ಮಂಡ್ಯ: ಈ ವರ್ಷದಿಂದ ಕೆರೆ-ಕಟ್ಟೆ ತುಂಬುವ ಸಂದರ್ಭದಲ್ಲಿ ರೈತರಿಗೆ ಸನ್ಮಾನಕ್ಕೆ ನಿರ್ಧಾರ ಮಾಡಲಾಗಿದೆ. ಸಾವಡೆಗಳು ಹಾಗು ಎಇಇ ಅಧಿಕಾರಿಗಳಿಗೆ ಅವರಿಗೆ ಪ್ರಶಸ್ತಿ ಕೊಡಲು ಸರ್ಕಾರ ನಿರ್ಧಾರ ಕೈಗೊಳ್ಳಲಾಗಿದೆ. ಕಾವೇರಿ ತಾಯಿ 10 ವರ್ಷ ಬಾಗಿನ ಅರ್ಪಿಸುವ ಅವಕಾಶವನ್ನು ಕಾಂಗ್ರೆಸ್ ಗೆ ನಿಡ್ತಾಳೆ ಅನ್ನೋ ಭರವಸೆ ಇದೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ಕೆ.ಆರ್.ಎಸ್ ಡ್ಯಾಂಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇಂದು ಸಂಭ್ರಮದ ದಿನ ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ನಮ್ಮ ಬದುಕಿನ ಜೀವನದಿ. 92 ವರ್ಷವಾದ್ರು ಸಂಭ್ರಮದಿಂದ ಈ ತಾಯಿಗೆ ನಮನ ಸಲ್ಲಿಸುತ್ತಿದೇವೆ ಎಂದರು.
ಚಾಮುಂಡೇಶ್ವರಿಯಲ್ಲಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದೇನೆ. ಮೇಲಿರುವ ತಾಯಿಗೆ ಯಾರು ಅಧಿಕಾರದಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ. ನಮ್ಮ ಪ್ರಾರ್ಥನೆಗೆ ತಾಯಿ ಕರುಣಿಸಿ ಅಣೆಕಟ್ಟು ತುಂಬಿ ಕಾವೇರಿ ಹರಿಯುತ್ತಿದ್ದಾಳೆ ಎಂದರು.
ಜಿಲ್ಲೆಯಲ್ಲಿ ಕೃಷಿ ವಿವಿ ಪ್ರಾರಂಭವಾಗುತ್ತಿದೆ ರೈತರ ಬದುಕಿಗೆ ಮಾರ್ಗದರ್ಶನ ಸಿಗುತ್ತೆ. ಜನರ ಬದುಕಿಗೆ, ಕೈಗಾರಿಕೆಗೆ ನೀರು ಬಳಕೆಯಾಗಲಿದೆ. 82 ಲಕ್ಷ ಎಕ್ಟೆರ್ ಗೆ ಬಿತ್ತನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವರ್ಷ 23 ತಾಲ್ಲೂಕು ಗಳಲ್ಲಿ ಬರಗಾಲ ಇತ್ತು. ಅನೇಕರು ಟೀಕೆ ಟಿಪ್ಪಣಿ ಮಾಡಿದ್ರು. ಟೀಕೆಗಳು ಸಾಯುತ್ತವೆ ನಮ್ಮ ಕೆಲಸಗಳು ಉಳಿಯುತ್ತವೆ ಎಂದು ಅವರು ಹೇಳಿದರು.
ಕಾವೇರಿ ಜಲಾನಯನ ಪ್ರದೇಶಕ್ಕೆ ಹೊಸ ದಿಕ್ಕು ಕೊಡಲು ನಿರ್ಧರಿಸಲಾಗಿದೆ. ನಾಲೆಗಳ ಸುದ್ದಿಕರಣವಾಗುತ್ತಿದೆ. ವಿಧಾನ ಸೌದದಲ್ಲಿ ಕ್ಯಾಬಿನೆಟ್ ನಲ್ಲಿ ರಾಜ್ಯದ ನಮ್ಮ ರೈತರ ಬದುಕಿಗಾಗಿ ಕೊನೆಯ ಹಳ್ಳಿಯ ವರಗೆ ನೀರು ಬೇಕು. ಕಾನೂನು ಬದಲು ಮಾಡಿ ಹೊಸ ಕಾನೂನು ತರಲಾಗಿದೆ. ನೀರು ತೆಗೆದುಕೊಂಡು ಕೊನೆಯ ರೈತರ ಬದುಕು ಅಸನು ಮಾಡಬೇಕು. ರೈತರಿಗೆ ಸಂಬಳ ಏನು ಇಲ್ಲ ರೈತರ ಉಳಿಸಬೇಕು ಎಂದರು.
ತಮಿಳುನಾಡಿಗೆ 40 ಟಿಎಂಸಿ ನೀರು ಬಿಡಬೇಕು. ನಾವು ಆದೇಶ ಪಾಲನೆ ಮಾಡಿದ್ದೇವೆ. ಈಗಾಗಲೇ ಸಾಕಷ್ಟು ನೀರು ಹೋಗಿದೆ. ನಾನು ಸಿದ್ದರಾಮಯ್ಯ ಬಿಟ್ವಿ ಅಂತಲ್ಲ. ಕಳೆದ ವರ್ಷ 81 ಟಿಎಂಸಿ, ಇವಾಗ 80 ಟಿಎಂಸಿ ಹರಿದು ಹೊಗಿದೆ. ನಾವು ಹಾಗೂ ತಮಿಳುನಾಡಿನ ರೂತರಿಗೂ ಒಳ್ಳೆಯದಾಗಲಿ ಎಂದರು.
ಮೇಕೆದಾಟು ಸಮಸ್ಯೆಗೆ ಹೋರಾಟ ಮಾಡಿದ್ವಿ. ಮೇಕೆದಾಟು ಹೋರಾಟ ನಿಲ್ಲಿಸಲು ವಿರೋಧ ಪಕ್ಷ ಕೇಸ್ ಹಾಕಿಸಿದ್ರು. ಹಲವು ನಾಯಕರ ಮೇಲೆ ಕೇಸ್ ದಾಖಲಿಸಿದ್ರು.
ರಾಮನಗರದಲ್ಲಿ ನಿಲ್ಲಿಸಿದ್ರು. ಜೈಲಿಗೆ ಹೋದರು ಚಿಂತೆ ಇಲ್ಲ ಅಂತ ಮುಂದುವರಿಸಿದ್ವು. ಕಾವೇರಿ ಹುಟ್ಟಿ ಮೇಕೆದಾಟುಗೆ ಹೋಗುವವರೆಗೆ ಕಾಂಗ್ರೆಸ್ ಉಳಿಸಿಕೊಟ್ಟಿದ್ದಿರಿ ಎಂದರು.
ಸುಪ್ರೀಂ ಕೋರ್ಟ್ ನ್ಯಾಯಾಲಯ ತಮಿಳುನಾಡಿನ ಜನತೆ ಮನಗಂಡು ಕನ್ನಂಬಾಡಿ ಕಟ್ಟೆ ಕಟ್ಟಿದ್ದೇವೆ ಹೇಮಾವತಿ, ಹಾರಂಗಿ, ಕೆ.ಆರ್.ಎಸ್. ನಿಂದ ನೀರು ಹೋಗುತ್ತೆ. ಮೇಕೆದಾಟು ಯೋಜನೆಯಿಂದ ಅವರಿಗೆ ಅನುಕೂಲ ವಾಗುತ್ತೆ. ನ್ಯಾಯಾಲಯ, ಆ ಜನತೆಗೆ ಜ್ಞಾನೋದಯದ ಬುದ್ದಿ ಕೊಡ್ತಾನೆ ಅನ್ನೋ ನಂಬಿಕೆ ಇದೆ ಎಂದು ಹೇಳಿದರು.
ಅಭಿಜಿತ್ ಲಗ್ನದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದೇವೆ. ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯ ಪ್ರಕಾರ ಬಾಗಿನ ಅರ್ಪಿಸಲಾಗಿದೆ. ಈ ನಾಡಿನ ಜನತೆಯ ಸಮೃದ್ಧಿಗೆ ಆಶೀರ್ವಾದವಿದೆ ಎಂದರು.
ಕೆ ಆರ್ ಎಸ್ ಹೊಸ ಬೃಂದಾವನ ಪ್ರವಾಸಿಗರ ತಾಣ. ಅಭಿವೃದ್ಧಿ ಮಾಡಬೇಕು ಅನ್ನೋ ಪ್ರಯತ್ನ ಮಾಡುತ್ತೇವೆ. ಸರ್ಕಾರ ಆಲೋಚನೆ ಮಾಡಿ ನಿರ್ಧಾರ ಮಾಡಲಾಗುತ್ತದೆ ಎಂದರು.
ಯಾರ ಜಮೀನು ಅವಶ್ಯಕತೆ ಇಲ್ಲ ಸರ್ಕಾರದೆ ಜಮೀನು ಸಾಕು. ಡ್ಯಾಂ ಸೇಫ್ಟಿ ಗಮನದಲ್ಲಿಟ್ಟುಕೊಂಡು ಸರ್ಕಾರ ತೀರ್ಮಾನ ಕೈಗೊಳ್ಳಲಾಗಿದೆ. ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಲು ನಿರ್ಧಾರಿಸಲಾಗಿದೆ. ಪ್ರತಿ ವಾರ ಕಾವೇರಿ ಆರತಿ ನಡೆಯಬೇಕು. ಆ ಯೋಜನೆ ತಯಾರಾಗಿದೆ ಎಂದರು.
ಈ ವರ್ಷದಿಂದ ಕೆರೆ-ಕಟ್ಟೆ ತುಂಬುವ ಸಂದರ್ಭದಲ್ಲಿ ರೈತರಿಗೆ ಸನ್ಮಾನಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಸಾವಡೆಗಳು ಹಾಗು ಎಇಇ ಅಧಿಕಾರಿಗಳಿಗೆ ಅವರಿಗೆ ಪ್ರಶಸ್ತಿ ಕೊಡಲು ಸರ್ಕಾರ ನಿರ್ಧಾರಿಸಲಾಗಿದೆ. ತಾಯಿ 10 ವರ್ಷ ಭಾಗಿನ ಅರ್ಪಿಸುವ ಅವಕಾಶವನ್ನು ಕಾಂಗ್ರೆಸ್ ಗೆ ನಿಡ್ತಾಳೆ ಅನ್ನೋ ಭರವಸೆ ಇದೆ. ನಮ್ಮ ಕೆಲಸಗಳೆ ಉತ್ತರ ಕೊಡುತ್ತೆ. ಕಾವೇರಮ್ಮ ಸದಕಾಲ ಎಲ್ಲರಿಗೂ ಅನ್ನ ಕೊಡಲಿ. ನಿಮ್ಮ ಬದುಕೇ ನಮ್ಮ ಬದುಕು ಎಂದರು.
ವರದಿ: ಗಿರೀಶ್ ರಾಜ್, ಮಂಡ್ಯ
ದೆಹಲಿಯಲ್ಲಿ ʻIAS ‘ಕೋಚಿಂಗ್ ಸೆಂಟರ್’ ಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಸಾವು : ಇಲ್ಲಿದೆ ಭಯಾನಕ ವಿಡಿಯೋ