ಮೈಸೂರು: ಜಿಲ್ಲೆಯ ಹುಣಸೂರು ಪಟ್ಟಣದ ಪ್ರತಿಷ್ಠಿತ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜು ಇವರು ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮವನ್ನು Techno Tut Solutions LLP Mysore ಇವರ ಸಹಯೋಗದೊಂದಿಗೆ Full Stack Java, Learning and Development Skill ಎಂಬ ವಿಷಯಾಧಾರಿತ 10 ದಿನಗಳ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾದಂತಹ ಕೀರ್ತನಾ Technical trainer, ಪ್ರೀತಿ ಕಂಡಮ್ Soft Skills Trainer ಇವರುಗಳು ನಡೆಸಿಕೊಟ್ಟರು.
ಈ ವೇಳೆ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಆರೋಕ್ಯ ಮೇರಿರವರು ಪದವಿ ಶಿಕ್ಷಣ ಮುಗಿದ ನಂತರ ಎಷ್ಟೋ ವಿದ್ಯಾರ್ಥಿಗಳು ಉದ್ಯೋಗವನ್ನು ಹುಡುಕುತ್ತಾ ಹೊರಗೆ ಹೋಗುತ್ತಿದ್ದಾರೆ. ಆದ್ದರಿಂದ ಪದವಿ ಹಂತದಲ್ಲಿ ಮಕ್ಕಳಿಗೆ ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ನೀಡಿದರೆ ಮಕ್ಕಳಿಗೆ ಅದು ನೆರವಾಗುತ್ತದೆ ಎಂದರು.
ಎಲ್ಲಾ ಮಕ್ಕಳಿಗೂ ಉದ್ಯೋಗದ ಬಗ್ಗೆ ಮಾಹಿತಿಯನ್ನು ಹಾಗೂ ತರಬೇತಿಯನ್ನು ನೀಡುವುದು ಕಾಲೇಜಿನ ಕರ್ತವ್ಯವೆಂದು ನನ್ನ ಭಾವನೆ ಎಂದು ತಿಳಿಸಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥರಾದಂತಹ ಕುಮಾರಿ ತೇಜಾ ಎಚ್ ಆರ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದ ನಂತರ ಉದ್ಯೋಗವನ್ನು ಪಡೆಯಬೇಕಾಗುತ್ತದೆ. ಪ್ರಸ್ತುತ ಜಗತ್ತಿನಲ್ಲಿ ಉದ್ಯೋಗವನ್ನು ಪಡೆಯುವುದು ಸುಲಭವದ ಮಾತಲ್ಲ ಜೀವನವನ್ನು ನಡೆಸಲು ಉದ್ಯೋಗವು ಕಡ್ಡಾಯವಾಗಿ ಬೇಕೇ ಬೇಕು. ಆದ್ದರಿಂದ ಈ ಕಾರ್ಯಗಾರವನ್ನು ನಮ್ಮ ಪ್ರಾಂಶುಪಾಲರು ಆಯೋಜಿಸಿರುವುದು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಜ್ಞಾನ ವಿಭಾಗದ ಎಲ್ಲಾ ಸಹಾಯಕ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಮಹಿಳಾ ಕೂಲಿ ಕಾರ್ಮಿಕ ಆಸೆ ಈಡೇರಿಸಿದ ‘ರೈತ’
BREAKING: ಮೈಸೂರಲ್ಲಿ ‘CCL-2025 ಫೈನಲ್’ ಪಂದ್ಯಾವಳಿ: ನಟ ಕಿಚ್ಚ ಸುದೀಪ್ ಘೋಷಣೆ | CCL 2025 Match