ಬೆಂಗಳೂರು: ರಾಜ್ಯದ ಮಲೆನಾಡಿನಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿದೆ. ಇಂದು ಒಂದೇ ದಿನ ಬರೋಬ್ಬರಿ 13 ಜನರಿಗೆ ಸೋಂಕು ದೃಢಪಟ್ಟಿದೆ.
ಈ ಕುರಿತಂತ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಕಳೆದ 24 ಗಂಟೆಯಲ್ಲಿ 63 ಜನರನ್ನು ಮಂಗನ ಕಾಯಿಲೆ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 13 ಜನರಿಗೆ ಸೋಂಕು ದೃಢಪಟ್ಟಿರೋದಾಗಿ ತಿಳಿಸಿದೆ.
ಶಿವಮೊಗ್ಗದಲ್ಲಿ 42 ಮಂದಿಯನ್ನು ಕಳೆದ 24 ಗಂಟೆಯಲ್ಲಿ ಮಂಗನ ಕಾಯಿಲೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು. ಇವರಲ್ಲಿ 6 ಜನರಿಗೆ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಚಿಕ್ಕಮಗಳೂರಲ್ಲಿ 21 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು 7 ಮಂದಿಗೆ ದೃಢಪಟ್ಟಿದೆ ಎಂದು ತಿಳಿಸಿದೆ.
ಇದುವರೆಗೆ 3220 ಮಂದಿಯನ್ನು ಮಂಗನ ಖಾಯಿಲೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, 89 ಜನರಿಗೆ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಅವರಲ್ಲಿ 63 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ 24 ಸಕ್ರೀಯ ಪ್ರಕರಣಗಳು ಇದ್ದಾವೆ ಎಂದು ತಿಳಿಸಿದೆ.
BREAKING: ಧರ್ಮಸ್ಥಳದ ‘SDM’ ಕಾಲೇಜಿನಲ್ಲಿ ’10ನೇ ತರಗತಿ ವಿದ್ಯಾರ್ಥಿನಿ’ ಆತ್ಮಹತ್ಯೆಗೆ ಶರಣು
ಸರ್ಕಾರದ ಸಾಧನೆ ಬಿಚ್ಚಿಟ್ಟ ರಾಜ್ಯಪಾಲರು: ಇದು ಗ್ಯಾರಂಟಿ, ಜನಪರ ಸರ್ಕಾರವೆಂದು ಸಾಬೀತು- ದಿನೇಶ್ ಗೂಳಿಗೌಡ