ದಾವಣಗೆರೆ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ದುಬೈನಲ್ಲಿ ಸಿಲುಕಿರುವ 50 ಭಾರತೀಯ ಪ್ರವಾಸಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತುರ್ತು ಕ್ರಮ ಕೈಗೊಳ್ಳಬೇಕೆಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮನವಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಪ್ರವಾಸಿಗರ ತಂಡವು 23-02-2026 ರಂದು ಬೆಂಗಳೂರಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರವಾಸಕ್ಕೆ ತೆರಳಿದ್ದರು. ಒಟ್ಟು 50 ಮಂದಿ ಪ್ರವಾಸಿಗರಲ್ಲಿ 15 ಮಂದಿ ಜಗಳೂರು ತಾಲ್ಲೂಕಿನವರಾಗಿದ್ದು, ಉಳಿದ 35 ಮಂದಿ ನೆರೆಯ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳವರಾಗಿದ್ದಾರೆ.
ಇವರ ವಾಪಸಿ ವಿಮಾನವು 28-02-2026 ರಂದು ರಾತ್ರಿ 9:30ಕ್ಕೆ ನಿಗದಿಯಾಗಿದ್ದರೂ, ಅಂತಿಮ ಕ್ಷಣದಲ್ಲಿ ವಿಮಾನ ರದ್ದುಗೊಂಡಿರುವುದರಿಂದ ಪ್ರವಾಸಿಗರು ದುಬೈನಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಪರಿಸ್ಥಿತಿ ಕಾರಣದಿಂದ ವಿಮಾನ ಸೇವೆಗಳು ವ್ಯತ್ಯಯಗೊಂಡಿರುವುದು ತಿಳಿದುಬಂದಿದೆ. ಪ್ರವಾಸಿಗರ ಸುರಕ್ಷತೆ ಹಾಗೂ ಶೀಘ್ರ ವಾಪಸಿಗಾಗಿ ಭಾರತ ಸರ್ಕಾರ ತುರ್ತು ಹಸ್ತಕ್ಷೇಪ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಹಾಗೂ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಂಯೋಜನೆ ನಡೆಸಿ, ಸಿಲುಕಿರುವ ನಾಗರಿಕರನ್ನು ಬೇಗನೇ ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರವಾಸಿಗರ ವಿವರಗಳನ್ನು ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
US Israel Iran War: ರಣರಂಗವಾದ ಪಶ್ಚಿಮ ಏಷ್ಯಾ: ಇಸ್ರೇಲ್‌ನಲ್ಲಿ 8 ಬಲಿ, ದುಬೈ-ಅಬುಧಾಬಿಯಲ್ಲೂ ಸ್ಫೋಟದ ಸದ್ದು!
ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ








