ಬೆಂಗಳೂರು: ರಾಜ್ಯದಲ್ಲಿ ಹೊಸ ಮೈಲುಗಲ್ಲನ್ನು ನಮ್ಮ ಮೆಟ್ರೋ ದಾಖಲಿಸಿದೆ. ಹಳದಿ ಮಾರ್ಗದ ರೈಲು ಸೇರ್ಪಡೆಯ ಬಳಿಕ 10.48 ಲಕ್ಷ ಮಂದಿ ಒಂದೇ ದಿನ ಪ್ರಯಾಣ ಮಾಡಿದ್ದಾರೆ.
‘ನಮ್ಮ ಮೆಟ್ರೊ’ದ ನೇರಳೆ, ಹಸಿರು ಹಾಗೂ ಹಳದಿ ಮಾರ್ಗದಲ್ಲಿ ಸೋಮವಾರ 10.48 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇದು ದಾಖಲೆಯಾಗಿದೆ. ಈ ಹಿಂದೆ 9.66 ಲಕ್ಷ (ಜೂನ್ 4) ಪ್ರಯಾಣಿಕರು ಪ್ರಯಾಣಿಸಿದ್ದು ದಾಖಲೆ ಆಗಿತ್ತು.
ಹಳದಿ ಮಾರ್ಗದ ಸೇರ್ಪಡೆಯಿಂದಾಗಿ ಒಂದೇ ದಿನದಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ನೇರಳೆ ಮಾರ್ಗದಲ್ಲಿ 4,51,816, ಹಸಿರು ಮಾರ್ಗದಲ್ಲಿ 2,91,677, ಹಳದಿ ಮಾರ್ಗದಲ್ಲಿ 52,215 ಮಂದಿ ಪ್ರಯಾಣಿಸಿದ್ದಾರೆ. 2,52,323 ಮಂದಿ ಒಂದು ಮಾರ್ಗದಿಂದ ಮತ್ತೊಂದು ಮಾರ್ಗಕ್ಕೆ (ಇಂಟರ್‌ಚೇಂಜ್) ಸಂಚಾರ ಬದಲಾಯಿಸಿದ್ದಾರೆ. ಒಟ್ಟು 10,48,031 ಮಂದಿ ಪ್ರಯಾಣಿಸಿದ್ದಾರೆ.
https://twitter.com/KarnatakaVarthe/status/1955621209590100363
ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ‘ಸಚಿವ ಪ್ರಿಯಾಂಕ್ ಖರ್ಗೆ’ ಸಾಧನೆ: ದೇಶದ 10 ಪ್ರಭಾವಿಶಾಲಿ ಗಣ್ಯರ ಸಾಲಿಗೆ ಸೇರ್ಪಡೆ
ರಾಸಾಯನಿಕ ಮಿಶ್ರಿತ ಶೇಂದಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ: ಸಚಿವ ಆರ್.ಬಿ ತಿಮ್ಮಾಪುರ