ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮತಬೇಟೆಯಲ್ಲಿ ತೊಡಗಿದ್ದಾರೆ. ಮಲೆನಾಡಿನ ಹೆಬ್ಬಾಗಿಲಿನಲ್ಲಿ ಸಾಗರದ ಸಿಗಂದೂರು ಚೌಡೇಶ್ವರಿಯನ್ನು ಸ್ಮರಿಸಿದಂತ ಅವರು, ಕನ್ನಡದಲ್ಲೇ ಮತಶಿಕಾರಿಯನ್ನು ಆರಂಭಿಸಿದರು.
ನಗರದ ಅಲ್ಲಮಪ್ರಭು ಮೈದಾನದಲ್ಲಿ ಬಿಜೆಪಿ ವಿಕಸಿತ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ಸೂರ್ ಸಿಎಂ ಶಾಡೋ ಸಿಎಂ ಇದ್ದಾರೆ ಎಂದು ಹೇಳುವ ಮೂಲಕ ಸಿಎಂ ಸಿದ್ಧರಾಮಯ್ಯ ಅವರ ಪುತ್ರನ ವಿರುದ್ಧ ವಾಗ್ಧಾಳಿ ನಡೆಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಜನರಿಗೆ ದೊಡ್ಡ ಮೋಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ 28 ಸ್ಥಾನಗಳ್ನು ಗೆಲ್ಲಲೇಬೇಕು. ಬಿಜೆಪಿ ಶಕ್ತಿ ಏನೆಂದು ನೀವು ಕಾಂಗ್ರೆಸ್ ಗೆ ತೋರಿಸಬೇಕು. ಜನರ ಸೇವೆ ಮಾಡೋದು ನನ್ನ ಶಕ್ತಿ. ಆ ಶಕ್ತಿಯನ್ನು ನೀವು ನೀಡಿದ್ದೀರಿ ಎಂದರು.
ನಾಳೆ ಶಿವಾಜಿ ಪಾರ್ಕ್ ನಲ್ಲಿ ಶಕ್ತಿಯನ್ನು ನಾಶ ಮಾಡಲು ಹೊರಟಿದ್ದೇನೆ. ನಮ್ಮ ಶಕ್ತಿಯನ್ನು ಹೆಚ್ಚಿಸುವ ಕೆಲಸ ನಾವು ಮಾಡಬೇಕು. ಹಿಂದೂ ಸಮಾಜದ ಶಕ್ತಿಯನ್ನು ನಾಶ ಮಾಡಲು ಕಾಂಗ್ರೆಸ್ ಹೊರಟಿದ್ದಾರೆ. ದೇಶದ ಕೋಟಿ ಕೋಟಿ ಜನರು ನನಗೆ ಶಕ್ತಿ ನೀಡಿದ್ದಾರೆ ಎಂದು ಹೇಳಿದರು.
ದೆಹಲಿ ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಸರ್ಕಾರದ ಎಟಿಎಂ ಆಗಿದೆ. ನಿನ್ನೆ ಮುಂಬೈನಲ್ಲಿ ಕಾಂಗ್ರೆಸ್ ಸಭೆಯಲ್ಲಿ ಒಂದು ನಿರ್ಣಯ ಮಾಡಿದೆ. ಹಿಂದೂ ಸಮಾಜದ ಶಕ್ಕಿಯನ್ನು ನಿರ್ಮೂಲನೆ ಮಾಡೋದಾಗಿದೆ. ನಮ್ಮ ಶಕ್ತಿಯನ್ನು ಹೆಚ್ಚಿಸುವಂತೆ ಕೆಲಸ ಮಾಡಬೇಕು. ಬಾಳಾಸಾಹೇಬ್ ಠಾಕ್ರೆ ಆತ್ಮಕ್ಕೆ ಎಷ್ಟು ನೋವಾಗಿರಲಿಕ್ಕಿಲ್ಲ ಎಂದರು.
BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ನಾಳೆ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು
BREAKING: ತುಮಕೂರಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ‘8 ಲಕ್ಷ’ ಹಣ ಜಪ್ತಿ