ಬೆಂಗಳೂರು: ರಾಜ್ಯದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದೆ. ಇಂದಿನ ಉಭಯ ಸದನಗಳಲ್ಲೂ ಮುಡಾ ಹಗರಣವು ಪ್ರತಿಧ್ವನಿಸಿದೆ. ಆಡಳಿತ, ವಿಪಕ್ಷಗಳ ನಡುವೆ ವಾಗ್ವಾದವೇ ನಡೆದಿದೆ. ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರನ್ನು ಕೋರಿದರೂ ಅವಕಾಶ ನೀಡಿಲ್ಲ. ಈ ಹಿನ್ನಲೆಯಲ್ಲೇ ಸಾಕು ಸಾಕು ಲೂಟಿ ಸಾಕು ಅಂತ ಸದನದಲ್ಲೇ ಸದಸ್ಯರು ಘೋಷಣೆ ಕೂಗಿದ್ದಾರೆ.
ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಎರಡೂ ಸದನದಲ್ಲಿ ಇಂದು ಮುಡಾ ಹಗರಣ ಪ್ರತಿಧ್ವನಿಸಿದೆ. ವಿಧಾನಸಭೆ, ಪರಿಷತ್ತಿನಲ್ಲಿ ಬಿಜೆಪಿಯ ನಾಯಕರು ಮುಡಾ ಹಗರಣದ ಬಗ್ಗೆ ಚರ್ಚೆ ನಡೆಸೋದಕ್ಕೆ ಅವಕಾಶ ನೀಡುವಂತೆ ಕೋರಿದರು. ಆದರೇ ಇದಕ್ಕೆ ಅವಕಾಶವನ್ನು ನೀಡಲಾಗಿಲ್ಲ.
ಇದೇ ಕಾರಣಕ್ಕೆ ಸಿಡಿದೆದ್ದಂತ ಬಿಜೆಪಿ ಸದಸ್ಯ ಸಿಟಿ ರವಿ ಅವರು, ಭ್ರಷ್ಟ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪರವಾಗಿ ಕಾಂಗ್ರೆಸ್ ನವರು ನಿಂತಿದ್ದಾರೆ. ಭ್ರಷ್ಟಾಚಾರದ ಪಿತಾಮಹ ಸಿಎಂ ಸಿದ್ಧರಾಮಯ್ಯ ಅಂತ ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಉಭಯ ಸದನಗಳಲ್ಲೂ ಪರಸ್ಪರ ಆಡಳಿತ, ವಿಪಕ್ಷದ ನಾಯಕರಿಂದ ಗದ್ದಲವನ್ನೇ ಏಳಿಸಲಾಯಿತು. ಬಿಜೆಪಿಯ ಸದಸ್ಯರು ಸೈಟು ಸೈಟು ಮೂಡಾ ಸೈಟು ಅಂತ ಘೋಷಣೆ ಕೂಗಿದ್ದಲ್ಲದೇ, ಸಾಕು ಸಾಕು ಲೂಟಿ ಸಾಕು ಅಂತಲೂ ವಿಧಾನಪರಿಷತ್ತಿನಲ್ಲಿ ಘೋಷಣೆ ಕೂಗಿದ್ದು ಕಂಡು ಬಂದಿತ್ತು.
ಇದಲ್ಲದೇ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಮುಡಾ ಹಗರಣದ ಬಗ್ಗೆ ಸದನದಲ್ಲೇ ಭಿತ್ತಿ ಪತ್ರವನ್ನು ಪ್ರದರ್ಶಿಸಿದ್ದೂ ಕಂಡು ಬಂದಿತು.
BREAKING: ನೀಟ್ ವಿರುದ್ಧದ ನಿರ್ಣಯವನ್ನು ಕರ್ನಾಟಕದ ಬಳಿಕ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಂಗೀಕಾರ | NEET Exam
ED ವಿರುದ್ಧ ದೂರು ವಿಚಾರ: ಕಾಂಗ್ರೆಸ್ ಯಾರನ್ನೂ ಬಳಸಿಕೊಳ್ಳುವುದಿಲ್ಲ: ಡಿಸಿಎಂ ಡಿಕೆ ಶಿವಕುಮಾರ್
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ‘ಗ್ರಾಮಠಾಣ’ ಒಳಗಿನ, ಹೊರಗಿನ ‘ಆಸ್ತಿ ಅಳತೆ’ಗೆ ಅವಕಾಶ