ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ವಿರುದ್ಧ ವಿಶ್ವಸಂಸ್ಥೆ (ಯುಎನ್) ಪ್ರಧಾನ ಕಚೇರಿಯ ಹೊರಗೆ ಬೃಹತ್ ಪ್ರತಿಭಟನೆ ನಡೆದಿದ್ದು, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಕೊಲೆಗಾರ ಎಂದು ಘೋಷಣೆ ಕೂಗಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನಾಕಾರರು ಅಮೊಹಮ್ಮದ್ ಯೂನಸ್ ಹಿಂದೂಗಳ ಕೊಲೆಗಾರ, ಅವರು ತಕ್ಷಣವೇ ಹುದ್ದೆಯಿಂದ ಕೆಳಗಿಳಿಯಬೇಕು. ವಿಶ್ವಸಂಸ್ಥೆಯ ಪ್ರಧಾನ ಕಛೇರಿಯ ಹೊರಗೆ ಜನರು ‘ಭಯೋತ್ಪಾದಕ, ಅಲ್ಪಸಂಖ್ಯಾತ ಹಂತಕ, ಹಿಂದೂ ಹಂತಕ ಯೂನಸ್, ಹಿಂತಿರುಗಿ, ಕೆಳಗಿಳಿ’ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಭಟನಾಕಾರರು, “ಚುನಾಯಿತರಾಗದ ಮತ್ತು ಬಾಂಗ್ಲಾದೇಶದ ಸಾಂವಿಧಾನಿಕ ಆಡಳಿತದ ದೇಶವನ್ನು ಕಾನೂನುಬಾಹಿರವಾಗಿ ಪ್ರತಿನಿಧಿಸುವ ವ್ಯಕ್ತಿಯ ವಿರುದ್ಧ ನಾವು ಇಲ್ಲಿದ್ದೇವೆ. ಅವರು 170 ಮಿಲಿಯನ್ ಜನರ ಪರವಾಗಿ ಮಾತನಾಡುವ ಹಕ್ಕಿಲ್ಲ. ಅವರು ಹಿಂದೂಗಳ ಕೊಲೆಗಾರ ಎಂದು ಆರೋಪಿಸಿದ್ದಾರೆ.
#WATCH | United States: Slogans of 'terrorist, minority killer, Hindu killer Yunus, go back, step down' raised outside United Nations Headquarters in New York. pic.twitter.com/VMJZcCKPAX
— ANI (@ANI) September 27, 2024
ಯುಎನ್ ಜನರಲ್ ಅಸೆಂಬ್ಲಿ ಅಧಿವೇಶನದಲ್ಲಿ ಶುಕ್ರವಾರ (ಸೆಪ್ಟೆಂಬರ್ 27) ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್, ‘ನಾವು ರೋಹಿಂಗ್ಯಾಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕಾಗಿದೆ ಮತ್ತು ಹಕ್ಕುಗಳೊಂದಿಗೆ ತಮ್ಮ ತಾಯ್ನಾಡಿಗೆ ಮರಳಲು ಅವಕಾಶವನ್ನು ನೀಡಬೇಕಾಗಿದೆ. ಮ್ಯಾನ್ಮಾರ್‌ನಲ್ಲಿ ನಿರಂತರವಾಗಿ ಬದಲಾಗುತ್ತಿರುವ ಪರಿಸ್ಥಿತಿಯ ನಡುವೆ, ನಮ್ಮ ದೇಶದಲ್ಲಿ ರೋಹಿಂಗ್ಯಾಗಳಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಅಂತರರಾಷ್ಟ್ರೀಯ ಸಮುದಾಯಗಳೊಂದಿಗೆ ಕೆಲಸ ಮಾಡಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
#WATCH | New York, US: While protesting against Bangladesh Chief Adviser Prof Muhammad Yunus, a protestor says "We have gathered here as a person who is not elected is unlawfully presenting a constitutionally run country Bangladesh. He (Yunus) has no right to speak on behalf of… https://t.co/QMG2mATRcM pic.twitter.com/GVp6ZPOmhy
— ANI (@ANI) September 27, 2024