ಬೆಂಗಳೂರು: ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟ ಮಾನ್ಯ ರಾಜ್ಯಪಾಲರ ನಡೆಯನ್ನು ಈಗಾಗಲೇ ಸ್ವಾಗತಿಸಿದ್ದೇನೆ. ಸಿಎಂ ಶುಡ್ ರಿಸೈನ್ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾರಣಕ್ಕೂ ತಡ ಮಾಡದೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಅವರಲ್ಲಿ ಮನವಿ ಮಾಡುವುದಾಗಿ ಹೇಳಿದರು. ಮುಖ್ಯಮಂತ್ರಿಗಳು ಭ್ರಷ್ಟರು ಎಂಬುದು ಸಾಬೀತಾಗಿದೆ. ಇದೇ ಕಾರಣಕ್ಕೆ ನಾವು ಬೆಂಗಳೂರಿನಿAದ ಮೈಸೂರಿಗೆ ಪಾದಯಾತ್ರೆ ಮಾಡಿದ್ದೆವು ಎಂದು ಗಮನ ಸೆಳೆದರು.
ನಮ್ಮ ಪಾದಯಾತ್ರೆ ತೆರಳುವ ಪ್ರದೇಶದಲ್ಲೇ ಒಂದು ದಿನದ ಮೊದಲು ಕಾಂಗ್ರೆಸ್ಸಿನವರು ಸಭೆ ನಡೆಸಿದ್ದರು. ನಮ್ಮ ಆರೋಪದಲ್ಲಿ ಸತ್ಯ ಇದೆ ಎಂಬುದನ್ನು ಅವರು ಸಾಬೀತುಪಡಿಸಿದ್ದರು. ಭಯ ಇಲ್ಲದಿದ್ದರೆ ನಮ್ಮ ಜೊತೆ ಹೆಜ್ಜೆ ಹಾಕಲು ಅವರಿಗೆ ಕಾರಣ ಇರಲಿಲ್ಲ ಎಂದು ತಿಳಿಸಿದರು.
ಡಾ. ಅಂಬೇಡ್ಕರ್, ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯದ ಬಗ್ಗೆ ಮಾತನಾಡುವ ಇವರು ತಕ್ಷಣ ರಾಜೀನಾಮೆ ಕೊಡಬೇಕು. ಅಧಿಕಾರಿಗಳು ನ್ಯಾಯ ಎತ್ತಿಹಿಡಿಯುವ ಕೆಲಸ ಮಾಡಬೇಕಿದೆ. ಅವರ ವಿರುದ್ಧ ಎಫ್‌ಐಆರ್ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ನಿಗಮದಲ್ಲಿ ಇವರು 187 ಕೋಟಿ ಹಣವನ್ನು ಖಜಾನೆಯಿಂದಲೇ ಲೂಟಿ ಮಾಡಿದ್ದಾರೆ. ಇದನ್ನು ನಾವು ಆರೋಪ ಎನ್ನಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಎಸ್‌ಐಟಿ ಸಿದ್ಧಪಡಿಸಿದ ಎಫ್‌ಐಆರ್‌ನಲ್ಲಿ ಪ್ರಮುಖ ಇಬ್ಬರು ಆರೋಪಿತರ ಹೆಸರೇ ಇಲ್ಲವಾಗಿದೆ. ಹಾಗಿದ್ದಮೇಲೆ ಕ್ಲೀನ್ ಚಿಟ್ ಕೊಡಲು ಎಸ್‌ಐಟಿ ಮಾಡಿದಂತಲ್ಲವೇ ಎಂದು ಕೇಳಿದರು.
ಖಜಾನೆಗೆ ಕನ್ನ ಹಾಕಿದರೂ ಯಾರೂ ಕೇಳಬಾರದು. ಕೇಳಿದರೆ ಅದು ಆಪಾದನೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅದಕ್ಕಾಗಿಯೇ ನಾವು ಹೋರಾಟ ಮಾಡಿದ್ದೆವು. ಗವರ್ನರ್ ಸರಿಯಾದ ಉತ್ತರ ಕೊಟ್ಟಿದ್ದಾರೆ. ಈಗ ಗವರ್ನರ್ ಅವರಿಂದ ದುರುಪಯೋಗದ ಮಾತನಾಡುತ್ತಾರೆ. ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸುವಾಗಿ ಏನು ಹೇಳಿದ್ದೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಆವತ್ತು ಗವರ್ನರ್ ಉತ್ತಮ ಕೆಲಸ ಮಾಡಿದ್ದರೇ? ಇವತ್ತು ಗವರ್ನರ್ ಕೆಟ್ಟ ಕೆಲಸ ಮಾಡಿದ್ದಾರಾ? ಎಂದು ಕೇಳಿದರಲ್ಲದೆ, ಗವರ್ನರ್ ಮಾಡಿರುವುದು ಕಾನೂನಾತ್ಮಕವಾಗಿ, ಸಂವಿಧಾನಾತ್ಮಕವಾಗಿದೆ. ಅದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.
ಆಸ್ಪತ್ರೆಗಳಲ್ಲಿನ ಸುರಕ್ಷತಾ ಮಾನದಂಡಗಳ ಬಗ್ಗೆ ಚರ್ಚಿಸಲು ಸಂಘಗಳೊಂದಿಗೆ ಸಭೆ ಕರೆದ ‘ರಾಜ್ಯ ಸರ್ಕಾರ’
BREAKING : ಪ್ರಾಸಿಕ್ಯೂಷನ್ ಗೆ ಅನುಮತಿ : `CM ಸಿದ್ದರಾಮಯ್ಯ’ ಬೆನ್ನಿಗೆ ನಿಂತ ಕುರುಬ ಸಮುದಾಯ