ನವದೆಹಲಿ: ಭಾರತದ ರೇಸ್ ವಾಕರ್ ಭಾವನಾ ಜಾಟ್ ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) 16 ತಿಂಗಳ ನಿಷೇಧ ಹೇರಿದೆ.
16 ತಿಂಗಳ ನಿಷೇಧವು ಆಗಸ್ಟ್ 10, 2023 ರಂದು ಅವರ ಆರಂಭಿಕ ಅಮಾನತು ದಿನಾಂಕದಿಂದ ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ 10, 2024 ರಂದು ಕೊನೆಗೊಳ್ಳುತ್ತದೆ ಎಂದು Olympics.com ತಿಳಿಸಿದೆ.
ಡೋಪಿಂಗ್ ವಿರೋಧಿ ಶಿಸ್ತು ಸಮಿತಿ (ADDP) ಜುಲೈ 10, 2024 ರಂದು ನಾಡಾ ನಿಯಮಗಳ ಆರ್ಟಿಕಲ್ 2.4 ರ ಅಡಿಯಲ್ಲಿ ಭಾವನಾ ಅವರನ್ನು ಅಮಾನತುಗೊಳಿಸುವ ನಿರ್ಧಾರವನ್ನ ತೆಗೆದುಕೊಂಡಿದ್ದರೂ, ಅದನ್ನು ಗುರುವಾರ ತಮ್ಮ ವೆಬ್ಸೈಟ್ನಲ್ಲಿ ಮಾತ್ರ ಪಟ್ಟಿ ಮಾಡಲಾಗಿದೆ.
ಹಂಗೇರಿಯ ಬುಡಾಪೆಸ್ಟ್’ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2023 ರಲ್ಲಿ ಸ್ಪರ್ಧಿಸದಂತೆ ಭಾವ್ನಾ ಅವರನ್ನ ನಾಡಾ ಕಳೆದ ವರ್ಷ ಆಗಸ್ಟ್’ನಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು.
ಪ್ರತಿ ವರ್ಷ, ತಮ್ಮ ಕ್ರೀಡೆಯಲ್ಲಿ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸುವ ಹಲವಾರು ಭಾರತೀಯ ಕ್ರೀಡಾಪಟುಗಳನ್ನು ನಾಡಾ ನೋಂದಾಯಿತ ಪರೀಕ್ಷಾ ಪೂಲ್ (RTP)ಗೆ ಆಯ್ಕೆ ಮಾಡುತ್ತದೆ, ಇದನ್ನು ತ್ರೈಮಾಸಿಕವಾಗಿ ಪರಿಶೀಲಿಸಲಾಗುತ್ತದೆ.