ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (Bangalore Metro Rail Corporation Limited -BMRCL) ಹೆಬ್ಬಾಳ-ಕೊಡಿಗೆಹಳ್ಳಿ ಜಂಕ್ಷನ್ನಲ್ಲಿ ಮೆಟ್ರೋ ಸಂಬಂಧಿತ ಕಾಮಗಾರಿಗಳನ್ನು ಪ್ರಾರಂಭಿಸುವುದರಿಂದ ಹೆಬ್ಬಾಳ ವೃತ್ತದ ಸುತ್ತಲೂ ಪ್ರಯಾಣಿಸುವ ಪ್ರಯಾಣಿಕರಿಗೆ ಬೆಂಗಳೂರು ಸಂಚಾರ ಪೊಲೀಸರು ( Bengaluru traffic police-BTP) ಸಲಹೆ ನೀಡಿದ್ದಾರೆ.
ಸಂಚಾರ ದಟ್ಟಣೆಯನ್ನು ತಪ್ಪಿಸಲು ಪ್ರಯಾಣಿಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಮೇ 10ರಿಂದ ಕೊಡಿಗೆಹಳ್ಳಿ-ಹೆಬ್ಬಾಳ ವೃತ್ತದ ಮೆಟ್ರೋ ಪಿಲ್ಲರ್ ಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಹಳಿಗಳನ್ನು ಜೋಡಿಸಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕೊಡಿಗೆಹಳ್ಳಿ ಜಂಕ್ಷನ್ ನಿಂದ ಸರ್ವಿಸ್ ರಸ್ತೆಯಲ್ಲಿ ಎಸ್ಟೀಮ್ ಮಾಲ್ ವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಪ್ರಯಾಣಿಕರು ಎಸ್ಟೀಮ್ ಮಾಲ್ ಗೆ ಹೋಗಲು ರನ್ನ ರಸ್ತೆಯನ್ನು ಬಳಸಲು ತಿಳಿಸಲಾಗಿದೆ. ವಾಹನ ಸವಾರರು ದಾಸರಹಳ್ಳಿ ಮುಖ್ಯರಸ್ತೆಯಿಂದ ಪಂಪಾ ಎಕ್ಸ್ ಟೆನ್ಷನ್ ರಸ್ತೆ ತಲುಪಿ, ರನ್ನ ರಸ್ತೆ ಮೂಲಕ ಸಾಗಿ ಕೆಂಪಾಪುರ ಮುಖ್ಯರಸ್ತೆ ಮೂಲಕ ಎಸ್ಟೀಮ್ ಮಾಲ್ ತಲುಪಬೇಕು. ಎಲ್ಲಾ ಎಚ್ಜಿವಿ ವಾಹನಗಳು ವಿದ್ಯಾಶಿಲ್ಪ ಜಂಕ್ಷನ್ನಲ್ಲಿ ತಿರುವು ಪಡೆದುಕೊಂಡು ಸಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಗವಾರ ಫ್ಲೈಓವರ್ ಮೇಲಿನ ಸರ್ವಿಸ್ ರಸ್ತೆಗೆ ಪ್ರವೇಶವನ್ನು ಶುಕ್ರವಾರದಿಂದ ಮುಚ್ಚಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ಘೋಷಿಸಿದ್ದಾರೆ. ಇದು ಹೊರ ವರ್ತುಲ ರಸ್ತೆಯಲ್ಲಿ ಸುಗಮ ಸಂಚಾರ ಹರಿವನ್ನು ಖಚಿತಪಡಿಸುತ್ತದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಬ್ಬಾಳ ಮೇಲ್ಸೇತುವೆಗಾಗಿ ಎರಡು ಹೊಸ ಪಥಗಳನ್ನು ನಿರ್ಮಿಸಲು ಪ್ರಾರಂಭಿಸಿದೆ. ಕಳೆದ ತಿಂಗಳಿನಿಂದ ಈ ಪರ್ಯಾಯ ಮಾರ್ಗ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಹೆಬ್ಬಾಳ ಫ್ಲೈಓವರ್ ಬಳಿಯ ಕೆ.ಆರ್.ಪುರಂ ರ್ಯಾಂಪ್ ಅನ್ನು ಕೆಡವಿ ಫ್ಲೈಓವರ್ನಲ್ಲಿ ಹೊಸ ಪಥಗಳನ್ನು ನಿರ್ಮಿಸಲಾಗಿದೆ.
ನಿಮ್ಮ ‘ಏರ್ ಇಂಡಿಯಾ ಎಕ್ಸ್ಪ್ರೆಸ್’ ವಿಮಾನ ರದ್ದಾಗಿದ್ಯಾ? ಮರುಪಾವತಿ ಪಡೆಯಲು ಈ ‘ವಾಟ್ಸಾಪ್ ಸಂಖ್ಯೆ’ ಸಂಪರ್ಕಿಸಿ
ಬೆಂಗಳೂರಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತು ಯಾವುದೇ ನಿರ್ಬಂಧ ವಿಧಿಸಿಲ್ಲ: BBMP ಸ್ಪಷ್ಟನೆ