Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING : ‘ಪ್ಲೀಸ್ ವೇಟ್‌ ಐ ವಿಲ್‌ ಕಾಲ್‌ ಯು’ : ಡಿಸಿಎಂ ಡಿಕೆಶಿಗೆ ರಾಹುಲ್ ಗಾಂಧಿ ಸಂದೇಶ..!

26/11/2025 11:28 AM

BREAKING : ಹುಟ್ಟೂರು ರಾಮದುರ್ಗಕ್ಕೆ `IAS’ ಅಧಿಕಾರಿ ಮಹಾಂತೇಶ್ ಬೀಳಗಿ ಪಾರ್ಥಿವ ಶರೀರ ರವಾನೆ : ಸಾರ್ವಜನಿಕರ ದರ್ಶನಕ್ಕೆ ಅವಕಾಶ.!

26/11/2025 11:26 AM

’26/11 ಮಾನವೀಯತೆಯ ಮೇಲಿನ ದಾಳಿ’: ಮುಂಬೈ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದ ಇಸ್ರೇಲ್ ರಾಯಭಾರಿ

26/11/2025 11:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ಮಠಗಳನ್ನು ಕಾಪಾಡಿಕೊಳ್ಳಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್
KARNATAKA

ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ಮಠಗಳನ್ನು ಕಾಪಾಡಿಕೊಳ್ಳಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

By kannadanewsnow0911/01/2025 4:11 PM

ಶೃಂಗೇರಿ : “ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ, ನಮ್ಮ ಮಠಗಳನ್ನು ಕಾಪಡಿಕೊಳ್ಳಬೇಕು. ಧರ್ಮ ಕಾಪಾಡುವ ಮಠಕ್ಕೆ ನಮ್ಮ ಕೈಲಾದ ನೆರವು ನೀಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳು ಸನ್ಯಾಸ ಸ್ವೀಕಾರ ಮಾಡಿ 50 ವರ್ಷಗಳು ಪೂರೈಸಿರುವ ಶುಭ ಸಂವತ್ಸರದ ಸಂದರ್ಭದಲ್ಲಿ ಶೃಂಗೇರಿಯಲ್ಲಿ ಶನಿವಾರ ಏರ್ಪಡಿಸಿದ್ದ “ಸುವರ್ಣ ಭಾರತೀ ಮಹೋತ್ಸವ” ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಭಾಗವಹಿಸಿ ಮಾತನಾಡಿದರು.

“ನಮ್ಮ ಹಿರಿಯರು, ಮನೆ ಹುಷಾರು, ಮಠ ಹುಷಾರು ಎಂದು ಹೇಳಿದ್ದಾರೆ. ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ನಮ್ಮ ಮಠಗಳನ್ನು ಕಾಪಾಡಿಕೊಳ್ಳಬೇಕು. ಇದು ನಮ್ಮೆಲ್ಲರ ಕರ್ತವ್ಯ. ನೀವು ಇಲ್ಲಿಗೆ ಬಂದು ಹಾಗೇ ಹೋಗಬೇಡಿ. ನೀವು ನೂರು ರೂಪಾಯಿ ಸಂಪಾದನೆ ಮಾಡಿದರೆ, ಒಂದು ರೂಪಾಯಿಯಾದರೂ ಧರ್ಮ ಉಳಿಸುವ ಮಠಕ್ಕೆ ನೀಡಬೇಕು. ಆಗ ಮಾತ್ರ ಮಠ ಉಳಿಯಲು ಸಾಧ್ಯ” ಎಂದು ಕರೆ ನೀಡಿದರು.

“ಪ್ರವಚನ ಕೇಳಿ ನೆಮ್ಮದಿ ಪಡೆಯಲು ಬಂದಿದ್ದೇನೆ”

“ಇಲ್ಲಿ ಧರ್ಮ ಕಾಪಾಡುವ ಸಾಗರವೇ ಸೇರಿದೆ. ಇದು ಭಾಗ್ಯ ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರ ದಾಸರ ಪದಗಳಂತೆ ಇಂತಹ ದೊಡ್ಡ ಭಕ್ತಿ ಸಾಗರದಲ್ಲಿ ವಿಧುಶೇಖರಭಾರತೀ ಮಹಾಸ್ವಾಮೀಜಿಗಳು ನೀಡಿರುವ ಪ್ರವಚನ ಕೇಳಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿ ಪಡೆದುಕೊಳ್ಳಲು ನಾನು ಭಾಗವಹಿಸಿರುವುದು ನನ್ನ ಭಾಗ್ಯವಾಗಿದೆ” ಎಂದರು.

“ಭಾರತೀತೀರ್ಥ ಮಹಾಸ್ವಾಮೀಜಿಗಳು ಸಮಾಜದಲ್ಲಿ ಧರ್ಮವನ್ನು ಉಳಿಸಲು ಸನ್ಯಾಸತ್ವ ಸ್ವೀಕರಿಸಿ 50 ವರ್ಷಗಳು ಪೂರೈಸಿವೆ. ಇವರು ಶಾರದ ಪೀಠದ 36ನೇ ಅಧ್ಯಕ್ಷರಾಗಿ ನಮ್ಮ ಕಣ್ಣಿಗೆ ದೇವರ ರೂಪದಲ್ಲಿ ಕಾಣುತ್ತಿದ್ದಾರೆ. ಅವರಲ್ಲಿ ನಾವು ಶಂಕರಚಾರ್ಯರನ್ನು ಕಾಣುತ್ತಿದ್ದೇವೆ. ವಿಧುಶೇಖರಭಾರತೀ ಸ್ವಾಮೀಜಿಗಳು ದೇಶ ಸುತ್ತಿ ನಮ್ಮ ಧರ್ಮ ಕಾಪಾಡಲು ಮಾರ್ಗದರ್ಶನ ನೀಡುತ್ತಿದ್ದಾರೆ” ಎಂದು ತಿಳಿಸಿದರು.

“ಇಲ್ಲಿಗೆ ಬಂದಾಗ ನನಗೆ ಶಾಲೆಯಲ್ಲಿ ಕಲಿತ ಶ್ಲೋಕ ನೆನಪಾಯಿತು. ವಿದ್ಯಾ ದದಾತಿ ವಿನಯಂ ವಿನಯಾ ದದಾತಿ ಪಾತ್ರತಾಂ। ಪಾತ್ರತ್ವಂ ಧನಮಾಪ್ನೋತಿ ಧನಧರ್ಮಂ ತತಃ ಸುಖಮ್. ಅಂದರೆ ಮನುಷ್ಯನಿಗೆ ವಿದ್ಯೆ ಇದ್ದರೆ ವಿನಯ ಬರುತ್ತದೆ. ವಿನಯವಿದ್ದರೆ ಯೋಗ್ಯತೆ ಬರುತ್ತದೆ. ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಪಡೆಯುತ್ತೇವೆ. ಅದರಂತೆ ಸುಖ ಪಡೆಯಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ನಮ್ಮ ಮನಸ್ಸಿನ ಶಾಂತಿ ಪಡೆಯಲು, ನಮ್ಮ ಕಷ್ಟಗಳ ನಿವಾರಣೆಗೆ ದೇವಾಲಯಕ್ಕೆ ಹೋಗುತ್ತೇವೆ. ಇಂತಹ ಪವಿತ್ರ ಶಾರದ ಪೀಠ ಸನ್ನಿದಿಯಲ್ಲಿ ನಾವೆಲ್ಲರೂ ಸೇರಿರುವುದು ನಮ್ಮ ಭಾಗ್ಯ” ಎಂದರು.

“ಇಲ್ಲಿ ಶ್ರೀಗಳು ಹೇಳಿಕೊಟ್ಟ ಪಾಠ ಕಲಿತು, ಅವರು ಹೇಳಿದ ಸ್ತೋತ್ರಗಳನ್ನು ಅರ್ಥ ಮಾಡಿಕೊಂಡು ಬದುಕಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ. ನಾನು ಇಲ್ಲಿಗೆ ಬಂದಾಗ ಶ್ರೀಗಳು ಮಾತನಾಡುತ್ತಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ, ವಿಶ್ವಕ್ಕೆ ಧರ್ಮದಿಂದ ಶಾಂತಿ ಸಿಗಲಿ ಎಂದು ಸಂದೇಶ ಸಾರಿದರು. ನಾನು ಗಂಟೆಗಟ್ಟಲೆ ಧರ್ಮದ ವಿಚಾರವಾಗಿ ಮಾತನಾಡಬಲ್ಲೆ. ನಮ್ಮ ಅನುಷ್ಠಾನ ಮಾಡುವಲ್ಲಿ ಮಠ ಕೆಲಸ ಮಾಡಿಕೊಂಡು ಬಂದಿದೆ” ಎಂದು ಹೇಳಿದರು.

ಭಾರತೀತೀರ್ಥ ಮಹಾಸ್ವಾಮಿಗಳ ಪವಾಡ ಕಣ್ಣಾರೆ ಕಂಡಿದ್ದೇನೆ

“ನಾನು ತಿರುಪತಿಗೆ ಹೋಗಿ ಮರಳುವಾಗ ನನ್ನ ಸ್ನೇಹಿತರು ಆದಿಕೇಶವಲು ಎಂಬುವವರ ಮನೆಗೆ ಭಾರತೀ ಶ್ರೀಗಳು ಹೋಗಿ ಅಲ್ಲಿ 2 ದಿನ ತಂಗಿದ್ದರು. ಅಲ್ಲಿ ದೇವಾಲಯದಲ್ಲಿ ಒಂದು ಹೂವಿನ ಹಾರ ಹಾಕಿದ್ದರು. 2 ದಿನಗಳ ನಂತರ ನಾನು ಕುಟುಂಬ ಸಮೇತರಾಗಿ ಹೋದಾಗ ಚಿತ್ತೂರಿನಲ್ಲಿ ಜನಸಾಗರವೇ ಸೇರಿತ್ತು. ಕಾರಣ ಅಲ್ಲಿ ಸ್ವಾಮೀಜಿಗಳು ಹಾಕಿದ್ದ ಹೂವಿನ ಹಾರ ಬೆಳೆಯುತ್ತಿತ್ತು. ಅದನ್ನು ನಾನು ಕಣ್ಣಾರೆ ಕಂಡಿದ್ದೆ. ಭಾರತೀ ಶ್ರೀಗಳ ಆ ಪವಾಡವನ್ನು ನಾನು ಕಣ್ಣಾರೆ ಕಂಡಿದ್ದೆ. ಅಷ್ಟು ದೊಡ್ಡ ಶಕ್ತಿ ಶಾರದ ಪೀಠದಲ್ಲಿದೆ” ಎಂದರು.

ವಿಧುಶೇಖರಭಾರತೀ ಸ್ವಾಮೀಜಿಗಳ ಪಾಂಡಿತ್ಯಕ್ಕೆ ಶರಣಾಗಿದ್ದೇನೆ

“ಯಾರ ಮಾತಿಗೂ ನಾವು ಅಂಜುವ ಅಗತ್ಯವಿಲ್ಲ. ನಾವು ಯಾರ ಅಣತಿಯಂತೆ ಇರುವುದು ಬೇಡ. ಯಾರನ್ನೂ ನಂಬಿ ನಾವು ಬದುಕುವುದು ಬೇಡ. ನಮ್ಮ ಜೀವನವನ್ನು ನಾವು ನಂಬೋಣ. ನಮ್ಮ ಧರ್ಮ, ದೇವರಲ್ಲಿ ವಿಶ್ವಾಸವಿಟ್ಟು ಬದುಕಿದಾಗ ಒಳ್ಳೆಯದಾಗುತ್ತದೆ. ಭಾರತೀ ಶ್ರೀಗಳು ಅನೇಕ ಶಿಷ್ಯಕೋಟಿಗಳನ್ನು ಬೆಳೆಸಿದ್ದಾರೆ, ವಿಧುಶೇಖರಭಾರತೀ ಸ್ವಾಮೀಜಿಗಳ ವಯಸ್ಸಿಗೆ ಅವರಲ್ಲಿರುವ ಪಾಂಡಿತ್ಯಕ್ಕೆ ನಾನು ಶರಣಾಗಿದ್ದೇನೆ. ಶ್ರೀಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಮುಂದಿನ ಐವತ್ತು ಅರವತ್ತು ವರ್ಷಗಳ ಕಾಲ ಈ ಮಠವನ್ನು ಇನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿ, ಧರ್ಮ ಕಾಪಾಡುವ ಕೆಲಸ ಮುಂದುವರಿಯಲಿ. ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಅದನ್ನು ಕಾಪಾಡುವ ಕೆಲಸ ಮಠದಿಂದ ಆಗಲಿ. ನಾನು ಕೂಡ ಶ್ರೀಗಳ ಭಕ್ತನಾಗಿ ಅವರ ಪಾದಗಳ ಮುಂದೆ ಕೂತಿದ್ದೇನೆ” ಎಂದರು.

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ‘ಸ್ವರ್ಣ ಪ್ರಾಶನ’ ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿಯೇ? ಇಲ್ಲಿದೆ ಮಾಹಿತಿ

BREAKING : 11 ಮಂದಿ `DYSP’ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ | DYSP Transfer

Share. Facebook Twitter LinkedIn WhatsApp Email

Related Posts

BIG BREAKING : ‘ಪ್ಲೀಸ್ ವೇಟ್‌ ಐ ವಿಲ್‌ ಕಾಲ್‌ ಯು’ : ಡಿಸಿಎಂ ಡಿಕೆಶಿಗೆ ರಾಹುಲ್ ಗಾಂಧಿ ಸಂದೇಶ..!

26/11/2025 11:28 AM1 Min Read

BREAKING : ಹುಟ್ಟೂರು ರಾಮದುರ್ಗಕ್ಕೆ `IAS’ ಅಧಿಕಾರಿ ಮಹಾಂತೇಶ್ ಬೀಳಗಿ ಪಾರ್ಥಿವ ಶರೀರ ರವಾನೆ : ಸಾರ್ವಜನಿಕರ ದರ್ಶನಕ್ಕೆ ಅವಕಾಶ.!

26/11/2025 11:26 AM1 Min Read

BREAKING : ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲು : ಜೈಲಲ್ಲೇ ತಯಾರಾಗ್ತಿದೆ ಕಳ್ಳಭಟ್ಟಿ!

26/11/2025 11:10 AM1 Min Read
Recent News

BIG BREAKING : ‘ಪ್ಲೀಸ್ ವೇಟ್‌ ಐ ವಿಲ್‌ ಕಾಲ್‌ ಯು’ : ಡಿಸಿಎಂ ಡಿಕೆಶಿಗೆ ರಾಹುಲ್ ಗಾಂಧಿ ಸಂದೇಶ..!

26/11/2025 11:28 AM

BREAKING : ಹುಟ್ಟೂರು ರಾಮದುರ್ಗಕ್ಕೆ `IAS’ ಅಧಿಕಾರಿ ಮಹಾಂತೇಶ್ ಬೀಳಗಿ ಪಾರ್ಥಿವ ಶರೀರ ರವಾನೆ : ಸಾರ್ವಜನಿಕರ ದರ್ಶನಕ್ಕೆ ಅವಕಾಶ.!

26/11/2025 11:26 AM

’26/11 ಮಾನವೀಯತೆಯ ಮೇಲಿನ ದಾಳಿ’: ಮುಂಬೈ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದ ಇಸ್ರೇಲ್ ರಾಯಭಾರಿ

26/11/2025 11:16 AM

BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 700 ಅಂಕ ಏರಿಕೆ, 26,100 ರ ಗಡಿ ದಾಟಿದ ‘ನಿಫ್ಟಿ’ |Share Market

26/11/2025 11:14 AM
State News
KARNATAKA

BIG BREAKING : ‘ಪ್ಲೀಸ್ ವೇಟ್‌ ಐ ವಿಲ್‌ ಕಾಲ್‌ ಯು’ : ಡಿಸಿಎಂ ಡಿಕೆಶಿಗೆ ರಾಹುಲ್ ಗಾಂಧಿ ಸಂದೇಶ..!

By kannadanewsnow0526/11/2025 11:28 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಭಾರಿ ಚರ್ಚೆ ನಡೆಯುತ್ತಿದ್ದು ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಸಿಎಂ ಸಿದ್ದರಾಮಯ್ಯ ಹಾಗು…

BREAKING : ಹುಟ್ಟೂರು ರಾಮದುರ್ಗಕ್ಕೆ `IAS’ ಅಧಿಕಾರಿ ಮಹಾಂತೇಶ್ ಬೀಳಗಿ ಪಾರ್ಥಿವ ಶರೀರ ರವಾನೆ : ಸಾರ್ವಜನಿಕರ ದರ್ಶನಕ್ಕೆ ಅವಕಾಶ.!

26/11/2025 11:26 AM

BREAKING : ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲು : ಜೈಲಲ್ಲೇ ತಯಾರಾಗ್ತಿದೆ ಕಳ್ಳಭಟ್ಟಿ!

26/11/2025 11:10 AM

BREAKING : ಪತಿಯ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆ : ಡೆತ್ ನೋಟ್ ಬರೆದಿಟ್ಟು, ಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ!

26/11/2025 10:44 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.