ಕೋಲಾರ: ಕೋಲಾರದಿಂದ ಇಂದು ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದು, ಜನರ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ಎಲ್ಲಾ ಜಾತಿಯ ಜನರು,ಮಧ್ಯಮವರ್ಗದವರು ನಮ್ಮ ಪರವಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅಧಿಕ ಅಂತರದಿಂದ ಗೆಲ್ಲಲಿದ್ದಾರೆ ಎಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಮುಳಬಾಗಿಲು ನಗರದಲ್ಲಿ ಲೋಕಸಭಾ ಅಭ್ಯರ್ಥಿಯಾದ ಡಾ|| ಕೆವಿ ಗೌತಮ್ ಅವರ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.
ಬಿಜೆಪಿಗೆ ಏತಕ್ಕಾಗಿ ಮತ ನೀಡಬೇಕು
5300 ಕೋಟಿ ಕೊಡುವುದಾಗಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಹೇಳಿದ್ದರು. ಒಂದು ರೂಪಾಯಿಯನ್ನಾದರೂ ಕೊಟ್ಟಿದ್ದಾರೆಯೇ? 15 ನೇ ಹಣಕಾಸು ಯೋಜನೆಯು 5495 ಕೋಟಿ ಕೊಡುವುದಾಗಿ ಹೇಳಿ ಕೊಟ್ಟಿಲ್ಲಾ. ಪೇರಿಫೆರಲ್ ರಿಂಗ್ ರೋಡ್ ಹಾಗೂ ಕೆರೆಗಳ ಅಭವೃದ್ಧಿಗೆ ತಲಾ 3000 ಕೋಟಿ ರೂ.ಕೊಡುವುದಾಗಿ ಹೇಳಿದ್ದರು. ಕೊಟ್ಟರೇ? 15 ಲಕ್ಷ ರೂ ವಿದೇಶಗಳಿಂದ ತಂದು ಪ್ರತಿಯೊಬ್ಬರಿಗೂ ಕೊಟ್ಟರೇ?2 ಕೋಟಿ ಉದ್ಯೋಗ ಪ್ರತಿ ವರ್ಷ ಸೃಷ್ಟಿಸುವುದಾಗಿ ಹೇಳಿದ್ದರು. ರೈತರ ಆದಾಯ ದ್ವಿಗುಣ ಮಾಡುವುದೆಂದು ಹೇಳಿದ್ದರು ಮಾಡಿದರೆ ಅಚ್ಚೇ ದಿನ್ ಆಯೇಗಾ, ಎಂದರು, ಬೆಲೆ ಕಡಿಮೆ ಮಾಡುವುದಾಗಿ ಹೇಳಿದರು ಮಾಡಿದರೆ. ಬಿಜೆಪಿಗೆ ಏತಕ್ಕಾಗಿ ಮತ ನೀಡಬೇಕು ಎಂದು ಮುಖ್ಯಮಂತ್ರಿಗಳು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.
ಜನ ನಮ್ಮ ಗ್ಯಾರಂಟಿಗಳನ್ನು ನಂಬಿ ಮತ ನೀಡಿದ್ದರು.ನಾವೀಗ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದರು.
ಇನ್ನಷ್ಟು ಜನ ನಮ್ಮ ಪಕ್ಷವನ್ನು ಸೇರಲಿದ್ದಾರೆ
ಲೋಕಸಭಾ ಚುನಾವಣೆಯ ನಂತರ ಸರ್ಕಾರ ಬಿದ್ದುಹೋಗಲಿದೆ ಎಂದು ಬಿಜೆಪಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ 136 ಸ್ಥಾನಗಳನ್ನು ಗೆದ್ದು 43% ಮತಗಳನ್ನು ಕಾಂಗ್ರೆಸ್ ಗಳಿಸಿದೆ. ಬಿಜೆಪಿ 64 ಗೆದ್ದಿದ್ದಾರೆ. ಇನ್ನಷ್ಟು ಜನ ನಮ್ಮ ಪಕ್ಷವನ್ನು ಸೇರಲಿದ್ದಾರೆ. ಸರ್ಕಾರ ಬಿದ್ದುಹೋಗುವ ಪ್ರಶ್ನೆ ಉದ್ಭಿಸುವುದಿಲ್ಲ ಎಂದರು. ಐದು ವರ್ಷಗಳೂ ಕೂಡ ಗ್ಯಾರಂಟಿಗಳು ಜಾರಿಯಾಗಲಿವೆ ಎಂದರು.
ಸಚಿವ ಕೆ. ಹೆಚ್.ಮುನಿಯಪ್ಪ ಪ್ರಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಬೆಂಗಳೂರು ಗ್ರಾ ಜಿಲ್ಲೆಯಲ್ಲಿರುವ ಇಲ್ಲಿಗೆ ಬರಲಾಗಲಿಲ್ಲ ಎಂದರು.
‘UGC NET’ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ
BREAKING : ಬೆಂಗಳೂರಲ್ಲಿ ‘ಹಿಟ್ ಅಂಡ್ ರನ್’ ಗೆ ವೃದ್ದೆ ಬಲಿ : ಕಾರು ಚಾಲಕ ಪರಾರಿ