ಹಾವೇರಿ: ನಾಡು ಬಂಗಾರದ ಗಿಂಡಿಲೇ.. ನಾಡು ಸಿರಿಯಾಗಿಲತೇ ಪರಾಕ್ ಎಂಬುದಾಗಿ ಸುಕ್ಷೇತ್ರ ದೇವರಗುಡ್ಡದ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ. ಈ ವರ್ಷ ಮಳೆ, ಬೆಳೆ ಸಮೃದ್ಧಿಯಾಗಿ ಆಗಲಿದೆ ಎಂಬುದಾಗಿ ಕಾರ್ಣಿಕ ನುಡಿಯನ್ನು ವಿಶ್ಲೇಷಣೆ ಮಾಡಲಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದ ಕಾರ್ಣಿಕ ನುಡಿಯನ್ನು ವಿಜಯದಶಮಿ ಸಂದರ್ಭದಲ್ಲಿ ನುಡಿಯಲಾಗಿದೆ.
ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಭವಿಷ್ಯವಾಣಿಯನ್ನು ನುಡಿಯಲಾಗಿದೆ. ನಾಡಿನಾದ್ಯಂತ ಪ್ರಸಕ್ತ ವರ್ಷ ಮಳೆ, ಬೆಳೆ ಸಮೃದ್ಧವಾಗಿ ಬರಲಿದೆ. ಹಿಂಗಾರು ಬೆಳೆಗಳು ಸಮೃದ್ಧವಾಗಿ ಬರಲಿದೆ ಎಂದು ದೈವವಾಣಿಯನ್ನು ವಿಶ್ಲೇಷಣೆ ಮಾಡಲಾಗಿದೆ.
ಪ್ರಸ್ತುತ ವರ್ಷದ ದೈವವಾಣಿ ನುಡಿಯನ್ನು ನಾಗಪ್ಪ ಉರ್ಮಿ ಗೊರವಯ್ಯ ನುಡಿದಿದ್ದಾರೆ. 10 ಅಡಿ ಎತ್ತರದ ಬಿಲ್ಲನೇರಿ ಕಾರ್ಣಿಕ ನುಡಿಯನ್ನು ಗೊರವಯ್ಯ ಸ್ವಾಮಿ ನುಡಿದಿದ್ದಾರೆ.
ಅಂದಹಾಗೇ ಪ್ರತಿ ವರ್ಷ ವಿಜಯದಶಮಿಯಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ಗೊರವಯ್ಯ ಕಾರ್ಣಿಕ ನುಡಿ ನುಡಿಯಲಿದ್ದಾರೆ. ಆ ನುಡಿಯನ್ನು ವರ್ಷ ಭವಿಷ್ಯವಾಣಿ ಎಂದೇ ನಂಬಲಾಗಿದೆ. ಈ ಭವಿಷ್ಯವಾಣಿ ಕೇಳಲು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರ ದಂಡೆ ನೆರೆಯುತ್ತದೆ.
ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ(DA) ಹೆಚ್ಚಳದ ಬಗ್ಗೆ ಸಿಎಂ ಸಿದ್ಧರಾಮಯ್ಯ ಮಹತ್ವದ ಮಾಹಿತಿ