ರಾಯಚೂರು: ಜಿಲ್ಲೆಯಲ್ಲಿ ಒಂದೇ ಶಾಲೆ 100ಕ್ಕೂ ಹೆಚ್ಚು ಮಕ್ಕಳಿಗೆ ಮಂಗನ ಬಾವು ರೋಗ ತಗುಲಿರೋದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ದಿನೇ ದಿನೇ ಮತ್ತಷ್ಟು ಮಕ್ಕಳಿಗೆ ರೋಗ ವ್ಯಾಪಿಸುತ್ತಿರೋದು ಪೋಷಕರಲ್ಲಿ ಮತ್ತಷ್ಟು ಆತಂಕವನ್ನು ಹುಟ್ಟಿಸಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನೀರಲಕೇರಿ ಗ್ರಾಮದಲ್ಲಿರುವಂತ ಸರ್ಕಾರಿ ಶಾಲೆಯ ಮಕ್ಕಳಿಗೆ ಮಂಗನ ಬಾವು ಖಾಯಿಲೆ ಶಾಕ್ ನೀಡಿದೆ. ಶಾಲೆಯ 100ಕ್ಕೂ ಹೆಚ್ಚು ಮಕ್ಕಳಲ್ಲಿ ಮಂಗನ ಬಾವು ದೃಢಪಟ್ಟಿರೋದಾಗಿ ತಿಳಿದು ಬಂದಿದೆ.
ನೀರಲಕೇರಿ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಒಬ್ಬರಿಂದ ಒಬ್ಬರಿಗೆ ಮಂಗನ ಬಾವು ಹರಡಿದೆ. ಗಂಟಲು ಭಾಗದಲ್ಲಿ ಬಾವು, ತಲೆ ನೋವು, ಸ್ನಾಯು ಸೆಳೆತದಿಂದ ಮಕ್ಕಳು ಬಳಲುತ್ತಿರೋದಾಗಿ ತಿಳಿದು ಬಂದಿದೆ.
ಮಂಗನ ಬಾವಿನಿಂದ ಬಳಲುತ್ತಿರೋ ಮಕ್ಕಳು ಶಾಲೆ ತಪ್ಪಿಸಿ, ಗೈರಾಗುತ್ತಿರೋದಾಗಿ ತಿಳಿದು ಬಂದಿದೆ. ಈ ವಿಷಯ ತಿಳಿದು ಗ್ರಾಮದಲ್ಲೇ ಆರೋಗ್ಯ ಅಧಿಕಾರಿಗಳು ಮೊಕ್ಕಾಂ ಹೂಡಿ, ಪರೀಕ್ಷೆ, ಚಿಕಿತ್ಸೆಯಲ್ಲಿ ತೊಡಗಿದ್ದಾರೆ.
BREAKING : ತುಮಕೂರಲ್ಲಿ ಪತಿ-ಪತ್ನಿಯ ನಡುವೆ ಕೌಟುಂಬಿಕ ಕಲಹ : ಜಗಳ ಬಿಡಿಸಲು ಹೋದ ಅತ್ತೆಯ ಕೊಲೆಗೈದ ಅಳಿಯ
ಲೋಕಸಭಾ ಚುನಾವಣೆ 2024 : ಹೈಕಮಾಂಡ್ ಭೇಟಿ ಬಳಿಕ ಮಾಜಿ ಸಚಿವ ವಿ.ಸೋಮಣ್ಣ ಫುಲ್ ಆಕ್ಟಿವ್