ಕಲಬುರ್ಗಿ: ಅತ್ತೆ ಸೊಸೆಯರು ತಾಯಿ ಮಗಳಿದ್ದಂತೆ ಇರಬೇಕು. ಹಾಗೆ ಇದ್ದಾಗ ಮಾತ್ರ ಸಂಸಾರ ಚೆಂದವಾಗಿರುತ್ತದೆ ಅಂತ ಹಿರಿಯರು ಬುದ್ಧಿ ಹೇಳುತ್ತಾರೆ. ಆದರೇ ಇಲ್ಲೊಬ್ಬ ಸೊಸೆ ಮಾತ್ರ ನಮ್ಮ ಅತ್ತೆ ಬೇಗ ಸಾಯಬೇಕು ಅಂತ ದೇವಿಗೆ ನೋಟಿನಲ್ಲಿ ಹರಕೆ ಬರೆದು, ತೀರಿಸುವಂತೆ ಕೋರಿರೋದು ವೈರಲ್ ಆಗಿದೆ.
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದಲ್ಲಿರುವಂತ ಭಾಗ್ಯವಂತಿ ದೇವಿ ತುಂಬಾನೇ ಪ್ರಸಿದ್ಧ ದೇವಸ್ಥಾನ. ಈ ದೇವಾಲಯಕ್ಕೆ ಹಲವೆಡೆಯಿಂದ ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ತೀರಿಸುವಂತೆ ಭಾಗ್ಯವಂತಿ ದೇವಿಯನ್ನು ಕೋರೋದು ರೂಢಿ.
ಈ ದೇವಸ್ಥಾನಕ್ಕೆ ಬಂದಿರುವಂತ ಸೊಸೆಯೊಬ್ಬರು 20 ರೂಪಾಯಿಯ ನೋಟಿನ ಮೇಲೆ ತಾಯಿ ನಮ್ಮ ಅತ್ತೆ ಬೇಗ ಸಾಯಲಿ ತಾಯಿ ಅಂತ ಹರಕೆ ಬರೆದು ಹಾಕಿರೋದು ದೇವಸ್ಥಾನದ ಹುಂಡಿಯನ್ನು ತೆರೆದು ಕಾಣಿಕೆ ಏಣಿಸುವಂತ ಸಂದರ್ಭದಲ್ಲಿ ಪತ್ತೆಯಾಗಿದೆ.
20 ರೂಪಾಯಿ ನೋಟಿನ ಮೇಲೆ ಅತ್ತೆಯ ಬಗ್ಗೆ ಸೊಸೆ ಬರೆದಿರುವಂತ ಬರಹ ಕಂಡಂತ ದೇವಸ್ಥಾನದವರು ಅಚ್ಚರಿ ಪಟ್ಟಿದ್ದಾರೆ. ಈಗ ಈ ಪೋಟೋ ಎಲ್ಲೆಡೆ ವೈರಲ್ ಆಗಿದೆ. ಹೀಗೆ ಅತ್ತೆ ಸಾಯುವಂತೆ ಕೋರಿಕೊಂಡ ಆ ಸೊಸೆ ಯಾರು ಎಂಬುದು ಗೊತ್ತಾಗಿಲ್ಲ.
ಡಾ.ಮನಮೋಹನ್ ಸಿಂಗ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಹೆಚ್.ಡಿ.ಕುಮಾರಸ್ವಾಮಿ
BIG NEWS: ಶಾಸಕ ಮುನಿರತ್ನ ಅತ್ಯಾಚಾರ ಯತ್ನ, ಏಡ್ಸ್ ಹರಡುವುದಾಗಿ ಟ್ರ್ಯಾಪ್ ಮಾಡಿದ್ದು ನಿಜ: SIT ಚಾರ್ಜ್ ಶೀಟ್