ್ತ ಜೀವನ ದೃಷ್ಟಿಕೋನ. ಸಮ ಸಮಾಜ ನಿರ್ಮಾಣದಲ್ಲಿ ಬಸವಾದಿ ಶರಣರ ಕಾಯಕ ಮತ್ತು ದಾಸೋಹ ತತ್ವಗಳು ನಮಗೆ ಪ್ರೇರಣೆಯಾಗಿದೆ. ದುಡಿಮೆಯ ಒಂದು ಭಾಗವನ್ನು ದಾಸೋಹಕ್ಕೆ ಬಳಸಬೇಕೆಂಬ ಶರಣರ ಚಿಂತನೆ, ಸಮಾಜದಲ್ಲಿ ಸಂಪತ್ತಿನ ನ್ಯಾಯಯುತ ಹಂಚಿಕೆ ಮಾಡುವ ನಮ್ಮ ಆಶಯಕ್ಕೆ ಆಧಾರವಾಗಿದೆ ಎಂದರು.

ಆಗದು ಎಂದು; ಕೈಲಾಗದು ಎಂದು

ಕೈಕಟ್ಟಿ ಕುಳಿತರೆ

ಸಾಗದು ಕೆಲಸವು ಮುಂದೆ

ಮನಸೊಂದಿದ್ದರೆ ಮಾರ್ಗವು ಉಂಟು

ಕೆಚ್ಚೆದೆ ಇರಬೇಕೆಂದು

ವರನಟ ಡಾ|| ರಾಜ್‌ಕುಮಾರ್‌ ಅಭಿನಯದ ಹಾಗೂ ಆರ್.ಎನ್.ಜಯಗೋಪಾಲ್‌ ರಚಿಸಿದ ಬಂಗಾರದ ಮನುಷ್ಯ ಚಿತ್ರದ ಈ ಹಾಡಿನಂತೆ ದೇಶದ ಯಾವುದೇ ಸರ್ಕಾರ ಜಾರಿಗೊಳಿಸದ ಅತ್ಯಂತ ಬೃಹತ್‌ ಪ್ರಮಾಣದ ನೇರ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಶ್ರೇಯ ನಮ್ಮದಾಗಿದೆ. ನಮ್ಮ ಮಹತ್ವಾಕಾಂಕ್ಷೆಯ ಗ್ಯಾರಂಟಿಗಳು ಜನರ ಆಶೋತ್ತರಗಳನ್ನು ಆಧರಿಸಿವೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ನಮ್ಮ ಯುಪಿಎ ಸರ್ಕಾರವು ಜನರ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ವಾಸದ ಭದ್ರತೆಗಾಗಿ ವಿವಿಧ ಜನಕೇಂದ್ರಿತ ಯೋಜನೆಗಳು ಹಾಗೂ ಕಾನೂನುಗಳನ್ನು ರೂಪಿಸಿ ಬಡಜನರಿಗೆ ನ್ಯಾಯ ಒದಗಿಸುವ ಕಾರ್ಯಗಳನ್ನು ಕೈಗೊಂಡಿತ್ತು. ಆದರೆ, ಹಿಂದಿನ ೧೦ ವರ್ಷಗಳ ಅವಧಿಯಲ್ಲಿನ ಕೇಂದ್ರ ಸರ್ಕಾರದ ಜನವಿರೋಧಿ ನಿಲುವುಗಳಿಂದಾಗಿ  ಅಸಮಾನತೆ ಹೆಚ್ಚಳ, ಕೆಲವೇ ಜನರ ಬಳಿ ಸಂಪತ್ತಿನ ಶೇಖರಣೆ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಹೆಚ್ಚುತ್ತಿರುವ ಪ್ರಭಾವ ಮುಂತಾದ ಅನಪೇಕ್ಷಿತ ಬೆಳೆವಣಿಗೆಗಳಿಗೆ ಎಡೆ ಮಾಡಿದೆ ಎಂದರು.

ಅದಕ್ಕಾಗಿಯೇ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡ ಕೇಂದ್ರ ಸರ್ಕಾರ ಮಾಡದ ಕೆಲಸವನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ನಾವು ರೂಪಿಸಿದ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್‌ ಅಲ್ಲ. ಭಾರತ್‌ ಜೋಡೋ ಯಾತ್ರೆಯ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸಂಗ್ರಹಿಸಿದ ಜನಾಭಿಪ್ರಾಯದ ಫಲವಾಗಿದೆ. ಇದು ಉದ್ಯೋಗ ಸೃಜಿಸಿ, ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನವಾಗಿದೆ. ನಿಷ್ಪಕ್ಷಪಾತ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕಾಗಿ ಸಂಪತ್ತಿನ ಮರುಹಂಚಿಕೆ ಮಾಡುವ ಕಾರ್ಯಕ್ರಮಗಳು ಇವಾಗಿವೆ ಎಂದರು.

ಸರ್ವೋದಯ ದೃಷ್ಟಿ ಮತ್ತು ಸಮನ್ವಯ ದೃಷ್ಟಿ ಎಲ್ಲೆಲ್ಲೂ ತಾಂಡವವಾಡಬೇಕು. ಮತ ಮತಗಳಲ್ಲಿ, ಸಾಹಿತ್ಯ ಸಾಹಿತ್ಯಗಳಲ್ಲಿ ಸಮಾಜ ಸಮಾಜಗಳಲ್ಲಿ – ಅಷ್ಟೇ ಏಕೆ? ರಾಜಕೀಯ ಕ್ಷೇತ್ರದಲ್ಲಿ ಆರ್ಥಿಕ ಕ್ಷೇತ್ರದಲ್ಲಿ, ಸರ್ವತ್ರ ಅದು ವ್ಯಾಪಿಸಬೇಕು. ಅತ್ಯಂತ ಕೀಳಾದವನಿಗೂ ಮೇಲಾಗುವ ಅವಕಾಶವಾಗಬೇಕು. ಇವೆರಡನ್ನೂ ಒಳಗೊಂಡ ಆಧ್ಯಾತ್ಮಿಕ ದೃಷ್ಟಿಯೇ ಪೂರ್ಣದೃಷ್ಟಿ.             – ಕುವೆಂಪು

2024-25 ರಲ್ಲಿ 5೨,000 ಕೋಟಿ ರೂ. ಗಳನ್ನು ಐದು ಗ್ಯಾರಂಟಿಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಮೂಲಕ ಕೋಟ್ಯಾಂತರ ಜನರ ಕೈಗೆ ಹಂಚಿಕೆ ಮಾಡಲಾಗುತ್ತಿದೆ. ಈ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 5೦,000 ದಿಂದ  5,000 ರೂ. ಗಳನ್ನು ಒದಗಿಸಲಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಇಡೀ ಜಗತ್ತು ನಮ್ಮತ್ತ ಮೆಚ್ಚುಗೆಯ ನೋಟ ಬೀರಿದೆ. ಸಮಯ ಕಳೆದಂತೆ ಇದರ ಆರ್ಥಿಕ ಮತ್ತು ಸಾಮಾಜಿಕ ಅನುಕೂಲಗಳು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸಲಿವೆ. ಹಲವು ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ನಮ್ಮ ಕೆಲಸದ ಅಧ್ಯಯನ ನಡೆಸಿ, ಶ್ಲಾಘಿಸಿವೆ. ಆದರೆ ಗ್ಯಾರಂಟಿ ಯೋಜನೆಗಳ ಮೇಲಿನ ನನ್ನ ನಂಬಿಕೆ ದೃಢವಾಗಲು  ಕೇವಲ ಈ ಅಧ್ಯಯನಗಳಷ್ಟೇ ಕಾರಣವಲ್ಲ;  ಬಸ್‌ ಹತ್ತುವ ಮುನ್ನ ತಲೆಬಾಗಿ ನಮಸ್ಕರಿಸಿದ ಮಹಿಳೆಯ ಮುಖದಲ್ಲಿದ್ದ ಸಂತೋಷ, ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಲಕ್ಷಾಂತರ ಮಹಿಳೆಯರ ಪ್ರಾರ್ಥನೆ, ಯುವನಿಧಿಯಡಿ ನೆರವು ಪಡೆದ ನಿರುದ್ಯೋಗಿ ಯುವಕನ ಆನಂದಬಾಷ್ಪ- ಇವು ಗ್ಯಾರಂಟಿ ಯೋಜನೆಗಳ ಮೇಲಿನ ನನ್ನ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. ಅಭಿವೃದ್ಧಿಯ ಫಲವನ್ನು ಅದರ ಹಕ್ಕುದಾರರಾದ ಜನಸಾಮಾನ್ಯರಿಗೆ ಹಿಂತಿರುಗಿಸುವುದರಲ್ಲಿ ಅನನ್ಯವಾದ ಸಂತೃಪ್ತಿಯಿದೆ ಎಂದರು.

ಆದರೆ ವಿರೋಧಿಗಳು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಬಣ್ಣಿಸಿ ರಾಜ್ಯ ದಿವಾಳಿಯಾಗಿದೆ, ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ ಎಂದು ಸುಳ್ಳು ಸುದ್ದಿಗಳನ್ನು ಹರಡಿ ನಮ್ಮ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸಲಾಗದವರು ತಮ್ಮ ಹುಳುಕನ್ನು ಮುಚ್ಚಿಹಾಕಲು ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅವರ ಗ್ಯಾರಂಟಿಗಳೆಂದು ನಂಬಿಸಲು ಹೆಣಗಾಡುತ್ತಿರುವುದು ವಿಪರ್ಯಾಸ. ಇಂತಹ ಟೀಕೆಗಳಿಗೆ ನಾನಲ್ಲ; ಶರಣರೇ ಉತ್ತರ ನೀಡಿದ್ದಾರೆ ಎಂದರು.

BUDGET BREAKING: ‘ರಾಜ್ಯ ಬಜೆಟ್’ನಲ್ಲಿ ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ’ಗೆ ಬಂಫರ್ ಗಿಫ್ಟ್

‘ಫಾಸ್ಟ್ ಟ್ಯಾಗ್’ ಖರೀದಿಸುವ ’32 ಬ್ಯಾಂಕ್’ಗಳ ಪಟ್ಟಿಯಿಂದ ‘ಪೇಟಿಎಂ ಪೇಮೆಂಟ್ಸ್ ಬ್ಯಾಂಕ್’ ಔಟ್ | Paytm Payments Bank

Share. Facebook Twitter LinkedIn WhatsApp Email

Related Posts

ಅಸಂಘಟಿತ ಕಾರ್ಮಿಕರ ಹಿತಕಾಯಲು ಸರ್ಕಾರ ಬದ್ಧ: ಸಚಿವ ಸಂತೋಷ್‌ ಲಾಡ್

04/08/2025 9:52 PM3 Mins Read

ಹೈಕೋರ್ಟ್ ತಡೆಯಾಜ್ಞೆ ನೀಡಿದೆ, ಸಾರಿಗೆ ಮುಷ್ಕರದಲ್ಲಿ ಪಾಲ್ಗೊಳ್ಳಬೇಡಿ: ನೌಕರರಿಗೆ KSRTC, BMTC ಎಂಡಿ ಮನವಿ

04/08/2025 9:45 PM1 Min Read

ನಾಳೆ ಮುಷ್ಕರದಲ್ಲಿ ‘ಸಾರಿಗೆ ನೌಕರ’ರು ಪಾಲ್ಗೊಳ್ಳಬಾರದು: ‘KSRTC, BMTC ಎಂಡಿ’ ಮನವಿ

04/08/2025 8:34 PM1 Min Read
Recent News

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ‘ಹಾಲು’ ಕುಡಿಯುತ್ತೀರಾ.? ಆರೋಗ್ಯ ತಜ್ಞರು ಹೇಳುವುದೇನು ಗೊತ್ತಾ.?

04/08/2025 10:10 PM

ಅಸಂಘಟಿತ ಕಾರ್ಮಿಕರ ಹಿತಕಾಯಲು ಸರ್ಕಾರ ಬದ್ಧ: ಸಚಿವ ಸಂತೋಷ್‌ ಲಾಡ್

04/08/2025 9:52 PM

ಒಂದೇ ಹಳ್ಳಿಯಲ್ಲಿ 47 ‘IAS, IPS ಅಧಿಕಾರಿ’ಗಳು.! ಪ್ರತಿ ಮನೆಯಲ್ಲೂ ಒಬ್ಬ ಅಧಿಕಾರಿ, ಇದು ಭಾರತದ ‘UPSC ವಿಲೇಜ್’

04/08/2025 9:46 PM

ಹೈಕೋರ್ಟ್ ತಡೆಯಾಜ್ಞೆ ನೀಡಿದೆ, ಸಾರಿಗೆ ಮುಷ್ಕರದಲ್ಲಿ ಪಾಲ್ಗೊಳ್ಳಬೇಡಿ: ನೌಕರರಿಗೆ KSRTC, BMTC ಎಂಡಿ ಮನವಿ

04/08/2025 9:45 PM
State News
KARNATAKA

ಅಸಂಘಟಿತ ಕಾರ್ಮಿಕರ ಹಿತಕಾಯಲು ಸರ್ಕಾರ ಬದ್ಧ: ಸಚಿವ ಸಂತೋಷ್‌ ಲಾಡ್

By kannadanewsnow0904/08/2025 9:52 PM KARNATAKA 3 Mins Read

ಶಿವಮೊಗ್ಗ : ರಾಜ್ಯದಲ್ಲಿ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಹಿನ್ನೆಲೆಯಲ್ಲಿ ಸರ್ಕಾರವು ಈಗಾಗಲೇ ಅನೇಕ…

ಹೈಕೋರ್ಟ್ ತಡೆಯಾಜ್ಞೆ ನೀಡಿದೆ, ಸಾರಿಗೆ ಮುಷ್ಕರದಲ್ಲಿ ಪಾಲ್ಗೊಳ್ಳಬೇಡಿ: ನೌಕರರಿಗೆ KSRTC, BMTC ಎಂಡಿ ಮನವಿ

04/08/2025 9:45 PM

ನಾಳೆ ಮುಷ್ಕರದಲ್ಲಿ ‘ಸಾರಿಗೆ ನೌಕರ’ರು ಪಾಲ್ಗೊಳ್ಳಬಾರದು: ‘KSRTC, BMTC ಎಂಡಿ’ ಮನವಿ

04/08/2025 8:34 PM

ನಾಳೆ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ‘ಸಾರಿಗೆ ನೌಕರ’ರಿಗೆ ‘KSRTC ಎಂಡಿ ಅಕ್ರಂ ಪಾಷಾ’ ಮನವಿ

04/08/2025 8:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.