ಬೆಂಗಳೂರು : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಮೊರಾರ್ಜಿ ದೇಸಾಯಿ ಹಾಗೂ ಅಬ್ದುಲ್ ಕಲಾಂ ಸೇರಿ 92 ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಸಾರಾಸರಿ ಶೇ. 90 ರಷ್ಟು ಬಂದಿದೆ.
ಉತ್ತೀರ್ಣ ರಾದ 2584 ವಿದ್ಯಾರ್ಥಿಗಳ ಪೈಕಿ 2286 ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣ ರಾಗಿ ಶೇ. 90 ರಷ್ಟು ಫಲಿತಾಂಶ ಬಂದಿದೆ. ಈ ಪೈಕಿ 200 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಸಚಿವ ಜಮೀರ್ ಅಹಮದ್ ಖಾನ್ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಮುಂದಿನ ಉನ್ನತ ವ್ಯಾಸಂಗಕ್ಕೆ ಶುಭ ಕೊರಿದ್ದಾರೆ.
ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ಮಕ್ಕಳಿಗೆ ಸಿ ಇ ಟಿ, ನೀಟ್,ಜೆ ಇ ಇ ಪರೀಕ್ಷೆ ಗೆ ತರಬೇತಿ ನೀಡಲಾಗುವುದು ಎಂದು ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹೀಮ್, ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದ್ದಾರೆ.
BREAKING : ಬೆಳಗಾವಿಯಲ್ಲಿ ಘೋರ ಘಟನೆ :ಕಾಲೇಜಿಗೆ ಹೋಗು ಅಂದಿದಕ್ಕೆ ನೇಣಿಗೆ ಶರಣಾದ ಯುವಕ!
ALERT : ತಲೆಯ ಬಳಿ `ಮೊಬೈಲ್’ ಇಟ್ಟುಕೊಂಡು ಮಲಗುವವರೇ ತಪ್ಪದೇ ಇದನ್ನೊಮ್ಮೆ ಓದಿ.!