ಬೆಂಗಳೂರು: ಭಾನುವಾರ (ಜನವರಿ 13) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಸತ್ಯ ಪ್ರಕಾಶ್ ಇ ಅವರ ಫೇಸ್ಬುಕ್ ಪೋಸ್ಟ್ನ ಸ್ಕ್ರೀನ್ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅವರು ಎಐ ರಚಿಸಿದ ಚಿತ್ರವನ್ನು ಬಳಸಿಕೊಂಡು ರಾಮ ಭಕ್ತರನ್ನು ಅಣಕಿಸಲು ಪ್ರಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ವೈರಲ್ ಚಿತ್ರದಲ್ಲಿ, ಕೋತಿಗಳು ಕೇಸರಿ ಬಟ್ಟೆಗಳನ್ನು ಧರಿಸಿ ವಿಮಾನದಲ್ಲಿ ಕುಳಿತಿದ್ದವು. “ರಾಮ ಭಕ್ತರು ಅಯೋಧ್ಯೆಗೆ ಹೊರಟಿದ್ದಾರೆ” ಎಂದು ಸತ್ಯ ಪ್ರಕಾಶ್ ಬರೆದಿದ್ದಾರೆ. ಈ ಪೋಸ್ಟ್ ಅನ್ನು ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ Theintrepid_ ಹಂಚಿಕೊಂಡಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸತ್ಯ ಅವರು ಫೇಸ್ ಬುಕ್ ನಿಂದ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಅಂಥ ಆರೋಪಿಸಿದ್ದಾರೆ. ಸತ್ಯ ಪ್ರಕಾಶ್ ಇ ಅವರ ಪೋಸ್ಟ್ಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
Meet Karnataka Congress General Secretary and Spokesperson Sathya Prakash.
He is mocking the devotees of Shree Ram.
I don't know why Congress's DNA is anti-Hindu. pic.twitter.com/PBjSAllfa7
— Vijay Patel🇮🇳 (@vijaygajera) January 13, 2024