ಬೆಂಗಳೂರು :ಮುಡಾ ಹಗರಣ ಒಬ್ಬ ಶಂಕಿತ ಕಳ್ಳ (ಚೆಲುವರಾಯಸ್ವಾಮಿ) ಇನ್ನೊಬ್ಬ ಶಂಕಿತ ಕಳ್ಳನಿಗೆ (ಸಿದ್ದರಾಮಯ್ಯನವರಿಗೆ) ಭರವಸೆ ನೀಡಿದ ಪ್ರಕರಣವಾಗಿದೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈವಾಡವಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ ವಿಪರ್ಯಾಸ. 2023ರ ಮೊದಲ ಕಾಂಗ್ರೆಸ್ ಭ್ರಷ್ಟಾಚಾರ ಹಗರಣವು ಚೆಲುವರಾಯಸ್ವಾಮಿ ಅವರ ಲಂಚದ ಆರೋಪವಾಗಿತ್ತು, ಇದರಲ್ಲಿ ಕರ್ನಾಟಕದ ರಾಜ್ಯಪಾಲರೂ (ಈ ಪ್ರಕರಣದಂತೆಯೇ) ಭಾಗಿಯಾಗಿದ್ದರು ಎಂದು ಆರೋಪಿಸಿದ್ದಾರೆ.
ಇದು ಒಬ್ಬ ಶಂಕಿತ ಕಳ್ಳ (ಚೆಲುವರಾಯಸ್ವಾಮಿ) ಇನ್ನೊಬ್ಬ ಶಂಕಿತ ಕಳ್ಳನಿಗೆ (ಸಿದ್ದರಾಮಯ್ಯನವರಿಗೆ) ಭರವಸೆ ನೀಡಿದ ಪ್ರಕರಣವಾಗಿದೆ ಎಂದಿದ್ದಾರೆ.