ಮೈಸೂರು: ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಮುಡಾ ಕಚೇರಿಯ ಮೇಲೆ ದಾಳಿ ನಡೆಸಿರುವಂತ ಇಡಿ ಅಧಿಕಾರಿಗಳು, ದಾಖಲೆಗಳನ್ನು ಜಾಲಾಡುತ್ತಿದ್ದಾರೆ. ಈ ಬೆನ್ನಲ್ಲೇ ಮುಡಾ ಕಮೀಷನರ್ ಅವರಿಗೆ 41 ಪ್ರಶ್ನೆಗಳನ್ನು ಇಡಿ ಕೇಳಿದ್ದು, ಅದರ ಮಾಹಿತಿ ನೀಡುವಂತೆ ಸೂಚಿಸಿದೆ ಎನ್ನಲಾಗಿದೆ.
ಈ ಸಂಬಂಧ ಮುಡಾ ಕಮೀಷನರ್ ಗೆ 41 ಪ್ರಶ್ನೆಗಳಿರುವಂತ ನೋಟಿಸ್ ನೀಡಿರುವಂತ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅದರಲ್ಲಿ ಸರ್ವೆ ನಂಬರ್ 464ಕ್ಕೆ ಸಂಬಂಧಿಸಿದಂತೆ ನೋಟಿಫಿಕೇಷನ್ ನಕಲು ಪ್ರತಿ ನೀಡುವಂತೆ ಕೋರಿದೆ.
ಇನ್ನೂ ಡಿನೋಟಿಫಿಕೇಷನ್ ಮಾಡುವಾಗ ಯಾವೆಲ್ಲ ನೀತಿ ನಿಯಮವನ್ನು ಪಾಲಿಸಲಾಗಿದೆ.? ದೇವರಾಜು ಅವರ ಮನವಿಯ ಮೇರೆಗೆ ಏನಾದ್ರೂ ಪ್ರಕ್ರಿಯೆ ಆಗಿದ್ಯಾ ಎಂಬ ಮಾಹಿತಿ ಒದಗಿಸುವಂತೆಯೂ ಕೋರಿದೆ.
ಭೂಸ್ವಾದೀನಕ್ಕೆ ಸಂಬಂಧಿಸಿದಂತ ಮಾಹಿತಿ ನೀಡುವಂತೆ ನೋಟಿಫಿಕೇಷನ್ ದಾಖಲೆಗಳ ನಕಲು ಪ್ರತಿ ನೀಡುವಂತೆ, ನೋಟಿಫಿಕೇಷನ್ ಭೂಮಿ ಮಾರಾಟಕ್ಕೆ, ವರ್ಗಾವಣೆಗೆ ಅವಕಾಶವಿದ್ಯಾ ಎನ್ನುವಂತೆ ಮಾಹಿತಿಯನ್ನು ಕೇಳಿದೆ.
ಈ ಪ್ರಶ್ನೆಗಳಲ್ಲದೇ ಬರೋಬ್ಬರಿ 41 ಪ್ರಶ್ನೆಗಳನ್ನು ಮುಡಾ ಕಮೀಷನರ್ ಮುಂದೆ ಇಡಿ ಅಧಿಕಾರಿಗಳು ಇಟ್ಟಿದ್ದಾರೆ. ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ, ಕೇಳಿರುವಂತ ಮಾಹಿತಿ, ದಾಖಲೆಗಳನ್ನು ಮುಡಾ ಕಚೇರಿಯಿಂದ ಒದಗಿಸಲಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
‘ಬೆಂಗಳೂರು ಜನತೆ’ಗೆ ಗುಡ್ ನ್ಯೂಸ್: ಈ ಹೊಸ ಮಾರ್ಗದಲ್ಲಿ ‘BMTC ಬಸ್’ ಸಂಚಾರ ಆರಂಭ | BMTC Bus Service