Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಿನಕ್ಕೆ 50-80 ಬಾರಿ ಫೋನ್ ಚೆಕ್ ಮಾಡ್ತೀರಾ? ನಿಮ್ಮ ಏಕಾಗ್ರತೆ ಅಪಾಯದಲ್ಲಿದೆ ಎಚ್ಚರ

26/02/2026 8:57 AM

ರೈತರ ಪಾಲಿನ ‘ಹಸಿರು ಚಿನ್ನ’ : ಕೋಟಿ ಕೋಟಿ ಲಾಭ ತಂದುಕೊಡುತ್ತೆ ಈ ಕಲ್ಪವೃಕ್ಷ !

26/02/2026 8:52 AM

ಭಕ್ತರ ಮನದಲ್ಲಿ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ನಿಮಗೆ ಗೊತ್ತಾ….!!

26/02/2026 8:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ನಾಗಮಂಗಲ ಗಲಭೆ ಕೇಸ್: ಬಿಜೆಪಿ ಸತ್ಯ ಶೋಧನಾ ಸಮಿತಿಯಿಂದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ವರದಿ ಸಲ್ಲಿಕೆ
KARNATAKA

BIG NEWS: ನಾಗಮಂಗಲ ಗಲಭೆ ಕೇಸ್: ಬಿಜೆಪಿ ಸತ್ಯ ಶೋಧನಾ ಸಮಿತಿಯಿಂದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ವರದಿ ಸಲ್ಲಿಕೆ

By kannadanewsnow0920/09/2024 2:34 PM

ಬೆಂಗಳೂರು: ದೇಶದ್ರೋಹಿಗಳ ವಿರುದ್ಧ ರಾಜ್ಯ ಕಾಂಗ್ರೆಸ್ ಸರಕಾರದ ಮೃದು ಧೋರಣೆಯಿಂದ ಶಾಂತಿ- ಸುವ್ಯವಸ್ಥೆ ಕದಡುವ ಕೆಲಸ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.

ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಾಗಮಂಗಲ ಗಲಾಟೆ ಸಂಭದ ಸತ್ಯ ಶೋಧನಾ ಸಮಿತಿಯಿಂದ ವರದಿಯನ್ನು ಪಡೆದ ಬಳಿಕ ಮಾತನಾಡಿದ ಅವರು, ನಾಗಮಂಗಲ, ದಾವಣಗೆರೆ ಮತ್ತಿತರ ಕಡೆ ನಡೆದ ಗಲಭೆಗಳ ಕುರಿತು ನಿಮ್ಮ ನೇತೃತ್ವದಲ್ಲಿ ಸಮರ್ಪಕ ತನಿಖೆ ನಡೆಯಲು ಸಾಧ್ಯವಿಲ್ಲ. ಈ ಘಟನೆಗಳ ಬಗ್ಗೆ ಎನ್‍ಐಎ ಯಿಂದ ತನಿಖೆ ಆಗಬೇಕೆಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಬದಿಗಿಡಿ. ಎಲ್ಲ ಸಮಾಜದ ಜನರು ನೆಮ್ಮದಿಯಿಂದ ಬದುಕುವಂತಾಗಲು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಬದಿಗಿಟ್ಟು, ಎಲ್ಲ ಘಟನೆಗಳ ತನಿಖೆಯನ್ನು ಎನ್‍ಐಎಗೆ ಕೊಡಿ ಎಂದು ಒತ್ತಾಯಿಸಿದರು.

ಹಿಂದೂಗಳ ಮೇಲೆ ಬಲಾತ್ಕಾರ ಆಗುತ್ತಿದೆ. ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಪೊಲೀಸರ ಕಣ್ಮುಂದೆ ಇದೆಲ್ಲ ನಡೆದರೂ ಅವರು ಕಣ್ಮುಚ್ಚಿ ಕೂತಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಟೀಕಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಇದ್ದಾರೆ. ಇದೇ ಕಾರಣಕ್ಕೆ ಅಲ್ಪಸಂಖ್ಯಾತರು ರಾಜ್ಯದಲ್ಲಿ ಮೆರೆಯುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವಿಪಕ್ಷವಾದ ಬಿಜೆಪಿ ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕೆಂದು ಚರ್ಚಿಸಲಿದ್ದೇವೆ ಎಂದ ಅವರು, ರಾಜ್ಯದ ಅರಾಜಕತೆ ದಿನೇದಿನೇ ಹೆಚ್ಚಾಗಿದೆ. ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಒಂದಾದ ಮೇಲೆ ಒಂದರಂತೆ ದುರ್ಘಟನೆಗಳು ನಡೆಯುತ್ತಿವೆ. ನಾಗಮಂಗಲದಲ್ಲಿ ಆದ ದುರ್ಘಟನೆಯ ಬಳಿಕ ಪಾಂಡವಪುರದಲ್ಲಿ ಪೊಲೀಸರು ಏಕಾಏಕಿ ಸಂಘದ ಕಾರ್ಯಾಲಯಕ್ಕೆ ನುಗ್ಗಿ ದಬ್ಬಾಳಿಕೆ ಮಾಡಿದ್ದಾರೆ. ನಿನ್ನೆ ರಾತ್ರಿ ದಾವಣಗೆರೆಯಲ್ಲಿ ಘಟನೆ ನಡೆದಿದೆ. ಹಿಂದೂ ಯುವಕರು ಶಾಂತಿಯುತವಾಗಿ ಗಣಪತಿ ಮೆರವಣಿಗೆ ಮಾಡುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲಾಗಿದೆ ಎಂದು ಟೀಕಿಸಿದರು. ಪೊಲೀಸ್ ಅಧಿಕಾರಿಗಳಿಗೂ ಕಲ್ಲಿನ ಪೆಟ್ಟು ಬಿದ್ದಿದೆ ಎಂದರು.

ದಾವಣಗೆರೆ, ನಾಗಮಂಗಲ ಸೇರಿ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಘಟನಾವಳಿಗಳನ್ನು ಗಮನಿಸಿದರೆ ಈ ರಾಜ್ಯದಲ್ಲಿ ಚುನಾಯಿತ ಸರಕಾರ ಇದೆ; ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಇದೆ ಎಂಬುದೇ ಮರೆತುಹೋಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಇದೆ; ಪರಮೇಶ್ವರ್ ಅಂಥವರು ಗೃಹ ಸಚಿವರಾಗಿದ್ದಾರೆ. ಹಿಂದೂಗಳ ಮೇಲೆ ದಾಳಿ ಏನೇ ಆದರೂ ಅದನ್ನು ಸಣ್ಣ ಘಟನೆ ಎಂದು ರಾಜ್ಯ ಸರಕಾರ ಕೈಕಟ್ಟಿಕೊಂಡು ಕೂರುತ್ತದೆ ಎಂಬ ಧೈರ್ಯ- ವಿಶ್ವಾಸ ದೇಶದ್ರೋಹಿಗಳಲ್ಲಿದೆ ಎಂದು ವಿಶ್ಲೇಷಿಸಿದರು.

ಈಚೆಗೆ ನಾಗಮಂಗಲದಲ್ಲಿ ಹಿಂದೂ ಯುವಕರು ಗಣೇಶನ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಏಕಾಏಕಿ ಕತ್ತಿ, ತಳವಾರು ತೆಗೆದುಕೊಂಡು ಆ ಮೆರವಣಿಗೆ ಮೇಲೆ ದಾಳಿ ಮಾಡಿದ ಒಂದು ಕೋಮಿನ ಜನರು, ದೇಶದ್ರೋಹಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಹಿಂದೂಗಳ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡಿ, ಬಾಗಿಲು ಹಾಕಿದ್ದ ಅಂಗಡಿಗಳ ಬಾಗಿಲನ್ನು ಹಾರೆ ಉಪಯೋಗಿಸಿ ತೆಗೆದು ಬೆಂಕಿ ಹಚ್ಚಿ ಆಸ್ತಿಪಾಸ್ತಿ ನಷ್ಟ ಮಾಡಿದ್ದಾರೆ ಎಂದು ಆರೋಪಿಸಿದರು. ಪೊಲೀಸರ ಕಣ್ಮುಂದೆ ನಾಗಮಂಗಲದ ಈ ದುರ್ಘಟನೆ ನಡೆದಿದೆ ಎಂದು ಆಕ್ಷೇಪಿಸಿದರು.

ಘಟನೆಯ ಮಾರನೇ ದಿನ ನಾನು, ನಮ್ಮ ವಿಪಕ್ಷದ ನಾಯಕರು, ಪಕ್ಷದ ಮುಖಂಡರು ನಾಗಮಂಗಲಕ್ಕೆ ಭೇಟಿ ನೀಡಿದ್ದೇವೆ. ಪ್ರತ್ಯಕ್ಷವಾಗಿ ಎಲ್ಲರನ್ನೂ ಮಾತನಾಡಿಸಿದ್ದೇವೆ. ಬಿಜೆಪಿ ಸತ್ಯಶೋಧನಾ ಸಮಿತಿಯನ್ನು ನಂತರ ರಚಿಸಿದ್ದು, ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರ ನೇತೃತ್ವದಲ್ಲಿ ಕಳುಹಿಸಿ ಕೊಟ್ಟಿದ್ದೆವು. ಎಲ್ಲರನ್ನೂ ಭೇಟಿ ಮಾಡಿ ಸತ್ಯಾಸತ್ಯತೆ ಅರ್ಥ ಮಾಡಿಕೊಂಡು ದುರ್ಘಟನೆ ಕುರಿತು ಮಾಹಿತಿ ಪಡೆದಿದೆ. ಇದರ ಹಿಂದಿನ ವ್ಯವಸ್ಥಿತ ಪಿತೂರಿಯನ್ನು ತಿಳಿದುಕೊಂಡಿದ್ದಾರೆ. ವರದಿಯನ್ನು ನನಗೆ ಇವತ್ತು ಹಸ್ತಾಂತರ ಮಾಡಿದ್ದಾರೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ, ರಾಜ್ಯ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್ ಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಪಕ್ಷದ ಮುಖಂಡ ಭಾಸ್ಕರ್ ರಾವ್, ಮಂಡ್ಯ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

BIG NEWS : 3 ತಿಂಗಳಲ್ಲಿ ಪ್ರಪಂಚದ ವಿನಾಶ ಪ್ರಾರಂಭವಾಗುತ್ತದೆ : `ಬಾಬಾ ವಂಗಾ’ ಶಾಕಿಂಗ್ ಭವಿಷ್ಯವಾಣಿ!

BREAKING: ವಿಶ್ವವಿಖ್ಯಾತ ಮೈಸೂರು ದಸರಾವನ್ನು ಹಿರಿಯ ಸಾಹಿತಿ ಹಂ.ಪಾ ನಾಗರಾಜಯ್ಯ ಉದ್ಘಾಟನೆ: ಸಿಎಂ ಸಿದ್ಧರಾಮಯ್ಯ ಘೋಷಣೆ

Share. Facebook Twitter LinkedIn WhatsApp Email

Related Posts

ರೈತರ ಪಾಲಿನ ‘ಹಸಿರು ಚಿನ್ನ’ : ಕೋಟಿ ಕೋಟಿ ಲಾಭ ತಂದುಕೊಡುತ್ತೆ ಈ ಕಲ್ಪವೃಕ್ಷ !

26/02/2026 8:52 AM2 Mins Read

ಭಕ್ತರ ಮನದಲ್ಲಿ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ನಿಮಗೆ ಗೊತ್ತಾ….!!

26/02/2026 8:41 AM6 Mins Read
BREAKING NEWS

BREAKING : ಬೆಂಗಳೂರಲ್ಲಿ `CBI’ ತನಿಖೆಗೆ ಹೆದರಿ BBMP ನಿವೃತ್ತ ಇಂಜಿನಿಯರ್ ಆತ್ಮಹತ್ಯೆ !

26/02/2026 8:23 AM1 Min Read
Recent News

ದಿನಕ್ಕೆ 50-80 ಬಾರಿ ಫೋನ್ ಚೆಕ್ ಮಾಡ್ತೀರಾ? ನಿಮ್ಮ ಏಕಾಗ್ರತೆ ಅಪಾಯದಲ್ಲಿದೆ ಎಚ್ಚರ

26/02/2026 8:57 AM

ರೈತರ ಪಾಲಿನ ‘ಹಸಿರು ಚಿನ್ನ’ : ಕೋಟಿ ಕೋಟಿ ಲಾಭ ತಂದುಕೊಡುತ್ತೆ ಈ ಕಲ್ಪವೃಕ್ಷ !

26/02/2026 8:52 AM

ಭಕ್ತರ ಮನದಲ್ಲಿ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ನಿಮಗೆ ಗೊತ್ತಾ….!!

26/02/2026 8:41 AM

SHOCKING : ಬೆಚ್ಚಿ ಬೀಳೀಸೋ ಕೃತ್ಯ : ಅಳುತ್ತಿದ್ದ 2 ತಿಂಗಳ ಮಗುವನ್ನು ಒಲೆಗೆ ಹಾಕಿ ಸುಟ್ಟು ಕೊಂದ ಹೆತ್ತ ತಾಯಿ !

26/02/2026 8:39 AM
State News
KARNATAKA

ರೈತರ ಪಾಲಿನ ‘ಹಸಿರು ಚಿನ್ನ’ : ಕೋಟಿ ಕೋಟಿ ಲಾಭ ತಂದುಕೊಡುತ್ತೆ ಈ ಕಲ್ಪವೃಕ್ಷ !

By kannadanewsnow5726/02/2026 8:52 AM KARNATAKA 2 Mins Read

ಸಾಂಪ್ರದಾಯಿಕ ಕೃಷಿಯಲ್ಲಿ ಲಾಭ ಕಡಿಮೆಯಾಗುತ್ತಿದೆ, ಇತ್ತ ಸ್ಟಾಕ್ ಮಾರ್ಕೆಟ್‌ನಲ್ಲಿ ರಿಸ್ಕ್ ಹೆಚ್ಚಿದೆ. ಇವೆರಡರ ಮಧ್ಯೆ ಅತ್ಯಂತ ಕಡಿಮೆ ಅಪಾಯದಲ್ಲಿ ಕೋಟಿಗಳಷ್ಟು…

ಭಕ್ತರ ಮನದಲ್ಲಿ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ನಿಮಗೆ ಗೊತ್ತಾ….!!

26/02/2026 8:41 AM
BREAKING NEWS

BREAKING : ಬೆಂಗಳೂರಲ್ಲಿ `CBI’ ತನಿಖೆಗೆ ಹೆದರಿ BBMP ನಿವೃತ್ತ ಇಂಜಿನಿಯರ್ ಆತ್ಮಹತ್ಯೆ !

26/02/2026 8:23 AM

ಸಾರ್ವಜನಿಕರೇ ಗಮನಿಸಿ : ಹಾವು ಕಡಿದ ತಕ್ಷಣ ನಾಟಿ ವೈದ್ಯರ ಬಳಿ ಹೋಗದೇ ತಪ್ಪದೇ ಈ ಕೆಲಸ ಮಾಡಿ !

26/02/2026 8:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.