ಬೆಂಗಳೂರು: ಮುಡಾ ಅಕ್ರಮ ಖಂಡಿಸಿ ಬಿಜೆಪಿಯಿಂದ ಪಾದಯಾತ್ರೆ ನಡೆಸುವಂತ ನಿರ್ಧಾರವನ್ನು ಕಳೆದ ವಿಧಾನಮಂಡಳದ ಅಧಿವೇಶನದ ಸಂದರ್ಭದಲ್ಲಿಯೇ ಅಹೋರಾತ್ರಿ ಪ್ರತಿಭಟನೆ ಸಂದರ್ಭದಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಆಗಸ್ಟ್.3ರಿಂದ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ-ಜೆಡಿಎಸ್ ನಾಯಕರು ಪಾದಯಾತ್ರೆಯನ್ನು ಆರಂಭಿಸಲಿದ್ದಾರೆ.
ಇಂದು ಈ ಸಂಬಂಧ ಬಿಜೆಪಿ-ಜೆಡಿಎಸ್ ನಾಯಕರ ಮಹತ್ವದ ಸಭೆ ನಡೆಯಿತು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ಮುಡಾ ಅಕ್ರಮ ಖಂಡಿಸಿ ಪಾದಯಾತ್ರೆಯನ್ನು ಮಾಡುವುದಕ್ಕೆ ನಿರ್ಧರಿಸಲಾಗಿದೆ. ಆಗಸ್ಟ್.3ರಿಂದ ಬಿಜೆಪಿ-ಜೆಡಿಎಸ್ ನಾಯಕರು ಸೇರಿ ಪಾದಯಾತ್ರೆಯನ್ನು ಬೆಂಗಳೂರಿನಿಂದ ಪ್ರಾರಂಭಿಸಲಾಗುತ್ತದೆ ಎಂದರು.
ಆಗಸ್ಟ್.3ರಿಂದ ಪಾದಯಾತ್ರೆ ಆರಂಭಗೊಂಡು, ಆಗಸ್ಟ್.10ರಂದು ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮೈಸೂರಿನಲ್ಲಿ ನಡೆಯುವಂತ ಸಮಾರೋಪ ಸಮಾರಂಭದಲ್ಲಿ ಹಲವು ನಾಯಕರು ಭಾಗಿಯಾಗಲಿದ್ದಾರೆ ಎಂದರು.
ಪ್ಯಾರೀಸ್ ಒಲಂಪಿಕ್ಸ್ 2024: ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಮಹಿಳಾ ಬಿಲ್ಲುಗಾರಿಕೆ ತಂಡ | Paris Olympics 2024
ಪ್ರಯಾಣಿಕರ ಗಮನಕ್ಕೆ: ಜು.29ರ ನಾಳೆಯಿಂದ ಜು.4ರವರೆಗೆ ಈ ರೈಲುಗಳ ಸಂಚಾರ ರದ್ದು | Train Cancelled