ಹಾವೇರಿ: ಜಿಲ್ಲೆಯಲ್ಲೂ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿರೋದು ತಡವಾಗಿ ಬೆಳಕಿಗೆ ಬಂದಿದೆ. ಹೋಟೆಲ್ ರೂಂನಲ್ಲಿದ್ದಂತ ಹಿಂದೂ ವ್ಯಕ್ತಿ ಹಾಗೂ ಮುಸ್ಲೀಂ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆ.
ಹಾವೇರಿಯಲ್ಲಿ ಜನವರಿ.8ರಂದು ಲಾಡ್ಜ್ ಒಂದಕ್ಕೆ ನುಗ್ಗಿರುವಂತ ಗುಂಪೊಂದು, ಹಿಂದೂ ವ್ಯಕ್ತಿ ಹಾಗೂ ಮುಸ್ಲೀಂ ಮಹಿಳೆಯ ಮೇಲೆ ಹಲ್ಲೆ ನಡೆಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಈ ಬಳಿಕ ಮಹಿಳೆ ಹಾನಗಲ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಓರ್ವ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆ ನೀಡಿದಂತ ದೂರಿನಲ್ಲಿ ನನ್ನ ಖಾಸಗಿ ಅಂಗಾಗ ಮುಟ್ಟಿ ಹಲ್ಲೆ ನಡೆಸಲಾಗಿದೆ. ಮನಸೋ ಇಚ್ಛೆ ಹೋಟೆಲ್ ನಲ್ಲಿ ಥಳಿಸಿದ್ದಾರೆ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅಂದಾಹೇ ಹಾವೇರಿ ಜಿಲ್ಲೆಯಲ್ಲಿ ನಡೆದಂತ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಹೋಟೆಲ್ ರೂನಲ್ಲಿ ತಂಗಿದ್ದಂತ ಹಿಂದೂ-ಮುಸ್ಲೀಂ ಜೋಡಿಯ ಮೇಲೆ ಹಲ್ಲೆ ನಡೆಸಲಾಗಿದೆ. ಬುರ್ಕಾ ಹಾಕಿಕೊಂಡು ಮಲಗಿದ್ದೀಯ ಎಂದು ಹಲ್ಲೆ ಮಾಡಲಾಗಿದೆ. ಮುಸ್ಲೀಂ ಮಹಿಳೆಯೊಂದಿಗೆ ಸಿಕ್ಕಿಬಿದ್ದಂತ ಹಿಂದೂ ವ್ಯಕ್ತಿಯನ್ನು ಥಳಿಸಲಾಗಿದೆ.
BREAKING: ಜಾಮೀನು ಬೆನ್ನಲ್ಲೇ ಮತ್ತೆ ‘ಕರವೇ ಅಧ್ಯಕ್ಷ ನಾರಾಯಣಗೌಡ’ ಬಂಧನ
BREAKING: ‘2017ರ ಪ್ರಕರಣ’ದಲ್ಲಿ ಕರವೇ ರಾಜ್ಯಾಧ್ಯಕ್ಷ ‘ಟಿ.ಎ ನಾರಾಯಣಗೌಡ’ಗೆ ಜಾಮೀನು ಮಂಜೂರು