ಕೋಲಾರ: ನಗರದಲ್ಲಿ ಹುಚ್ಚುನಾಯಿಯೊಂದು ಅಟ್ಟಹಾಸ ಮೆರೆದಿದೆ. ಸಾರ್ವಜನಿಕರ ಮೇಲೆ ಭೀಕರ ದಾಳಿ ಮಾಡಿದ್ದು, ಬರೋಬ್ಬರಿ 10ಕ್ಕೂ ಹೆಚ್ಚು ಜನರು ಹುಚ್ಚುನಾಯಿಯ ದಾಳಿಯಿಂದ ಗಾಯಗೊಂಡಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಸುತ್ತಮುತ್ತಲಿನ ಗ್ರಾಮದಲ್ಲಿ ಹುಚ್ಚುನಾಯಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದೆ. ಹುಚ್ಚುನಾಯಿಯೊಂದು ಗ್ರಾಮದಲ್ಲಿನ ಮಕ್ಕಳು, ಮಹಿಳೆಯರು ಸೇರಿದಂತೆ ವೃದ್ಧರ ಮೇಲೆ ಭೀಕರವಾಗಿ ದಾಳಿ ಮಾಡಿ, ಕಚ್ಚಿದ್ದರಿಂದ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ರೋಣೂರಿನಲ್ಲಿ ಮಾತ್ರವಲ್ಲದೇ ಈ ಹುಚ್ಚುನಾಯಿಯು ಚಿಕ್ಕತಿಮ್ಮನಹಳ್ಳಿ, ಕೋಟಪಲ್ಲಿ, ರೆಡ್ಡಂಪಲ್ಲಿ ಸೇರಿದಂತೆ ವಿವಿಧ ಹಳ್ಳಿಗಳಲ್ಲೂ ಹಲವರ ಮೇಲೆ ದಾಳಿ ನಡೆಸಿರುವುದಾಗಿ ಹೇಳಲಾಗುತ್ತಿದೆ.
ಹುಚ್ಚುನಾಯಿಯ ದಾಳಿಯಿಂದಾಗಿ ದಮ್ಮರೆಡ್ಡಿ, ತಿಪ್ಪಮ್ಮ, ಗೀತಮ್ಮ, ಮುನಿಯಪ್ಪ ಎಂಬುವರು ಗಾಯಗೊಂಡಿದ್ದಾರೆ. ಕೆಲವರನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದರೇ, ಮತ್ತೆ ಕೆಲವರು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
Good News: ಇನ್ಮುಂದೆ ರಾಜ್ಯದಲ್ಲಿ ಮನೆ ಬಾಗಿಲಲ್ಲೇ ಆರೋಗ್ಯ ತಪಾಸಣೆ: ಎಲ್ಲವೂ ಫ್ರೀ ಫ್ರೀ | Gruha Arogya Yojana
BREAKING : ಶಿವಮೊಗ್ಗದಲ್ಲಿ ಲಾರಿ ಬೈಕ್ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರ ಸಾವು ಓರ್ವನಿಗೆ ಗಾಯ!