ಕೊಪ್ಪಳ : ಮೋದಿ ಮೋದಿ ಅನ್ನೋ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡಿಯಬೇಕು ಎಂದು ಸಚಿವ ಶಿವರಾಜ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮೋದಿ ಸರ್ಕಾರ ಪ್ರತಿ ವರ್ಷ ಎರಡು ಕೋಟಿ ಹುದ್ದೆಗಳನ್ನು ನೀಡುತ್ತೇವೆ ಅಂತ ಹೇಳಿದ್ರು, ಆದರೆ ಉದ್ಯೋಗ ಕೇಳಿದ್ರೆ ಪಕೋಡಾ ಮಾರಿ ಅಂತಾರೆ. ಈವರೆಗೆ 2 ಕೋಟಿ ಉದ್ಯೋಗಗಳನ್ನು ನೀಡಿಲ್ಲ. ಮೋದಿ ಹೇಳಿದಂತೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದ ಜನತೆಗೆ ಮೋದಿ ಸರ್ಕಾರ ಮೋಸ ಮಾಡಿದೆ. ಹೀಗಿದ್ದರು ವಿದ್ಯಾರ್ಥಿಗಳು ಮೋದಿ ಮೋದಿ ಅಂತ ಕೂಗುತ್ತಾರೆ. ಮೋದಿ ಮೋದಿ ಎನ್ನುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎನ್ನುವ ಮೂಲಕ ಸಚಿವ ಶಿವರಾಜ ತಂಗಡಗಿ ವಿವಾದದ ಕಿಡಿ ಹೊತ್ತಿಸಿದ್ದಾರೆ.