ನವದೆಹಲಿ: ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ರದ್ದು ಕೋರಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಆರಂಭಗೊಂಡಿದೆ. ಸುಪ್ರೀಂ ಕೋರ್ಟ್ ನಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಸಿದ್ಧಾರ್ಥ್ ಲೂತ್ರಾ ಅವರು ವಾದ ಮಂಡನೆ ಮಾಡುತ್ತಿದ್ದಾರೆ. ಆ ಬಳಿಕ ವಾದ ಪ್ರತಿವಾದ ಆಲಿಸುವಂತ ಸುಪ್ರೀಂ ಕೋರ್ಟ್ ನಟ ದರ್ಶನ್ ಅಂಡ್ ಗ್ಯಾಂಗ್ ಜಾಮೀನು ಭವಿಷ್ಯ ನಿರ್ಧರಿಸಲಿದೆ.
ಇಂದು ಸುಪ್ರೀಂ ಕೋರ್ಟ್ ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜಾಮೀನು ಭವಿಷ್ಯದ ಕುರಿತಂತೆ ವಾದ ಆರಂಬಗೊಂಡಿದೆ. ಈ ವೇಳೆ ಕ್ರಾಂತಿ ಸಿನಿಮಾಗೆ ಈ ಶೆಡ್ ನಲ್ಲಿ ಶೂಟಿಂಗ್ ಮಾಡಲಾಗಿದೆ. ಇಬ್ಬರು ಪ್ರತ್ಯಕ್ಷದರ್ಶಿಗಳಿದ್ದಾರೆ ಎಂಬುದಾಗಿ ನ್ಯಾಯಾಧೀಶರು ತಿಳಿಸಿದರು.
ನಂಬಹುದೋ, ಇಲ್ಲವೋ ಅದನ್ನು ಟ್ರಯಲ್ ಕೋರ್ಟ್ ತೀರ್ಮಾನಿಸುತ್ತೆ. ಪ್ರತ್ಯಕ್ಷ ದರ್ಶಿಯ ಹೇಳಿಕೆಗೆ ಪೂರಕ ಸಾಕ್ಷ್ಯಗಳಿವೆಯೇ ಎಂಬುದಾಗಿ ನ್ಯಾಯಾಧೀಯರು ಪ್ರಶ್ನಿಸಿದರು. ಪೊರೆನ್ಸಿಕ್ ರಿಪೋರ್ಟ್ ನಲ್ಲಿ ಇರುವ ಗಾಯದ ಗುರುತು ಪೂರಕವಾಗಿವೆ. ಅಶೋಕ್ ಲೇಲ್ಯಾಂಡ್ ಪೋಟೋ ಇಂಪಾರ್ಟೆಂಟ್. ಈ ಘಟನೆ ಬಳಿಕ ದರ್ಶನ್ ಅದೇ ಜಾಗದಲ್ಲಿದ್ದ ಪೋಟೋ ಲಭ್ಯವಾಗಿದೆ. ಶೆಡ್ ನಲ್ಲಿ ದರ್ಶನ್ ಇದ್ದಿದ್ದಕ್ಕೆ ಪೂರಕವಾದ ಸಾಕ್ಷಿ ಇದು ಎಂಬುದಾಗಿ ಲೂತ್ರಾ ತಿಳಿಸಿದರು.
ಈ ಪ್ರಕರಣದಲ್ಲಿ ಪವಿತ್ರಾ ಆ ಸ್ನೇಹಿತರ ಬಳಿ ತಪ್ಪೊಪ್ಪಿಕೊಂಡಿದ್ದಾರೆಂದು ಇದೆ ಎಂಬುದಾಗಿ ಹೇಳಿದಾಗ, ಸಾಕ್ಷಿ ನಂಬರ್ 85, 86 ಹೇಳಿಕೆ ತೋರಿಸಿ ಎಂಬುದಾಗಿ ಜಡ್ಜ್ ಕೇಳಿದರು. ಈ ವೇಳೆ ಸಮಂತಾ ಹೇಳಿಕೆಯನ್ನು ಕೋರ್ಟ್ ಗೆ ಸಿದ್ಧಾರ್ಥ್ ಲೂತ್ರಾ ತೋರಿಸಿದರು.
ದರ್ಶನ್, ಪವಿತ್ರಾ ಮತ್ತು ತಮ್ಮ ನಡುವಿನ ಒಡನಾಟದ ವಿವಿರ ನೀಡಿರುವ ಸಮಂತಾ, ನಟ ದರ್ಶನ್ ಕರೆ ಮಾಡಿದ್ದ ಬಗ್ಗೆ ಆಕೆಗೆ ಪವಿತ್ರಾ ಗೌಡ ಹೇಳಿದ್ದಳು. ನಂತರ ರೇಣುಕಾಸ್ವಾಮಿಯನ್ನು ಶೆಡ್ ಗೆ ಕರೆತರುತ್ತಿದ್ದಾರೆಂದು ಹೇಳಿದ್ದಳು. ಇದು ಈ ಪ್ರಕರಣಕ್ಕೆ ಪೂರಕ ಸಾಕ್ಷ್ಯವಾಗಿದೆ ಎಂಬುದಾಗಿ ಸಿದ್ಧಾರ್ಥ್ ಲೂತ್ರಾ ಅವರು ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ತಿಳಿಸಿದರು.
ಸಮಂತಾಗೆ ಆರೋಪಿ ವಿನಯ್ ಕೇಳಿದ್ದ ಬಗ್ಗೆ ಹೇಳಿಕೆ ದಾಖಲಾಗಿದೆ. ವಿದೇಶಕ್ಕೆ ವಿಜಯಲಕ್ಷ್ಮೀ ಕರೆದೊಯ್ದಿದ್ದಕ್ಕೆ ಮುನಿಸಿಕೊಂಡಿದ್ದರು. ಕೊಲೆಗೆ ಸಂಬಂಧಿಸಿದಂತೆ ಪತಿಯಿಂದ ಸಹಾಯ ಸಿಗುತ್ತದೆಯೇ ಎಂದು ಕೇಳಿದ್ದ. ಸಮಂತಾಗೆ ಆರೋಪಿ ವಿನಯ್ ಕೇಳಿದ್ದ ಬಗ್ಗೆ ಹೇಳಿಕೆ ದಾಖಲಾಗಿದೆ. ಸಮಂತಾ ವೈದ್ಯ ಪತಿಯ ಹೇಳಿಕೆಯಲ್ಲೂ ಇದು ದಾಖಲಾಗಿದೆ. ರೇಣುಕಾಸ್ವಾಮಿಯ ದೇಹದ ಪೋಟೋವನ್ನು ಶೇರ್ ಮಾಡಿದ್ದರು ಎಂದು ಸುಪ್ರೀಂ ಕೋರ್ಟ್ ನಲ್ಲಿ ಪ್ರಾಸಿಕ್ಯೂಷನ್ ಪರ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸುತ್ತಿದ್ದಾರೆ.
BREAKING: ಸಾಗರದಲ್ಲಿ KSRTC- ಕ್ಯಾಂಟರ್ ನಡುವೆ ಭೀಕರ ಅಪಘಾತ: ಹಲವರಿಗೆ ಗಂಭೀರ ಗಾಯ
ಕಪ್ಪು ನಾಲಿಗೆಯನ್ನು ಹೊಂದಿರುವ ಯಾರಾದರೂ ನಿಮ್ಮನ್ನು ನಿಂದಿಸಿದರೆ, ಮೊದಲು ಇದನ್ನು ಮಾಡಿ, ಯಾವುದೇ ಸಮಸ್ಯೆ ಇರುವುದಿಲ್ಲ