ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ಥಾಪಿಸಲು ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವಂತ ರಾಮ್ ಲಲ್ಲಾ ಪ್ರತಿಮೆ ಆಯ್ಕೆಗೊಂಡಿದೆ. ಈ ಮೂಲಕ ಕರುನಾಡಿನ ರಾಮ ಅಯೋಧ್ಯೆಯಲ್ಲಿ ಅಲಂಕರಿಸಲಿದ್ದಾರೆ.
ಈ ಕುರಿತಂತೆ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ಹಂಚಿಕೊಂಡಿದ್ದು, ಪ್ರಸಿದ್ಧ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರು ಕೃಷ್ಣ ಶಿಲಾದ ಮೇಲೆ ಕೆತ್ತಿದ ಮೂರ್ತಿಯನ್ನು ಭಗವಾನ್ ಶ್ರೀ ರಾಮ್ ಲಲ್ಲಾ ಸರ್ಕಾರ್ ನ ಶ್ರೀ ವಿಗ್ರಹ ಎಂದು ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದೆ.
कर्नाटक के प्रसिद्ध मूर्तिकार श्री अरुण योगीराज द्वारा कृष्णशिला पर निर्मित मूर्ति का चयन भगवान श्री रामलला सरकार के श्री विग्रह के रूप में प्रतिष्ठित होने हेतु किया गया है।
The Murti sculpted on Krishna Shila, by renowned sculptor Shri Arun Yogiraj, has been selected as Shri…
— Shri Ram Janmbhoomi Teerth Kshetra (@ShriRamTeerth) January 15, 2024
ಅಂದಹಾಗೇ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾನವು ಮಧ್ಯಾಹ್ನ 12.20ಕ್ಕೆ ಪ್ರಾರಂಭವಾಗಿ ಜನವರಿ 22 ರಂದು ಮಧ್ಯಾಹ್ನ 2 ಗಂಟೆಗೆ ಕೊನೆಗೊಳ್ಳುತ್ತದೆ. ಧಾರ್ಮಿಕ ಆಚರಣೆಗಳು ಜನವರಿ 16 ರಿಂದ ಪ್ರಾರಂಭವಾಗಿ ಜನವರಿ 21 ರವರೆಗೆ ನಡೆಯಲಿವೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಪ್ರಾಣ ಪ್ರತಿಷ್ಠಾಪನೆ ಮಾಡುವ ವಿಗ್ರಹವು ಸುಮಾರು 150-200 ಕೆಜಿ ತೂಕವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದೀಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವಂತ ರಾಮ್ ಲಲ್ಲಾ ಪ್ರತಿಮೆಯನ್ನು ಜನವರಿ 18 ರಂದು ವಿಗ್ರಹವನ್ನು ದೇವಾಲಯದ ‘ಗರ್ಭ ಗೃಹ’ದಲ್ಲಿ ಅದರ ಸ್ಥಾನದಲ್ಲಿ ಇರಿಸಲಾಗುತ್ತದೆ.
BREAKING: ಶೀಘ್ರವೇ ‘ನಿಗಮ ಮಂಡಳಿ ನೇಮಕ ಪಟ್ಟಿ’ ಪ್ರಕಟ – ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಣೆ