ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ತಹವೂರ್ ಹುಸೇನ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಸಂಜೆ ಔಪಚಾರಿಕವಾಗಿ ಬಂಧಿಸಿದೆ. ಈ ಬೆನ್ನಲ್ಲೇ ಎನ್ಐಎ ವಶದಲ್ಲಿರುವಂತ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವೂರ್ ರಾಣಾ ಮೊದಲ ಪೋಟೋವನ್ನು ಬಿಡುಗಡೆ ಮಾಡಲಾಗಿದೆ.
ಅಮೆರಿಕದ ಲಾಸ್ ಏಂಜಲೀಸ್ನಿಂದ ವಿಶೇಷ ವಿಮಾನದಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎನ್ಎಸ್ಜಿ ಮತ್ತು ಎನ್ಐಎ ತಂಡಗಳು ರಾಣಾ ಅವರನ್ನು ನವದೆಹಲಿಗೆ ಕರೆದೊಯ್ದವು.
ವಿಮಾನ ನಿಲ್ದಾಣದಲ್ಲಿ ಎನ್ಐಎ ತನಿಖಾ ತಂಡವು ಪ್ರಾಥಮಿಕವಾಗಿ ಚಿಕಾಗೋ (ಯುಎಸ್) ನಲ್ಲಿ ವಾಸಿಸುತ್ತಿರುವ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾ ಅವರನ್ನು ವಿಮಾನದಿಂದ ಹೊರಬಂದ ಕೂಡಲೇ ಎಲ್ಲಾ ಅಗತ್ಯ ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಬಂಧಿಸಿದೆ.
ಇದೀಗ ಎನ್ಐಎ ವಶದಲ್ಲಿರುವಂತ ಮುಂಬೈ ದಾಳಿಯ ಮಾಸ್ಟರ್ ಮೈಡ್ ತಹವೂರ್ ಹುಸೇನ್ ರಾಣಾ ಅವರನ್ನು ಎನ್ಐಎ ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದೆ. ಆ ಬಳಿಕ ಕೋರ್ಟ್ ಯಾವ ಆದೇಶವನ್ನು ನೀಡಲಿದೆ ಎಂಬುದನ್ನು ಕಾದು ನೋಡಬೇಕು. ಅದಕ್ಕೂ ಮುನ್ನಾ ಎನ್ಐಎ ವಶದಲ್ಲಿರುವಂತ ತಹವೂರ್ ಹುಸೇನ್ ರಾಣಾ ಅವರ ಪೋಟೋವನ್ನು ಬಿಡುಗಡೆ ಮಾಡಲಾಗಿದೆ.
The National Investigation Agency (NIA) on Thursday evening formally arrested Tahawwur Hussain Rana, the key conspirator in the deadly 26/11 Mumbai terror attacks, immediately after his arrival at IGIA, New Delhi, following his successful extradition from the United States.… pic.twitter.com/Tg3GBrjbo5
— ANI (@ANI) April 10, 2025
ಫ್ಯಾಷನ್ ಪ್ರತಿಸ್ಪರ್ಧಿ ವೆರ್ಸೇಸ್ ಅನ್ನು ಸುಮಾರು 1.4 ಬಿಲಿಯನ್ ಡಾಲರ್ ಗೆ ಖರೀದಿಸಲಿದೆ ಪ್ರಾಡಾ
BREAKING: ಇನ್ಮುಂದೆ ಆರೋಗ್ಯ ಇಲಾಖೆಯಿಂದಲೇ ‘108 ಆ್ಯಂಬುಲೆನ್ ಸೇವೆ’ ನಿರ್ವಹಣೆ: ಸಚಿವ ದಿನೇಶ್ ಗುಂಡೂರಾವ್