ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಛತ್ತೀಸ್‌ಗಢದಲ್ಲಿ ಭಾಷಣ ಮಾಡುವಾಗ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಹೆಸರುಗಳನ್ನ ತಪ್ಪಾಗಿ ಉಚ್ಚರಿಸಿದ್ದು, ಅವರನ್ನ ಬಿಜೆಪಿ ಟೀಕಿಸಿದೆ. ರಾಯ್‌ಪುರದ ಸೈನ್ಸ್ ಮೈದಾನದಲ್ಲಿ ನಡೆದ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಖರ್ಗೆ ಅವರು ರಾಷ್ಟ್ರಪತಿಗಳನ್ನ ‘ಮುರ್ಮಾ ಜಿ’ ಎಂದು ಕರೆಯುವುದನ್ನ ಕೇಳಬಹುದು.
ಆದರೆ, ಅವ್ರು ತಕ್ಷಣ ತಮ್ಮನ್ನು ತಾನು ಸರಿಪಡಿಸಿಕೊಂಡು ‘ಮುರ್ಮು’ ಎಂದು ಹೇಳಿದರು. ಕೆಲವು ಸೆಕೆಂಡುಗಳ ನಂತ್ರ ಅವ್ರು ಮತ್ತೆ ತಪ್ಪು ಮಾಡಿದ್ದು, ಮಾಜಿ ರಾಷ್ಟ್ರಪತಿ ರಾಮನಾಥ್ ‘ಕೋವಿಂದ್’ ಅವ್ರ ಹೆಸರನ್ನ ‘ಕೋವಿಡ್’ ಎಂದು ಉಚ್ಚರಿಸಿದ್ದಾರೆ.
ಖರ್ಗೆ ಯಾವ ವಿಷಯದ ಕುರಿತು ಭಾಷಣ ಮಾಡುತ್ತಿದ್ದರು.?
ಛತ್ತೀಸ್‌ಗಢದ ಕಾಡುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮರಗಳನ್ನ ಕಡಿಯುವ ವಿಷಯದ ಕುರಿತು ಮಾತನಾಡುವಾಗ ಮಲ್ಲಿಕಾರ್ಜುನ ಖರ್ಗೆ ಈ ತಪ್ಪನ್ನ ಮಾಡಿದ್ದಾರೆ. ಬಿಜೆಪಿ ಮತ್ತು ಅದರ ‘ಕೈಗಾರಿಕಾ ಸ್ನೇಹಿತರು’ ಭೂಮಿಯನ್ನ ಕಬಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
“ನಮ್ಮ ನೀರು, ಅರಣ್ಯ ಮತ್ತು ಭೂಮಿಯನ್ನು ರಕ್ಷಿಸಬೇಕು ಮತ್ತು ಆದ್ದರಿಂದ ನಾವು ಒಗ್ಗಟ್ಟಿನಿಂದ ಇರಬೇಕು” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಅವರು (ಬಿಜೆಪಿ) ನಾವು (ದ್ರೌಪದಿ) ಮುರ್ಮಾ ಅವರನ್ನು ರಾಷ್ಟ್ರಪತಿಯನ್ನಾಗಿ, (ರಾಮ್ ನಾಥ್) ಕೋವಿಡ್ (ಕೋವಿಂದ್) ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ ಎಂದು ಹೇಳುತ್ತಾರೆ, ಆದರೆ ನಮ್ಮ ಸಂಪನ್ಮೂಲಗಳನ್ನು, ನಮ್ಮ ಅರಣ್ಯ, ನೀರು ಮತ್ತು ಭೂಮಿಯನ್ನು ಕದಿಯಲು ಏನು.? ಇಂದು, ಅದಾನಿ ಮತ್ತು ಅಂಬಾನಿಯಂತಹ ಜನರು ಅದನ್ನ ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿ ಇದನ್ನು ಬುಡಕಟ್ಟು ವಿರೋಧಿ ಎಂದು ಕರೆದಿದೆ.!
ಕಾಂಗ್ರೆಸ್ ಮುಖ್ಯಸ್ಥರ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಅವರ ಈ ತಪ್ಪನ್ನು “ಮಹಿಳಾ ವಿರೋಧಿ, ದಲಿತ ವಿರೋಧಿ ಮತ್ತು ಬುಡಕಟ್ಟು ವಿರೋಧಿ” ಎಂದು ಕರೆದಿದೆ. “ಕಾಂಗ್ರೆಸ್ ಅಧ್ಯಕ್ಷರು ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಪದಗಳನ್ನ ಬಳಸಿದ್ದಾರೆ. ಇಡೀ ಬುಡಕಟ್ಟು ಸಮುದಾಯ ಇದನ್ನು ಖಂಡಿಸುತ್ತಿದೆ. ಅವರು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೂ ಕೋವಿಡ್ ನಂತಹ ಪದಗಳನ್ನ ಬಳಸಿದ್ದಾರೆ” ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥರ ಈ ಹೇಳಿಕೆಯು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಬಗ್ಗೆ ಕಾಂಗ್ರೆಸ್’ನ ಆಳವಾದ ದ್ವೇಷವನ್ನ ಪ್ರತಿಬಿಂಬಿಸುತ್ತದೆ ಎಂದು ಶಹಜಾದ್ ಪೂನಾವಾಲಾ ಹೇಳಿದರು.
“ಕಾಂಗ್ರೆಸ್ ಅಧ್ಯಕ್ಷರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನ ಮುರ್ಮಾ ಜಿ, ಕೋವಿಡ್ ಜಿ ಎಂದು ಕರೆದು ನಂತರ ಅವರನ್ನ ಭೂಗಳ್ಳ ಎಂದು ಕರೆಯುವುದು ಕಾಂಗ್ರೆಸ್‌ನ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಬಗ್ಗೆ ಆಳವಾದ ದ್ವೇಷವನ್ನು ತೋರಿಸುತ್ತದೆ” ಎಂದು ಅವರು ಹೇಳಿದರು.
Kharge ji's venomous and diabolical attack on Presidents Murmu ji and Kovind ji exposes the dangerous deep rooted Dalit Virodhi mindset of the Congress party. For the Congress party not Dalit welfare but only Dynastic welfare has always been top priority.
Right from denying Dr.… pic.twitter.com/husj6YSkVz— C.R.Kesavan (@crkesavan) July 8, 2025
ಡಿಸಿಇಟಿ ಪರೀಕ್ಷೆ ಬರೆದಿದ್ದವರ ಗಮನಕ್ಕೆ: ಆಪ್ಷನ್ಸ್ ದಾಖಲಿಸಲು ದಿನಾಂಕ ವಿಸ್ತರಣೆ | DCET Exam 2025
‘CDSCO’ ಹೊಸ ಮಾರ್ಗಸೂಚಿ ; ಅವಧಿ ಮುಗಿದ ಈ ‘ಔಷಧಿ’ಗಳನ್ನ ಕಸದ ಬುಟ್ಟಿ ಬದಲಿಗೆ ಶೌಚಾಲಯಕ್ಕೆ ಹಾಕಿ, ಕಾರಣ ತಿಳಿಯಿರಿ!