ಬೆಂಗಳೂರು: ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆಯ ನಡುವೆ ಆಗಸ್ಟ್.13ರ ಇಂದಿನಿಂದ ಆಗಸ್ಟ್.15ರವರೆಗೆ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಆ.13 ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದಿದೆ.
ನಾಗಸಂದ್ರದಿಂದ ಮಾದಾವರ (BIEC) ವರೆಗಿನ ರೀಚ್-3ರ ವಿಸ್ತ್ರತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಬೇಕಾಗಿರುವುದರಿಂದ, ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಮಯದಲ್ಲಿ ವ್ಯತ್ಯಯ ವಾಗಲಿದ್ದು ಇದರ ವಿವರ ಈ ಕೆಳಕಂಡಂತಿವೆ.
1. ದಿನಾಂಕ 13ನೇ ಆಗಸ್ಟ್ 2024 ರಂದು ಗಂಟೆಯವರೆಗೆ -ಕೊನೆಯ ರೈಲು ಸೇವೆ ರಾತ್ರಿ 11.00 ಕ್ಕೆ ಬದಲಾಗಿ 10.00 ಗಂಟೆಯವರೆಗೆ.
2. ದಿನಾಂಕ 14ನೇ ಆಗಸ್ಟ್ 2024 ರಂದು ಬೆಳಿಗ್ಗೆ 5.00 ಕ್ಕೆ ಬದಲಾಗಿ 06.00 ಕ್ಕೆ ಪ್ರಾರಂಭ ಮತ್ತು ಕೊನೆಯ ರೈಲು ಸೇವೆ ರಾತ್ರಿ 11.00 ಕ್ಕೆ ಬದಲಾಗಿ 10.00 ಗಂಟೆಯವರೆಗೆ.
3. ದಿನಾಂಕ 15ನೇ ಆಗಸ್ಟ್ 2024 ರಂದು ಬೆಳಿಗ್ಗೆ 5.00 ಕ್ಕೆ ಬದಲಾಗಿ 06.00 ಕ್ಕೆ ಪ್ರಾರಂಭ ನಾಗಸಂದ್ರ ನಿಲ್ದಾಣದಿಂದ ದಿನಾಂಕ 13 ಮತ್ತು 14ನೇ ಆಗಸ್ಟ್ 2024 ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಗಂಟೆಯ ಬದಲಾಗಿ 10.00 ಗಂಟೆಗೆ ಕೊನೆಗೊಳ್ಳುತ್ತದೆ. ದಿನಾಂಕ 14 ಮತ್ತು 15ನೇ ಆಗಸ್ಟ್ 2024 ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆಯು ಬೆಳಿಗ್ಗೆ 5.00 ಕ್ಕೆ ಬದಲಾಗಿ 06.00 ಕ್ಕೆ ಪ್ರಾರಂಭವಾಗುತ್ತದೆ ಎಂದಿದೆ.
ಆದಾಗ್ಯೂ, ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ದಿನಾಂಕ 13 ಮತ್ತು 14ನೇ ಆಗಸ್ಟ್ 2024 ರಂದು ರಾತ್ರಿ 11.12 ಗಂಟೆಯವರೆಗೆ ಕೊನೆಯ ರೈಲು ಸೇವೆ ಲಭ್ಯವಿರುತ್ತದೆ. ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು ದಿನಾಂಕ 14 ಮತ್ತು 15ನೇ ಆಗಸ್ಟ್ 2024 ರಂದು ಬೆಳಿಗ್ಗೆ 05.00 ಕ್ಕೆ ಪ್ರಾರಂಭವಾಗುತ್ತದೆ. ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ.
ಮಳೆಯಿಂದಾಗಿ ರಾಜ್ಯಾದ್ಯಂತ 80,000 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶ: ಸಚಿವ ಕೃಷ್ಣಭೈರೇಗೌಡ
ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಬಿಗ್ ಶಾಕ್: ‘ಸೆಪ್ಟೆಂಬರ್’ನಿಂದ ‘ಲ್ಯಾಂಡ್ ಬೀಟ್ ಆ್ಯಪ್’ ಆಧರಿಸಿ ತೆರವು ಆರಂಭ