ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭಗೊಂಡಿದೆ. ಇದರ ನಡುವೆ ಅರಮನೆಯ ಖಾಸಗಿ ದರ್ಬಾರ್ ಗೆ ಪಟ್ಟದ ಆನೆ, ನಿಶಾನೆ ಆಯ್ಕೆ ಫೈನಲ್ ಮಾಡಲಾಗಿದೆ.
ಇಂದು ಮೈಸೂರಿನ ಅರಮನೆಯಲ್ಲಿ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಅವರು ಖಾಸಗಿ ದರ್ಬಾರ್ ಗೆ ಆಯ್ಕೆ ಮಾಡಿದ್ದಾರೆ. ಅರಮನೆಯ ಖಾಸಗಿ ದರ್ಬಾರ್ ಗೆ ಪಟ್ಟದ ಆನೆಯಾಗಿ ಕಂಜನ್, ನಿಶಾನೆ ಆನೆಯಾಗಿ ಭೀಮ ಆಯ್ಕೆ ಮಾಡಲಾಗಿದೆ ಎಂಬುದಾಗಿ ಮೈಸೂರಿನಲ್ಲಿ ಡಿಸಿಎಫ್ ಡಾ ಪ್ರಭುಗೌಡ ಮಾಹಿತಿ ನೀಡಿದ್ದಾರೆ.
ಖಾಸಗಿ ದರ್ಬಾರ್ ಗೆ ಇಂದು ಮಹಾರಾಣಿ ಪ್ರಮೋದ ದೇವಿ ಒಡೆಯರ್ ರವರು ಆನೆಗಳನ್ನ ವೀಕ್ಷಣೆ ಮಾಡಿದರು. ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇವೆ.
ಈಗಾಗಿ ಅರಮನೆಯಲ್ಲಿನ ಖಾಸಗಿ ದರ್ಬಾರ್ ಗೆ ಎರಡು ಆನೆಗಳನ್ನ ಮಹಾರಾಣಿಯವರು ಆಯ್ಕೆ ಮಾಡಿದ್ದಾರೆ ಎಂದರು.
ಕಂಜನ್ ಆನೆ ಪಟ್ಟದ ಆನೆಯಾಗಿದೆ. ಅರಮನೆಯ ಖಾಸಗಿ ದರ್ಬಾರ್ ಗೆ ನಿಶಾನೆ ಆನೆಯಾಗಿ ಭೀಮನನ್ನ ಆಯ್ಕೆ ಮಾಡಿದ್ದಾರೆ. ಶ್ರೀರಂಗಪಟ್ಟಣ ದಸರಾ ಆನೆ, ದಸರಾ ನಿಶಾನೆ ಆನೆ ಆಯ್ಕೆ ಮಾಡಬೇಕಿದೆ. ಈಗಾಗಲೇ ಎಲ್ಲಾ ಆನೆಗಳು ಉತ್ತಮವಾಗಿ ತಾಲಿಮು ನಡೆಸಿವೆ. ತಾಲಿಮಿನ ಬಳಿಕ ಆನೆಗಳಿಗೆ ಈಗ ಜವಾಬ್ದಾರಿ ನೀಡುವ ಸಮಯ ಆರಂಭವಾಗಿದೆ. ಇನ್ನೆರಡು ದಿನಗಳಲ್ಲಿ ಎಲ್ಲವು ಫೈನಲ್ ಆಗಲಿವೆ ಎಂಬುದಾಗಿ ಮೈಸೂರಿನಲ್ಲಿ ಡಿಸಿಎಫ್ ಡಾ.ಪ್ರಭುಗೌಡ ತಿಳಿಸಿದ್ದಾರೆ.
BREAKING: ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ‘ಉದಯ್ ಭಾನು ಚಿಬ್’ ನೇಮಕ
ತುಂಗಭದ್ರ ಜಲಾಶಯಕ್ಕೆ ಗೇಟ್ ಅಳವಡಿಸಿ 20 TMC ನೀರು ಉಳಿಸಿದ ತಜ್ಞರಿಗೆ ಧನ್ಯವಾದ ಅರ್ಪಿಸಿದ ಸಿಎಂ ಸಿದ್ಧರಾಮಯ್ಯ
ಇರಾನ್ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: 30 ಕಾರ್ಮಿಕರು ಸಾವು, ಹಲವರಿಗೆ ಗಾಯ | Iran coal mine blast