ಚಿತ್ರದುರ್ಗ: ಪೋಕ್ಸೋ ಕೇಸ್ ನಲ್ಲಿ ಪೊಲೀಸರಿಂದ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರನ್ನು ಬಂಧಿಸಲಾಗಿದೆ. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರನ್ನು ಕೋರ್ಟ್ ಸೆಪ್ಟೆಂಬರ್ 5ರವರೆಗೆ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ. ಹೀಗೆ ನ್ಯಾಯಾಧೀಶರು ಆದೇಶ ಮಾಡುತ್ತಿದ್ದಂತೆ ಕೋರ್ಟ್ ಕಟಕಟೆಯಲ್ಲಿ ನಿಂತಿದ್ದಂತ ಸ್ವಾಮೀಜಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

BIG BREAKING NEWS: ಸೆ.5ರವರೆಗೆ ‘ಮುರುಘಾ ಶರಣ’ರನ್ನು ‘ಪೊಲೀಸ್ ಕಸ್ಟಡಿ’ಗೆ ನೀಡಿ ಕೋರ್ಟ್ ಆದೇಶ | Murugha Matt Swamiji

ಇಬ್ಬರು ಬಾಲಕಿಯರು ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಮಾಡಿದ್ದರು. ಈ ಆರೋಪದಲ್ಲಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಅವರನ್ನು ಕಳೆದ ರಾತ್ರಿ ಬಂಧಿಸಿದ್ದರು. ಬಳಿಕ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

BIG BREAKING NEWS: ಅಫ್ಘಾನಿಸ್ತಾನದ ಮಸೀದಿಯಲ್ಲಿ ಭೀಕರ ಸ್ಫೋಟ: ಮೌಲ್ವಿ ಸೇರಿ 18ಕ್ಕೂ ಹೆಚ್ಚು ಜನರು ಸಾವು, ಹಲವರಿಗೆ ಗಾಯ | Afghan mosque blast

ಹೃದ್ರೋಗದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಮುರುಘಾ ಶ್ರೀಗಳನ್ನು ಇಂದು ಕೋರ್ಟ್ ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸುವಂತೆ ಸೂಚಿಸಿತ್ತು. ಹೀಗಾಗಿ ಜೈಲು ಅಧೀಕ್ಷಕರು ಅವರನ್ನು ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ ಕೋರ್ಟ್ ಗೆ ಹಾಜರುಪಡಿಸಿದ್ದರು.

BIGG NEWS: ಕಲಬುರ್ಗಿಯಲ್ಲಿ ಅಕ್ರಮವಾಗಿ ನಾಡಪಿಸ್ತೂಲ್‌ ಹೊಂದಿದ್ದ ನಾಲ್ವರ ಬಂಧನ

ನ್ಯಾಯಾಲಯಕ್ಕೆ ಆಗಮಿಸಿದಂತ ಮುರುಘಾ ಮಠದ ಡಾ.ಶಿವಮೂರ್ತಿ ಶಿವಮೂರ್ತಿ ಶಿವಶರಣರು ಆರಂಭದಲ್ಲಿ ಕಟಕಟೆಯಲ್ಲಿ ನಿಂತುಕೊಳ್ಳೋದಕ್ಕೆ ಹಿಂದೇಟು ಹಾಕಿದರು. ಆಗ ನ್ಯಾಯಮೂರ್ತಿಗಳು ಕೋರ್ಟ್ ಕಟಕಟೆಯಲ್ಲಿ ನಿಂತುಕೊಳ್ಳುವಂತೆ ಸೂಚಿಸಿದರು. ಕೋರ್ಟ್ ಕಟಕಟೆಯಲ್ಲಿ ನಿಂತುಕೊಂಡಂತ ಅವರ ವಿರುದ್ಧದ ಪ್ರಕರಣ ವಿಚಾರಣೆ ನಡೆಸಿದಂತ ನ್ಯಾಯಾಧೀಶರು ಪೊಲೀಸರ ಕೋರಿಕೆಯ ಮೇರೆಗೆ ಸೆಪ್ಟೆಂಬರ್ 5ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತು. ಈ ಆದೇಶ ಕೇಳಿದಂತ ಮುರುಘಾ ಶ್ರೀಗಳು ಕಟಕಟೆಯಲ್ಲೇ ಗಳಗಳ ಕಣ್ಣೀರಿಟ್ಟು ಕುಸಿದು ಬಿದ್ದರು ಎನ್ನಲಾಗಿದೆ.

Share.
Exit mobile version