ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಮುಡಾ ಪ್ರಕರಣದ ಕೇಸ್ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಹೊಸ ತಿರುವು ಎನ್ನುವಂತೆ ತನ್ನ ಕೇಸ್ ತಾನೇ ನಾಳೆ ದೂರುದಾರ ಸ್ನೇಹಮಯಿ ಕೃಷ್ಣ ವಾದಿಸಲಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿರುವಂತ ಸ್ನೇಹಮಯಿ ಕೃಷ್ಣ ಅವರು, ಮುಡಾ ಪ್ರಕರಣದಲ್ಲಿ 1ನೇ ಆರೋಪಿ ಸಿದ್ದರಾಮಯ್ಯ, 2ನೇ ಆರೋಪಿ ಪಾರ್ವತಿ, 3ನೇ ಆರೋಪಿ ಮಲ್ಲಿಕಾರ್ಜುನ ಸ್ವಾಮಿ, 4ನೇ ಆರೋಪಿ ದೇವರಾಜುರವರನ್ನು ಆದಷ್ಟು ಬೇಗ ನಿರಪರಾಧಿಗಳು ಎಂದು ಬಿಂಬಿಸುವ ಸಲುವಾಗಿ ಅಸ್ಪಷ್ಟವಾದ ಮತ್ತು ಸುಳ್ಳಿನಿಂದ ಕೂಡಿದ ವರದಿಯನ್ನು ಸಲ್ಲಿಸಿರುವ ಲೋಕಾಯುಕ್ತ ಅಧಿಕಾರಿಗಳು ನಾಳೆ ಮಾನ್ಯ ನ್ಯಾಯಾಲಯಕ್ಕೆ ಯಾವ ರೀತಿಯಲ್ಲಿ ಸ್ಪಷ್ಟೀಕರಣ ಕೊಡುತ್ತಾರೆ ? ಎಂಬ ಕುತೂಹಲದಿಂದ ನಾಳೆ ನಾನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದೇನೆ ಎಂದಿದ್ದಾರೆ.
ನನ್ನ ತಕರಾರು ಅರ್ಜಿಯಲ್ಲಿನ ಮತ್ತು ನನ್ನ ಮನವಿಯಲ್ಲಿನ ಅಂಶಗಳನ್ನು ಆಧರಿಸಿ ಮಾನ್ಯ ನ್ಯಾಯಾಲಯ ಕೇಳಿರುವ ವಿಚಾರಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಷ್ಟೀಕರಣ ಕೊಟ್ಟರೆ, ಹಾಲಿ ಆರೋಪಿಗಳು ಅಪರಾಧ ಕೃತ್ಯ ಎಸಗಿದ್ದಾರೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಅಥವಾ ಒಂದೇ ಕೈಯಲ್ಲಿ ಚಪ್ಪಾಳೆ ಹೊಡೆಯಲು ಹೇಗೆ ಸಾಧ್ಯ ? ಎಂಬ ಚಮತ್ಕಾರವನ್ನು ಲೋಕಾಯುಕ್ತ ಅಧಿಕಾರಿಗಳು ಮಾನ್ಯ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಾಗುತ್ತದೆ ! ಲೋಕಾಯುಕ್ತ ಅಧಿಕಾರಿಗಳು ಸತ್ಯ ಒಪ್ಪಿಕೊಳ್ಳುತ್ತಾರ ? ಅಥವಾ ಒಂದೇ ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯ ಎಂಬ ಚಮತ್ಕಾರ ತೋರಿಸುತ್ತಾರ ? ನಾಳೆವರೆಗೆ ಕಾದು ನೋಡೋಣವಲ್ಲವೆ ? ಎಂದು ಹೇಳಿದ್ದಾರೆ.
ಶೀತ, ಕೆಮ್ಮು ಸೇರಿದಂತೆ ಹಲವು ರೋಗಗಳಿಗೆ ರಾಮಬಾಣ ‘ಜಿಂದಾ ತಿಲಿಸ್ಮತ್’: ಅದ್ಭುತ ಔಷಧವೆಂದು ಶ್ಲಾಘನೆ
‘ಟ್ವಿಟರ್’ನ ಐಕಾನಿಕ್ ‘ಬರ್ಡ್ ಲೋಗೋ’ ಸುಮಾರು $35,000ಗೆ ಹರಾಜಿನಲ್ಲಿ ಮಾರಾಟ | Twitter’s Iconic Bird Logo Sold