ಬೆಂಗಳೂರು: ಮುಡಾ ಹಗರಣದಲ್ಲಿ ಮೊದಲ ವಿಕೆಟ್ ಪತನವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ಹಾಗೂ ಹಾಲಿ ಹಾವೇರಿ ವಿವಿಯ ಕುಲಸಚಿವರಾಗಿದ್ದಂತ ಜಿ.ಟಿ ದಿನೇಶ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಜಿ.ಟಿ ದಿನೇಶ್ ಕುಮಾರ್, ಕೆಎಎಸ್ ಅಧಿಕಾರಿ, ಹಿಂದಿನ ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು. ಪ್ರಸ್ತುತ ಸ್ಥಳ ನಿರೀಕ್ಷೆಯಲ್ಲಿ ಇರುವ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತಿನಲ್ಲಿರಿಸಿ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
ಅಂದಹಾಗೇ, ಮುಡಾ ಹಗರಣದಲ್ಲಿ ದಿನೇಶ್ ಕುಮಾರ್ ಮೇಲೆ ಗಂಭೀರ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ, ಅವರನ್ನು ಹಾವೇರಿ ವಿವಿಯ ಕುಲಸಚಿವ ಹುದ್ದೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.
ಅಮಾನತು ಆದೇಶದಲ್ಲಿ ಏನಿದೆ.?
ನಗರಾಭಿವೃದ್ಧಿ ಇಲಾಖೆಯ ಕಡತದಲ್ಲಿ ಜಿ.ಟಿ.ದಿನೇಶ್ ಕುಮಾರ್, ಕೆ.ಎ.ಎಸ್. (ಸೂ.ಟೈಂ.ಸ್ಕೆ), ಹಿಂದಿನ ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಇವರು ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಎಸಗಿರುವ ಗಂಭೀರ ಆರೋಪಗಳ ಸಂಬಂಧ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದ್ದು, ಸದರಿ ತಾಂತ್ರಿಕ ಸಮಿತಿಯು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಿ, ಕಡತಗಳನ್ನು ಪರಿಶೀಲಿಸಿ, ಕಾಯ್ದೆ / ನಿಯಮ / ವಲಯ ನಿಯಮಾವಳಿ / ಸರ್ಕಾರದ ಆದೇಶ / ಸರ್ಕಾರದ ಸುತ್ತೋಲೆ ಮತ್ತು ಮಾರ್ಗಸೂಚಿಗಳನ್ನು ಪರಿಶೀಲಿಸಿ ವ್ಯತಿರಿಕ್ತ / ನಿಯಮ ಬಾಹಿರವಾಗಿ ಕೈಗೊಂಡಿರುವ ಕ್ರಮಗಳ ಕುರಿತು ವಿಸ್ತ್ರತ ವರದಿಯನ್ನು ಸಲ್ಲಿಸಲಾಗಿರುತ್ತದೆ.
ಸದರಿ ವರದಿಯಲ್ಲಿನ ಅಂಶಗಳನ್ನು ಪರಿಶೀಲಿಸಿದಾಗ ಈ ಕೆಳಕಂಡ ಅಂಶಗಳು ಕಂಡುಬಂದಿರುತ್ತವೆ.
1. KUDA ಕಾಯ್ದೆ ಕಲಂ 13(1)ರಲ್ಲಿ ಪ್ರಾಧಿಕಾರದ ಆಯುಕ್ತರು, ಮುಖ್ಯ ಕಾರ್ಯನಿರ್ವಹಣಾ ಮತ್ತು ಆಡಳಿತಾಧಿಕಾರಿಯಾಗಿದ್ದು, ಸಭೆಗೆ ಮಂಡಿಸಲಾದ ಬಹುತೇಕ ವಿಷಯಗಳಲ್ಲಿ ಸ್ಪಷ್ಟ ಅಭಿಪ್ರಾಯವನ್ನು ಟಿಪ್ಪಣಿಯಲ್ಲಿ ದಾಖಲಿಸಿ ಮಂಡಿಸದೇ ಇರುವುದು ಮತ್ತು ಸರ್ಕಾರದಿಂದ ನೀಡಲಾದ ನಿರ್ದೇಶನಗಳ ಪಾಲನೆಯಾಗುತ್ತಿಲ್ಲದಿರುವುದನ್ನು ಗಮನಿಸಲಾಗಿದ್ದು, ಸರ್ಕಾರವು ನೀಡುವ ಯಾವುದೇ ನಿರ್ದೇಶನಗಳನ್ನು ಪಾಲಿಸುವುದು KUDA ಕಾಯ್ದೆ ಕಲಂ 65ರನ್ವಯ ಪ್ರಾಧಿಕಾರದ ಜವಾಬ್ದಾರಿಯಾಗಿದ್ದು, ನಿಯಮಗಳಿಗೆ ಮತ್ತು ಸರ್ಕಾರದ ನಿರ್ದೇಶನಗಳಿಗೆ ವ್ಯತಿರಿಕ್ತವಾಗಿ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸುತ್ತಿರುವುದು ಮತ್ತು ಅದರಂತೆ ಕ್ರಮವಹಿಸುತ್ತಿರುವುದು ಕಂಡು ಬಂದಿರುತ್ತದೆ.
2. ಪ್ರಾಧಿಕಾರದಿಂದ ಕೈಗೊಂಡಿರುವ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆ ಸಂಖ್ಯೆ: ನಅಇ 125 ಗುಅ ಪ್ರಾ 2001, ದಿನಾಂಕ: 22.05.2003ರಲ್ಲಿ ರಾಜ್ಯದಲ್ಲಿಯ ನಗರಾಭಿವೃದ್ಧಿ ಪ್ರಾಧಿಕಾರಗಳು ಹಮ್ಮಿಕೊಳ್ಳುತ್ತಿರುವ ವಸತಿ ಯೋಜನೆಗಳಿಗೆ ಸರ್ಕಾರದಿಂದ ಅನುಮೋದನೆ ಪಡೆಯುವ ಪೂರ್ವದಲ್ಲಿ ಅನುಸರಿಸಬೇಕಾದ ವಿಧಿ ವಿಧಾನಗಳ ಕುರಿತು ಸೂಚನೆ ನೀಡಲಾಗಿದೆ. ಅದರನುಸಾರ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಭೂಸ್ವಾಧೀನಪಡಿಸಿಕೊಳ್ಳಲು ಪಸ್ತಾಪಿಸಿರುವ ಒಟ್ಟಾರೆ ಪ್ರದೇಶಕ್ಕೆ ವಿನ್ಯಾಸ ನಕ್ಷೆಯನ್ನು ತಯಾರಿಸಿ ಉದ್ಯಾನವನ (ಕನಿಷ್ಠ 15%) ಮತ್ತು ನಾಗರಿಕ ಸೌಲಭ್ಯ (ಕನಿಷ್ಠ 10%) ಕಾಯ್ದಿರಿಸಿದ ನಂತರ De-notify ಆದ ಅಥವಾ ಕೈಬಿಟ್ಟ ಜಮೀನುಗಳು ಮತ್ತು ಇನ್ನಿತರ ಕಾರಣಗಳಿಂದ ಯೋಜನೆಯಿಂದ ಕೈಬಿಡಲಾದ ಪ್ರದೇಶಗಳನ್ನು ಹೂರತುಪಡಿಸಿ ಅಭಿವೃದ್ಧಿ ಯೋಜನೆವಾರು ಪ್ರತ್ಯೇಕವಾಗಿ ವಿನ್ಯಾಸ ನಕ್ಷೆಯನ್ನು ಸ್ಥಳದಲ್ಲಿ ಅನುಷ್ಠಾನಗೊಳಿಸಿದಂತೆ ಸಿದ್ಧಪಡಿಸಿ ಅಧಿಕೃತವಾಗಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವುದು ಕಂಡುಬಂದಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಉದ್ಯಾನವನ ಮತ್ತು ನಾಗರಿಕ ಸೌಲಭ್ಯ ಜಾಗಗಳಿಗೆ ಕಾಯ್ದಿರಿಸಿದಂತಹ ಪ್ರದೇಶವನ್ನು ಕಾರಣಾಂತರಗಳಿಂದ ಭೂಸ್ವಾಧೀನದಿಂದ ಕೈಬಿಟ್ಟಿರುವುದರಿಂದ ವಸತಿ ಅಭಿವೃದ್ಧಿ ಯೋಜನೆಯಲ್ಲಿ ಅಂತಹ ಸಾರ್ವಜನಿಕ ಪುದೇಶಗಳು ಕಲಂ 16(d)ರ ಅವಕಾಶದನ್ವಯ ತಾಳೆಯಾಗುವುದೇ? ಇಲ್ಲವೇ? ಎಂಬುದನ್ನು ಪರಿಶೀಲಿಸಿಕೊಳ್ಳಲು ದೃಢೀಕೃತ ವಿನ್ಯಾಸ ನಕ್ಷೆ ಲಭ್ಯವಿಲ್ಲದಿರುವ ಕಾರಣ KUDA ಕಾಯ್ದೆ ಕಲಂ 16(d) ರ ಅವಕಾಶವನ್ನು ಉದ್ಯಾನವನಕ್ಕೆ ಮತ್ತು ಕನಿಷ್ಠ ಶೇ.10ರಷ್ಟು ನಾಗರಿಕ ಸೌಲಭ್ಯ ನಿವೇಶನ ಕಾಯ್ದಿರಿಸಿರುವ ಬಗ್ಗೆ ಪರಿಶೀಲಿಸಿಕೊಂಡಿರುವುದು ಕಂಡುಬಂದಿರುವುದಿಲ್ಲ.
3. KUDA ಕಾಯ್ದೆಯಲ್ಲಿ ಪ್ರಾಧಿಕಾರವು ಅಭಿವೃದ್ಧಿ ಯೋಜನೆ (Development Scheme) ಪ್ರದೇಶದ ಹೊರಗೆ ನಿಯಮಾನುಸಾರ ಭೂಸ್ವಾಧೀನಪಡಿಸಿಕೊಳ್ಳದೇ ಕಲಂ 15 ರಿಂದ 18ರನ್ವಯ ಸರ್ಕಾರದಿಂದ ಪೂರ್ವಾನುಮೋದನೆ ಪಡೆಯದೇ ಅಕ್ಕಪಕ್ಕದ ಜಮೀನುಗಳಲ್ಲಿ ಕಾಮಗಾರಿಗಳನ್ನು ಕೈಗೊಂಡಿರುವುದಾಗಿ ತಾಂತ್ರಿಕ ಶಾಖೆಯಿಂದ ನೀಡುವ ವರದಿ ಆಧಾರದ ಮೇಲೆ ಬದಲಿ ನಿವೇಶನ ಮಂಜೂರಾತಿಗಾಗಿ ನಿಯಮಬಾಹಿರವಾಗಿ ಅಧಿಕಾರಿಗಳು ಶಿಫಾರಸ್ಸು ಮಾಡಿ ಕ್ರಮವಹಿಸುತ್ತಿರುವುದು. ಅಭಿವೃದ್ಧಿಪಡಿಸಿದ ಹಳೇ ಬಡಾವಣೆಗಳಲ್ಲಿ ಭೂಸ್ವಾಧೀನಪಡಿಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಿ ನಿವೇಶನಗಳ ಹಂಚಿಕೆಯನ್ನು ಪೂರ್ಣಗೊಳಿಸಿದ ಎಷ್ಟೋ ವರ್ಷಗಳ ನಂತರ ಭೂ ಪರಿಹಾರ ಮೊತ್ತ ನೀಡಿರುವ ಬಗ್ಗೆ ಮಾಹಿತಿ ಇರುವುದಿಲ್ಲವೆಂದು / ಕಡತಗಳು ನಿಯಮಬಾಹಿರವಾಗಿ ಅಧಿಕಾರಿಗಳು ಶಿಫಾರಸ್ಸು ಮಾಡಿ ಕ್ರಮವಹಿಸುತ್ತಿರುವುದು.
KUDA (Allotment of sites) Rules 1997 ರನ್ವಯ ನಿವೇಶನ ಹಂಚಿಕೆಯಾಗಿ ಸ್ವಾಧಿನಕ್ಕೆ ತೆಗೆದುಕೊಂಡು ಗುತ್ತಿಗೆ ಕಯ / ಕಯವಾದ ನಂತರ ನಿಯಮ 16ರ ಪುಸಂಗಗಳನ್ನು ಹೊರತುಪಡಿಸಿ ಪುಕರಣಗಳಲ್ಲಿ ಸದರಿ ನಿಯಮ ಉಲ್ಲಂಘಿಸಿ ಬದಲಿ ನಿವೇಶನ ಮಂಜೂರಾತಿಗಾಗಿ ನಿಯಮಬಾಹಿರವಾಗಿ ಅಧಿಕಾರಿಗಳು ಶಿಫಾರಸ್ಸು ಮಾಡಿ ಕ್ರಮವಹಿಸುತ್ತಿರುವುದು.
(ಅ) ಪ್ರಾಧಿಕಾರದ ಸಾಮಾನ್ಯ ಸಭೆಯ ದಿನಾಂಕ:06.11.2020 ಮತ್ತು 20.11.2020ರ ವಿಷಯ ಸಂಖ್ಯೆ: 5ರಲ್ಲಿ ಪ್ರಾಧಿಕಾರವು ಈ ಹಿಂದೆ ನಿರ್ಮಿಸಿರುವ ಬಡಾವಣೆಗಳಲ್ಲಿ ಭೂಸ್ವಾಧೀನಪಡಿಸಿಕೊಳ್ಳದೇ ಬಡಾವಣೆ ನಿರ್ಮಿಸಿರುವ ಬಗ್ಗೆ ಕೆಲವೊಂದು ನಿರ್ಣಯಗಳನ್ನು ಕೈಗೊಂಡಿದ್ದು, ಸದರಿ ನಿರ್ಣಯಗಳನ್ನು ಉಲ್ಲಂಘಿಸಿ ಸಭೆಯ ಗಮನಕ್ಕೆ ತರದೇ ಪ್ರಕರಣವಾರು ಬದಲಿ ನಿವೇಶನ / ತುಂಡು ಭೂಮಿ ಮಂಜೂರಾತಿಗಾಗಿ ತೀರ್ಮಾನಗಳನ್ನು ಕೈಗೊಳ್ಳುತ್ತಿರುವುದು ಕಂಡು ಬಂದಿರುತ್ತದೆ. ಅದೇ ದಿನಾಂಕದ ನಿರ್ಣಯದಂತೆ ಪ್ರಾಧಿಕಾರವು ವಿವಿಧ ಉಪಯೋಗಗಳಿಗೆ ಬಳಸಿಕೊಂಡಿರುವ ಜಮೀನಿನ ಬದಲಿಯಾಗಿ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಶೇ. 50*50 ರ ಅನುಪಾತದ ನಿಯಮಗಳನ್ವಯ ನೀಡುವ ಬಗ್ಗೆ ಪ್ರಾಧಿಕಾರದ ಸಭೆಗೆ ಮಂಡಿಸಿರುವುದು ಕಂಡುಬಂದಿದ್ದು, ಇದು KUDA ಕಾಯ್ದೆ 1987 ಹಾಗೂ KUDA (Allotment of sites) Rules, 1991ರ ನಿಯಮಗಳ ಉಲ್ಲಂಘನೆಯಾಗಿರುತ್ತದೆ.
(ಬ) ಶೇ 50*50 ರ ಅನುಪಾತದ ನಿಯಮಗಳು ಅಂದರೆ, The Karnataka Urban Development Authorities (Allotment of sites in lieu of compensation for the land acquired) Rules, 2009ರ ನಿಯಮಗಳು ದಿನಾಂಕ: 30.07.2009ರಿಂದ ಜಾರಿಗೆ ಬಂದಿದ್ದು, ನಿಯಮ-3)ರಲ್ಲಿ ನಿವೇಶನ ಹಂಚಿಕೆಯನ್ನು ಲಾಟರಿ ಮುಖಾಂತರ ಭೂಸ್ವಾಧೀನ ಪಡಿಸಿಕೊಂಡ ಬಡಾವಣೆಯಲ್ಲಿಯೇ ಮಾಡತಕ್ಕದ್ದು ಎಂಬ ಅವಕಾಶವಿದ್ದು, ಹೊಸದಾಗಿ ಕೈಗೊಳ್ಳುವ ವಸತಿ ಯೋಜನೆಗಳಿಗೆ ಸದರಿ ನಿಯಮಗಳು ಭವಿಷ್ಯವರ್ತಿಯಾಗಿ ಅನ್ವಯಿಸುವುದರಿಂದ ಈಗಾಗಲೇ ಅಭಿವೃದ್ಧಿಪಡಿಸಿದ ಹಳೇ ಬಡಾವಣೆಗಳಿಗೆ 2009 ರಿಂದ ಜಾರಿಗೆ ಬಂದಿರುವ ಮೇಲ್ಮಂಡ ಶೇ.50*50 ಅನುಪಾತದ ನಿಯಮಗಳು ಅನ್ವಯವಾಗುವುದಿಲ್ಲವಾದ್ದರಿಂದ ಪ್ರಾಧಿಕಾರದಿಂದ ಬದಲಿ ನಿವೇಶನಗಳ ಮಂಜೂರಾತಿಗಾಗಿ ಶೇ 50*50ರ ಅನುಪಾತದಂತೆ ಕೈಗೊಂಡಿರುವ ಯಾವುದೇ ಕ್ರಮವು ನಿಯಮಬಾಹಿರವಾಗುತ್ತದೆ.
4. ಪ್ರಾಧಿಕಾರದ ಸಾಮಾನ್ಯ ಸಭೆಯ ದಿನಾಂಕ: 06.11.2020 ಮತ್ತು 20.11.2020ರ ವಿಷಯ ಸಂಖ್ಯೆ: 5ರಲ್ಲಿ ಪ್ರಾಧಿಕಾರವು ಈ ಹಿಂದೆ ಅಭಿವೃದ್ಧಿ ಪಡಿಸಿರುವ ಬಡಾವಣೆಗಳಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳದೇ ಬಡಾವಣೆ ನಿರ್ಮಿಸಿರುವ ಬಗ್ಗೆ ಸೂಕ್ತ ನೀತಿ | ನಿಯಮಗಳನ್ನು ರೂಪಿಸುವ ಕುರಿತು ಕೂಲಂಕುಷವಾಗಿ ಚರ್ಚಿಸಿ ನಿರ್ಣಯದ ಕ್ರ.ಸಂ.(1) & (2)ರಲ್ಲಿ ತೀರ್ಮಾನಿಸಿರುವಂತೆ ಪ್ರಾಧಿಕಾರ ರಚನೆ ಆದಾಗಿನಿಂದ ಎಷ್ಟು ಪ್ರದೇಶವನ್ನು ಅಧಿಸೂಚಿಸಲು ಸರ್ಕಾರವು ಅನುಮತಿ ನೀಡಿತ್ತು? ಎಷ್ಟು ವಿಸ್ತೀರ್ಣ ಭೂ ಸ್ವಾಧೀನ ಪಡಿಸಿಕೊಂಡಿದೆ? ಎಷ್ಟು ವಿಸ್ತೀರ್ಣಕ್ಕೆ ಪರಿಹಾರ ನೀಡಿದೆ? ಎಷ್ಟು ವಿಸ್ತೀರ್ಣದಲ್ಲಿ ಬಡಾವಣೆ ರಚಿಸಿದೆ? ಎಂಬುದರ ಬಗ್ಗೆ ಮತ್ತು ಭೂ ಸ್ವಾಧಿನ ಪಡಿಸದೇ ಉಪಯೋಗಿಸಿಕೊಂಡಿರುವ ಪುಕರಣಗಳಲ್ಲಿ ನೀಡಿರುವ ಪರಿಹಾರದ ವಿವರಗಳನ್ನು SLAO ರವರು ಮುಂದಿನ ಸಭೆಗೆ ಸಮಗ್ರ ಮಾಹಿತಿಯನ್ನು ಮಂಡಿಸುವಂತೆ ಸೂಚಿಸಿದ್ದಾಗ್ಯೂ, ಅದರಂತೆ, ಅನುಮೋದಿತ ಯೋಜನೆಯ ವ್ಯಾಪ್ತಿ ಮೀರಿ ಬಡಾವಣೆ ನಿರ್ಮಿಸಿರುವ ಸಮಗ್ರ ಮಾಹಿತಿಯನ್ನು ಪರಿಶೀಲಿಸಿ ಸಭೆಗೆ ಮಂಡಿಸಿಲ್ಲದಿರುವುದು.
ಪ್ರಾಧಿಕಾರದಲ್ಲಿಯೇ ನಿವೇಶನ ಹಂಚಿಕೆ ಕುರಿತು ಪೂರ್ಣ ಮಾಹಿತಿಯು ಲಭ್ಯವಿದ್ದಾಗ್ಯೂ ಪರಿಶೀಲಿಸದೇ ನಿಯಮಬಾಹಿರವಾದ ಕ್ರಮಗಳನ್ನು ಕೈಗೊಂಡಿರುವುದು ಮತ್ತು ಈ ಮೂಲಕ ಕಾನೂನಾತ್ಮಕ ಗೊಂದಲಗಳಿಗೆ ಅವಕಾಶಗಳನ್ನು ಕಲ್ಪಿಸುತ್ತಿದ್ದು, ಇಂತಹ ನಿಯಮಬಾಹಿರ ಕ್ರಮಗಳನ್ನು ತಡೆಗಟ್ಟಲು ಪ್ರಾಧಿಕಾರವು ಇಲ್ಲಿಯವರೆಗೆ KUDA ಕಾಯ್ದೆ 1987 ರಡಿ ಕೈಗೊಂಡಿರುವ ಮತ್ತು ಅಭಿವೃದ್ಧಿ ಪಡಿಸಿರುವ ಅಭಿವೃದ್ಧಿ ಯೋಜನೆವಾರು (Development scheme) ಭೂಸ್ವಾಧೀನಗೊಂಡಿರುವ ಜಮೀನುಗಳು, ರಚಿಸಲಾದ ನಿವೇಶನಗಳು, ಮೂಲೆ ನಿವೇಶನಗಳು, ಬಿಡಿ ನಿವೇಶನಗಳು, ತುಂಡು ಜಾಗ ಮತ್ತು ಬಾಕಿ ಉಳಿದ ನಿವೇಶನಗಳ ವಿವರಗಳನ್ನು ನಕ್ಷೆಯೊಂದಿಗೆ ಹಂಚಿಕೆ / ಹರಾಜು ಮತ್ತು ಇತರೆ ಪ್ರಕ್ರಿಯೆಗಳ ಸಂಬಂಧ ಯೋಜನೆವಾರು ವಹಿಗಳನ್ನು ಕಾಲಕಾಲಕ್ಕೆ ಕಾಲೋಚಿತಗೊಳಿಸಿ ಸಿದ್ಧಪಡಿಸಿ ನಿರ್ವಹಿಸಿರುವುದು ಕಂಡುಬಂದಿರುವುದಿಲ್ಲ.
ಪ್ರಾಧಿಕಾರದ ವಸತಿ ಯೋಜನೆಗಳಲ್ಲಿ ನಿವೇಶನಗಳನ್ನು ರಚಿಸಿದ ನಂತರ ಒಟ್ಟಾರೆ ನಿವೇಶನಗಳನ್ನು ವಹಿಯಲ್ಲಿ ನಮೂದಿಸದೇ ಮಂಜೂರಾತಿಗಾಗಿ ಅಧಿಸೂಚಿಸಲಾದ ಮಧ್ಯಂತರ ನಿವೇಶನಗಳ ಹಂಚಿಕೆ ನಂತರ ವಹಿಯಲ್ಲಿ ಅಂತಹ ಮಂಜೂರಾದ ನಿವೇಶನಗಳ ವಿವರಗಳ ನಮೂದುಗಳನ್ನು ಮಾಡಲಾಗುತ್ತಿದ್ದು, ಮೂಲೆ ನಿವೇಶನಗಳ ವಿವರಗಳನ್ನು ಮುಖ್ಯ ವಹಿಯಲ್ಲಿ ನಮೂದಿಸದೇ ಇರುವುದು (ಕೆಲವೊಂದು ವಹಿಯಲ್ಲಿ) ಕಂಡು ಬಂದಿರುತ್ತದೆ.
ಹರಾಜಿಗಾಗಿ ಬಾಕಿ ಇರುವ ಮೂಲೆ | ಬಿಡಿ | ಮಧ್ಯಂತರ ನಿವೇಶನಗಳ ಮಾಹಿತಿಯು ಪ್ರತ್ಯೇಕವಾಗಿ ಯಾವುದೇ ವಹಿಗಳಲ್ಲಿ ನಮೂದಿಸಿಲ್ಲದಿರುವುದು ಹಾಗೂ ಹರಾಜಿಗಾಗಿ / ಹಂಚಿಕೆಗಾಗಿ ಬಾಕಿ ಇರುವ ನಿವೇಶನಗಳ ವಹಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿರುವುದಿಲ್ಲ.
ಬಿಡಿ ನಿವೇಶನಗಳ ಹಂಚಿಕೆ ಮಾಡುವ ಬಗ್ಗೆ ಸರ್ಕಾರದ ಸುತ್ತೋಲೆ ಸಂಖ್ಯೆ: ನಅಇ 291 ಅಪ್ರಾ 98, ದಿನಾಂಕ; 24.11.2000ರಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರನುಸಾರ ಪ್ರಾಧಿಕಾರಗಳು ವರ್ಷಕ್ಕೊಮ್ಮೆ ಬಡಾವಣೆವಾರು ಮತ್ತು ವಿಸ್ತೀರ್ಣವಾರು ಪವರ್ಗಗಳ ಅಡಿಯಲ್ಲಿ ವಿಂಗಡಿಸಿ ಪಟ್ಟಿಯನ್ನು ತಯಾರಿಸಿ ವಹಿಯಲ್ಲಿಯೇ ನಿರ್ವಹಿಸತಕ್ಕದ್ದಾಗಿರುತ್ತದೆ. ಆದರೆ, ಪ್ರಾಧಿಕಾರದಲ್ಲಿ ರದ್ದತಿ ನಿವೇಶನಗಳ ವಹಿ ಎಂದು ತೆರೆದಿರುವ ವಹಿಯಲ್ಲಿ ದಿನಾಂಕ:24.11.2000ರ ಸುತ್ತೋಲೆಯಲ್ಲಿನ ಸೂಚನೆಗಳಂತೆ ಬಡಾವಣೆವಾರು ಯಾವುದೇ ವಹಿಯನ್ನು ನಿರ್ವಹಿಸಿರುವುದಿಲ್ಲ.
ಅಲ್ಲದೇ ಸುತ್ತೋಲೆಯಲ್ಲಿನ ಸೂಚನೆಯಂತೆ ವಾರ್ಷಿಕವಾಗಿ ಲಭ್ಯವಿರುವ ಬಿಡಿ ನಿವೇಶನಗಳ ಘೋಷವಾರು (Abstract) ಸಿದ್ಧಪಡಿಸದೇ ಇರುವುದು, ಪ್ರಾಧಿಕಾರದ ಪರಿಶೀಲನೆಗೆ ಒಳಪಡಿಸಿ ಅನುಮೋದನೆ ಪಡೆದಿಲ್ಲದಿರುವುದು ಕಂಡುಬಂದಿದ್ದು, ಸುತ್ತೋಲೆಯನುಸಾರ ವಹಿ ನಿರ್ವಹಣೆಗೆ ಕ್ರಮವಹಿಸಿರುವುದಿಲ್ಲ.
ಮುಂದುವರೆದು, ಸರ್ಕಾರವು ನೀಡುವ ಯಾವುದೇ ನಿರ್ದೇಶನಗಳನ್ನು KUDA ಕಾಯ್ದೆ ಕಲಂ 65ರನ್ವಯ ಪಾಲಿಸುವುದು ಪ್ರಾಧಿಕಾರದ ಜವಾಬ್ದಾರಿಯಾಗಿದ್ದು, ಬಿಡಿ ನಿವೇಶನಗಳ ವಿಷಯದಲ್ಲಿ ಬಿಡಿ ನಿವೇಶನಗಳನ್ನು ಬದಲಿ ನಿವೇಶನಗಳನ್ನಾಗಿ ಹಂಚಿಕೆ ಮಾಡದಿರುವುದು ಕಂಡುಬಂದಿರುತ್ತದೆ ಮತ್ತು ಕಾಯ್ದೆ / ನಿಯಮಗಳು ಹಾಗೂ ಸರ್ಕಾರದ ಸೂಚನೆಗಳಿಗೆ ವ್ಯತಿರಿಕ್ತವಾಗಿ ಕ್ರಮವಹಿಸಿರುತ್ತಾರೆ.
5. KUDA ಕಾಯ್ದೆ 1987ರಡಿಯಲ್ಲಿ ಉಲ್ಲೇಖಿಸಲಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಮಾತ್ರ ಕಲಂ 62ರಲ್ಲಿ ಪ್ರಾಧಿಕಾರವು ಅಧಿಸೂಚಿಸಿರುವ ಮೂಲಕ ಪ್ರತ್ಯಾಯೋಜಿಸಲು ಅವಕಾಶ ಕಲ್ಪಿಸಲಾಗಿದ್ದು, KTCP ಕಾಯ್ದೆಯಡಿಯಲ್ಲಿ ಅನುಮೋದನೆ ನೀಡುವ ಅಧಿಕಾರವು ಯೋಜನಾ ಪ್ರಾಧಿಕಾರವೂ ಆದ ನಗರಾಭಿವೃದ್ಧಿ ಪ್ರಾಧಿಕಾರದಾಗಿದ್ದು, ಕಾರ್ಯನಿರ್ವಾಹಕ ಅಧಿಕಾರಿಯಾದ ಪ್ರಾಧಿಕಾರದ ಆಯುಕ್ತರು, KUDA ಕಾಯ್ದೆ 1987ರ ಕಲಂ 13(2)(h) ರನ್ವಯ ಪ್ರಾಧಿಕಾರದಿಂದ ಹೊರಡಿಸುವ ಅನುಮತಿ / ಆದೇಶ | ನಿರ್ಣಯ ಹಾಗೂ ಇತರೆ ಎಲ್ಲ ದಾಖಲೆಗಳಲ್ಲಿ ಸಹಿ ಮಾಡುವ ಅಧಿಕಾರ ಪದತ್ತವಾಗಿ ಹೊಂದಿರುತ್ತಾರೆ. ಆದರೆ ಸದರಿ ಅಧಿಕಾರವನ್ನು ಪ್ರಾಧಿಕಾರದ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಲು KTCP ಕಾಯ್ದೆಯಡಿಯಲ್ಲಿ ಅವಕಾಶವಿಲ್ಲದಿದ್ದಾಗೂ ಆಯುಕ್ತರು DO: 03.11.2017, 06.02.2018, 23.09.2020 02.12.2020 ಯೋಜಕ ಸದಸ್ಯರು ದಿನಾಂಕ: 01.02.2021ರಂದು ಜ್ಞಾಪನ / ಸುತ್ತೋಲೆ / ಕಛೇರಿ ಆದೇಶ ಮೂಲಕ ಅಧೀನ ಅಧಿಕಾರಿಗಳಿಗೆ ಕೆ.ಟಿ.ಸಿ.ಪಿ ಕಾಯ್ದೆ 1961 ರಡಿಯಲ್ಲಿ ಪ್ರತ್ಯಾಯೋಜಿಸಿ ನಿಯಮಬಾಹಿರವಾಗಿ ಆದೇಶಗಳನ್ನು ಹೊರಡಿಸಿರುತ್ತಾರೆ.
ಮೇಲಿನ ತಾಂತ್ರಿಕ ಸಮಿತಿಯ ವರದಿಯನ್ನು ಪರಿಶೀಲಿಸಲಾಗಿ, ಅಧಿಕಾರಿಯವರು ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಸಗಿರುವ ಆರೋಪಗಳು ಅಧಿಕಾರಿಯ ಸಕ್ಷಮ ಪ್ರಾಧಿಕಾರಕ್ಕೆ ಮನವರಿಕೆಯಾಗಿದೆ. ಸದರಿ ಅಧಿಕಾರಿಯವರು ಸರ್ಕಾರಿ ಸೇವೆಯಲ್ಲಿ ಮುಂದುವರೆದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತ್ತುಗೊಳಿಸಲು ತೀರ್ಮಾನಿಸಿ ಅಂತೆಯೇ ಈ ಕೆಳಕಂಡ ಆದೇಶಿಸಿದ್ದಾರೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸಕ್ಷಮ ಶಿಸ್ತು ಪ್ರಾಧಿಕಾರವಾದ ಸರ್ಕಾರವು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು, 1957ರ ನಿಯಮ 10(1)(ಡಿ) ಮತ್ತು 103) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಜಿ.ಟಿ.ದಿನೇಶ್ ಕುಮಾರ್ ಕೆ.ಎ.ಎಸ್. (ಸೂ.ಟೈಂ.ಸೈ) ಅಧಿಕಾರಿ, ಹಿಂದಿನ ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಪುಸ್ತುತ ಸ್ಥಳ ನಿರೀಕ್ಷಣೆಯಲ್ಲಿ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತಿನಲ್ಲಿರಿಸಿ ಆದೇಶಿಸಿದೆ.
ಅಧಿಕಾರಿಯು ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 98ರಂತೆ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ.
ಅಧಿಕಾರಿಯು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ.
ಏನಿದು ‘ಚುಂಬನ ಕಾಯಿಲೆ’.? ಹೇಗೆ ಹರಡುತ್ತೆ.? ಲಕ್ಷಣಗಳೇನು.? ಚಿಕಿತ್ಸೆ ಹೇಗೆ.? ಇಲ್ಲಿದೆ ಮಾಹಿತಿ.!
ಮಂಡ್ಯ: ಈ ಬಾರಿ ವಿಜೃಂಭಣೆಯಿಂದ ನಡೆಯಲಿದೆ ಶ್ರೀರಂಗಪಟ್ಟಣ ದಸರಾ- DC ಡಾ.ಕುಮಾರ
ಸೆ.22ರಂದು 402 PSI ಹುದ್ದೆಗಳಿಗೆ ಲಿಖಿತ ಪರೀಕ್ಷೆ: ಒಂದು ವಾರದ ಮೊದಲು ಪ್ರವೇಶ ಪತ್ರ ಬಿಡುಗಡೆ- KEA