ಬೆಂಗಳೂರು: ನಿನ್ನೆ ನಿಧನರಾದಂತ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಸದಾಶಿವನಗರದ ನಿವಾಸದಿಂದ ಹುಟ್ಟೂರು ಸೋಮನಹಳ್ಳಿಗೆ ಕೊಂಡೊಯ್ಯಲಾಗುತ್ತಿದೆ. ಜನ ಸಾಗರದ ನಡುವೆ ಈಗ ರಾಮನಗರವನ್ನು ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರ ತಲುಪಿದೆ.
ಬೆಂಗಳೂರಿನಿಂದ ಹೊರಟ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಪಾರ್ಥೀವ ಶರೀರವು ರಾಮನಗರವನ್ನು ಇದೀಗ ತಲುಪಿದೆ. ಕೆಂಗೇರಿಯಲ್ಲಿ ತೆರೆದ ವಾಹನದಲ್ಲಿದ್ದಂತ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರವನ್ನು ಅಭಿಮಾನಿಗಳು, ಮುಖಂಡರು ಅಂತಿಮ ದರ್ಶನವನ್ನು ಪಡೆದರು. ಅಲ್ಲಿಂದ ಬಿಡದಿಯ ಮೂಲಕ ಈಗ ರಾಮನಗರವನ್ನು ತಲುವಿದೆ.
ರಾಮನಗರದಲ್ಲಿ ಕೆಲ ಕಾಲ ಅಭಿಮಾನಿಗಳು, ಹಿತೈಷಿಗಳು, ಪ್ರಮುಖರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಮಂಡ್ಯದ ಮದ್ಧೂರಿನ ಸೋಮನಹಳ್ಳಿಗೆ ಕೊಂಡೊಯ್ಯಲಾಗುತ್ತದೆ. ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರವನ್ನು ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ಮಧ್ಯಾಹ್ನ 3 ಗಂಟೆಗೆ ನೆರವೇರಿಸಲಾಗುತ್ತಿದೆ.
BREAKING: ಶಿವಮೊಗ್ಗ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಬೆಚ್ಚಿ ಬೀಳಿಸೋ ಘಟನೆ: ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಪತಿ