ಬೆಂಗಳೂರು: ಹಂಚಿಕೊಂಡ ಮೌಲ್ಯಗಳೂ ಹಾಗೂ ಭವಿಷ್ಯತ್ತಿಗಾಗಿ ಒಂದು ಸಾಮಾನ್ಯ ದೂರದೃಷ್ಟಿಯಲ್ಲಿ ಬೇರೂರಿದ ಸಹಭಾಗಿತ್ವದಲ್ಲಿ, ಭಾರತೀಯ ಕ್ರಿಕೆಟ್ ಐಕಾನ್ ಆದ ಮಹೇಂದ್ರ ಸಿಂಗ್ ಧೋನಿ, ಹೂಡಿಕೆದಾರ ಮತ್ತು ಬ್ರ್ಯಾಂಡ್ ರಾಯಭಾರಿ ಎರಡೂ ಆಗಿ, ಅತಿವೇಗವಾಗಿ ಬೆಳೆಯುತ್ತಿರುವ D2C ವಿಮಾ ಸಂಸ್ಥೆ ಆಕ್ಕೊದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿದ್ದಾರೆ.
ಈ ದೀರ್ಘಾವಧಿ ಸಹಭಾಗಿತ್ವದ ಭಾಗವಾಗಿ ಧೋನಿ, ತಮ್ಮ ಕುಟುಂಬ ಕಚೇರಿಯಾದ ಮೈದಾಸ್ ಡೀಲ್ಸ್ ಪ್ರೈ ಲಿ., ಮೂಲಕ ಆಕ್ಕೊದಲ್ಲಿ ಪ್ರಮುಖ ಹೂಡಿಕೆ ಮಾಡಿದ್ದಾರೆ. ಈ ನಡೆಯು, ನಗರದ ಆಧುನಿಕ ಭಾರತೀಯನಿಗಾಗಿ ವಿಮೆಯನ್ನು ಸರಳವಾದ, ಸಂವೇದನಾಶೀಲ ಹಾಗೂ ಪ್ರವೇಶಾವಕಾಶ ಇರುವಂಥ ವಿಮೆಯಾಗಿ ಮರುಕಲ್ಪಿಸಿಕೊಳ್ಳುವ ಭಾರತದ ಅತ್ಯಂತ ಪ್ರೀತಿಪಾತ್ರ ವಿಮಾ ಬ್ರ್ಯಾಂಡ್ ಆಗಿ ನಿರ್ಮಾಣಗೊಳ್ಳಬೇಕೆಂಬ ಆಕ್ಕೋದ ಧ್ಯೇಯೋದ್ದೇಶದಲ್ಲಿ ಅವರ ಪ್ರಬಲ ನಂಬಿಕೆಯನ್ನು ಸೂಚಿಸುತ್ತದೆ.
ಸಹಯೋಗದ ಬಗ್ಗೆ ಮಾತನಾಡುತ್ತಾ, ಧೋನಿ ಅವರು, “ಆಟೋಮೊಬೈಲ್ ಉತ್ಸಾಹಿಯಾಗಿ, ನಾನು ವಿಮೆಯು ಅನಗತ್ಯವಾಗಿ ಸೂಕ್ಷ್ಮಗೊಂಡಿದೆ ಎಂಬುದನ್ನು ಅನೇಕ ವೇಳೆ ನೋಡಿದ್ದೆ. ಎಲ್ಲಿ ಗೊಂದಲವಿತ್ತೋ ಅಲ್ಲಿ ಆಕ್ಕೊ ಸ್ಪಷ್ಟತೆ ತಂದಿದೆ. ಅವರ ತಂತ್ರಜ್ಞಾನ-ಮೊದಲು, ಗ್ರಾಹಕ-ಕೇಂದ್ರಿತ ದೃಷ್ಟಿಕೋನವು, ಹೊಸ ಭಾರತವು ವಿಮೆಯೊಂದಿಗೆ ತೊಡಗಿಕೊಳ್ಳಲು ಇಚ್ಛಿಸುವ ವಿಧಾನವನ್ನು ಪ್ರತಿಫಲಿಸುತ್ತದೆ. ವಿಶ್ವಾಸ ಮತ್ತು ಪರಿವರ್ತನೆಯ ಮೇಲೆ ಕೇಂದ್ರೀಕೃತವಾದ ಬ್ರ್ಯಾಂಡ್ ಒಂದನ್ನು ಬೆಂಬಲಿಸಲು ನನಗೆ ಉತ್ಸಾಹವೆನಿಸುತ್ತಿದೆ.” ಎಂದು ಹೇಳಿದರು.
ವಿಮಾ ಅನುಭವದಿಂದ ಘರ್ಷಣೆಗಳನ್ನು ನಿವಾರಿಸುವ ಗುರಿಯೊಂದಿಗೆ ಸ್ಥಾಪನೆಗೊಂಡ ಆಕ್ಕೊ ಇಂದು, 70 ದಶಲಕ್ಷಕ್ಕಿಂತ ಹೆಚ್ಚಿನ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾ ಮೋಟಾರ್, ಪ್ರಯಾಣ ಮತ್ತು ಆರೋಗ್ಯದಾದ್ಯಂತ ವಾರ್ಷಿಕವಾಗಿ 2 ದಶಲಕ್ಷಕ್ಕಿಂತ ಹೆಚ್ಚಿನ ಕ್ಲೇಮುಗಳನ್ನು ಪ್ರಕ್ರಿಯೆಗೊಳಪಡಿಸುತ್ತದೆ. ತಂತ್ರಜ್ಞಾನ ಮತ್ತು ಡೇಟಾ-ನಿರ್ದೇಶಿತ ಸರಳತೆಯನ್ನು ಆಳವಾದ ಮಾನವ ಸೇವೆಯೊಡನೆ ಸಂಯೋಜಿಸುವ ಮೂಲಕ ಭಾರತವು ವಿಮೆಯೊಂದಿಗೆ ಸಂವಹಿಸುವ ವಿಧಾನವನ್ನು ಸಂಸ್ಥೆಯು ಮರುವಿವರಿಸಿದೆ.
ಧೋನಿ ಅವರನ್ನು ಆಕ್ಕೊ ಕುಟುಂಬಕ್ಕೆ ಸ್ವಾಗತಿಸುತ್ತಾ, ಆಕ್ಕೊ ಸ್ಥಾಪಕ ವರುಣ್ ದುವಾ, “ಆಕ್ಕೋದೊಂದಿಗೆ ಧೋನಿ ಅವರ ಸಹಯೋಗವು ಕೇವಲ ಒಂದು ಬ್ರ್ಯಾಂಡ್ ಸಹಯೋಗವಲ್ಲ, ಬದಲು ಅದು ಮನಸ್ಥಿತಿಗಳ ಸಮ್ಮಿಲನವಾಗಿದೆ. ಆಕ್ಕೋದ ಪಯಣವನ್ನು ರೂಪಿಸಿದ ಮೌಲ್ಯಗಳನ್ನು ಅವರು ಪ್ರತಿಫಲಿಸುತ್ತಾರೆ: ಅಂದರೆ, ಗ್ರಾಹಕ-ಮೊದಲು ಆಲೋಚನೆ, ಸರಳತೆ ಮತ್ತು ದಿಟ್ಟ ಆವಿಷ್ಕಾರ. ಧೋನಿ ಅವರು ನಾವು ಯಾವುದಕ್ಕೆ ನಿಲ್ಲುತ್ತೇವೋ ಅಂದರೆ, ವಿಶ್ವಾಸ, ಶಿಸ್ತು ಮತ್ತು ಆಟವನ್ನು ಮರುಶೋಧಿಸುವ ಸಮಯದಲ್ಲೇ ಶಾಂತವಾಗಿರುವ ಸಾಮರ್ಥ್ಯ –ಇವುಗಳನ್ನೆಲ್ಲಾ ಪ್ರತಿನಿಧಿಸುತ್ತಾರೆ. ಅವರ ಅಸ್ತಿತ್ವವು, ಭಾರತದಲ್ಲಿ ವಿಮೆಗಾಗಿ ಇರುವ ಆಟದಪುಸ್ತಕವನ್ನು ಮತ್ತೊಮ್ಮೆ ಬರೆಯುವ. ಒಂದುಗೂಡಿ ನಾವು, ವಿಮೆಯನ್ನು ಇನ್ನಷ್ಟು ಸರಳ, ಇನ್ನಷ್ಟು ಸಂಬಂಧಪಡುವಂತೆ ಮತ್ತು ಜನರು ನಿಜವಾಗಿಯೂ ಪ್ರೀತಿಸುವಂತೆ ಮಾಡುವ ಗುರಿ ಹೊಂದಿದ್ದೇವೆ.” ಎಂದು ಹೇಳಿದರು.
ಭಾರತದಲ್ಲಿ ಟೆಸ್ಲಾಗಾಗಿ ಇಚ್ಛೆಯ ವಿಮಾ ಸಂಸ್ಥೆಯಾಗುವುದರಿಂದ ಹಿಡಿದು, ಈಗ ದೇಶದ ಅತ್ಯಂತ ನೆಚ್ಚಿನ ಧ್ವನಿಗಳ ಪೈಕಿ ಒಂದು ಧ್ವನಿಯನ್ನು ತನ್ನ ತೆಕ್ಕೆಗೆ ತರುವವರೆಗೆ, ಆಕ್ಕೋ ದಿಟ್ಟ ನಡೆಗಳು, ಹಂಚಿಕೊಂಡ ನಂಬಿಕೆ ಮತ್ತು ತಾಳ್ಮೆಯ ವಿಶ್ವಾಸದಿಂದ ವಿವರಿಸಲಾಗಿರುವ ಮಾರ್ಗದಲ್ಲಿ ಚಲಿಸುತ್ತಿದೆ.