ಬೆಂಗಳೂರು: ಈ ಬಾರಿ 21 ದಿನಗಳ ಕಾಲ ದಸರಾ ವಿದ್ಯುತ್ ದೀಪಾಲಂಕಾರ ಆಯೋಜನೆ ಮಾಡಲಾಗುತ್ತಿದೆ. ದಸರಾ ಮುಗಿದ ಬಳಿಕವೂ ಹತ್ತು ದಿನ ವಿದ್ಯುತ್ ದೀಪಾಲಂಕಾರ ವಿಸ್ತರಣೆ ಮಾಡಲಾಗಿದೆ.
ಇಂದು ಮೈಸೂರಿನಲ್ಲಿ ಪೋಸ್ಟರ್ ಬಿಡುಗಡೆ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಮಾಹಿತಿ ನೀಡಿದಂತ ಅವರು, ಮೈಸೂರು ನಗರದ ಸುತ್ತಮುತ್ತ 130 ಕಿ ಮೀ ವಿದ್ಯುತ್ ದೀಪಾಲಂಕಾರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ವಿದ್ಯುತ್ ರಥ ಸ್ಥಬ್ದಚಿತ್ರ ಸಾಗಲಿದೆ ಎಂದರು.
ಅಕ್ಟೊಬರ್ 6, 7, 11, 12 ರಂದು ಡ್ರೋನ್ ಶೋ ಅಯೋಜನೆ ಮಾಡಲಾಗಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ 4 ದಿನಗಳ ಕಾಲ ಡ್ರೋನ್ ಶೋ ಆಯೋಜಿಸಲಾಗಿದೆ ಎಂದರು.
ಮೈಸೂರಿನ ಹಲವು ವೃತ್ತಗಳಲ್ಲಿ ಪ್ರಜಾಪ್ರಭುತ್ವ ಸಾಗಿ ಬಂದ ಹಾದಿ, ತಾಯಿ ಭುವನೇಶ್ವರಿ, ಸೋಮನಾಥೆಶ್ವರ ದೇವಾಲಯ, ಸಂವಿಧಾನ ಪ್ರಸ್ತಾವನೆ, ಮೈಸೂರಿನ ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಣಿ ಕೆಂಪನಂಜಮ್ಮಣಿ, ಜಯಚಾಮರಾಜೇಂದ್ರ ಒಡೆಯರ್, ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಪ್ರತಿಕೃತಿಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಬಾರಿಯ ದಸರಾಗೆ ವಿದ್ಯುತ್ ದೀಪಾಲಂಕಾರ ಮೆರುಗು ನೀಡಲಿದೆ ಎಂದರು.
ಮೈಸೂರು ದಸರಾ ಮಹೋತ್ಸವ: ಈ ಬಾರಿ ಎಂಟು ದಿನಗಳ ಕಾಲ ‘ಯುವ ಸಂಭ್ರಮ’ ಆಯೋಜನೆ | Mysuru Dasara
BREAKING : ಮಹಾಲಕ್ಷ್ಮಿ ಹಂತಕ ಬೆಂಗಳೂರಲ್ಲೇ ವಾಸವಿದ್ದ, ಶೀಘ್ರದಲ್ಲಿ ಬಂಧಿಸಲಾಗುತ್ತೆ : ಕಮಿಷನರ್ ಬಿ.ದಯಾನಂದ್