ಹೊಸಪೇಟೆ : ಮುಖ್ಯಮಂತ್ರಿ ನೇತೃತ್ವದ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ಹಣ ಹಾಗು ಅನ್ನಭಾಗ್ಯ ಯೋಜನೆಯಡಿ ಪಡಿತರ ಅಕ್ಕಿಯ ಹಣ ಕೂಡಿಟ್ಟು ವಿಜಯನಗರ ಜಿಲ್ಲೆಯ ಹೊಸಪೇಟೆ ಕಾಕುಬಾಳು ತಾಲೂಕಿನ ಗ್ರಾಮದ ಕೆ.ವಿಜಯ ಲಕ್ಷ್ಮಿಎಂಬುವವರು ತನ್ನ ಮಗಳಿಗೆ ಚಿನ್ನದ ಕಿವಿಯೋಲೆ (ರಿ೦ಗ್) ಖರೀದಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನವಾಗಿವೆ. ಗೃಹಪಯೋಗಿ ವಸ್ತುಗಳನ್ನು ಕೊಂಡಂತೆ ಚಿನ್ನವನ್ನು ಸಹ ಖರೀದಿಸಬಹುದು ಎಂಬ ಆತ್ಮ ವಿಶ್ವಾಸ ಮೂಡಿದೆ. ಇಂಥಹ ಜನ ಕಲ್ಯಾಣ ಯೋಜನೆಗಳನ್ನು ಕೊಟ್ಟ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಧನ್ಯವಾದಗಳು ಎಂದು ವಿಜಯ ಲಕ್ಷ್ಮಿ ತಿಳಿಸಿದ್ದಾರೆ.