ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರು ಕಳ್ಳ ಮತದಾನದಿಂದಲೇ ಗೆದ್ದಿರೋದು. ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಆಗಿಲ್ಲ ಅನ್ನೋಕಾಗಲ್ಲ. ಖಂಡಿತಾ ಆಗಿರುತ್ತದೆ ಎಂಬುದಾಗಿ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ ಚುನಾವಣಾ ಆಯೋಗದ ಮೇಲೆ ಗಂಭೀರವಾದಂತ ಆರೋಪವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. ಬಹುಶಃ ಇವತ್ತು ಕೇಂದ್ರದಲ್ಲಿ ಅಧಿಕಾರ ಪಡೆಯಬೇಕಾದರೇ ಮೋದಿ ಸರ್ಕಾರವು ಏನು ಬೇಕಾದರು ಮಾಡೋದಕ್ಕೆ ಅವಕಾಶವಿದೆ. ರಾಹುಲ್ ಗಾಂಧಿ ಹೇಳೋದು ಸತ್ಯವಿದೆ ಎಂದರು.
ನನಗೆ ಅನ್ನಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿ ಅಕ್ರಮ ಆಗಿದೆ ಅನ್ನೋದು ಗೊತ್ತಾಗುತ್ತಿದೆ. ಇಲ್ಲ ಅಂದಿದ್ದರೇ ಬಿಜೆಪಿ ಅಷ್ಟು ಸೀಟು ಗೆಲ್ಲೋದಕ್ಕೆ ಸಾಧ್ಯವಾಗುತ್ತಿರಲಿಲ್ಲ. ವರದಿಯ ಪ್ರಕಾರ ಅವರು ಬಹಳ ಸೀಟ್ ತೋರಿಸಿದರು. ಆದರೂ ಕಮ್ಮಿ ಬಂದಿರೋದನ್ನು ನೀವೆಲ್ಲ ನೋಡಿದ್ದೀರಿ ಎಂದರು.
ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದರು. ಬಹಳ ಅನಾಹುತ ಮಾಡಿ ಹೋದ್ರು ತಮ್ಮ ಅಧಿಕಾರಕ್ಕೋಸ್ಕರ ಅಂತ ಬಿಜೆಪಿಗರು ಆರೋಪಿಸಿದ್ದಾರೆ. ಆದರೇ ಬಿಜೆಪಿಗರು ಮಾಡಿರೋದು ಏನು? ಇವತ್ತು ಅದೇ ತುರ್ತು ಪರಿಸ್ಥಿತಿಯನ್ನು ಮೋದಿಜೀಯವರು ಹಾಕುತ್ತಿದ್ದಾರೆ. ಐಟಿಯಿಂದ ಹಿಡಿದು, ಸಿಬಿಐ, ಇಡಿಯಿಂದ ಹಿಡಿದು ಇಡೀ ದೇಶದ ಜನರನ್ನು ತಮ್ಮ ಹಿಡಿತದಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ತಮ್ಮ ಸರ್ವಸ್ವವನ್ನಾಗಿ ಮಾಡಿಕೊಂಡಿದ್ದಾರೆ ಅಂದರೆ ನೀವು ಚುನಾವಣೆ ಅಕ್ರಮ ಮಾಡಿಲ್ಲ ಅಂತ ಯಾವ ಗ್ಯಾರಂಟಿಯಲ್ಲಿ ಹೇಳುತ್ತೀರಿ ಎಂಬುದಾಗಿ ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಅಕ್ರಮ ಆಗಿದೆ. ಅದಕ್ಕಾಗಿಯೇ ಆಗಸ್ಟ್.8ರ ನಾಳೆ ಕೇಂದ್ರ, ರಾಜ್ಯದ ಕಾಂಗ್ರೆಸ್ ನಾಯಕರು ಒಟ್ಟುಗೂಡಿ ಚುನಾವಣಾ ಅಕ್ರಮದ ವಿರುದ್ಧ, ಚುನಾವಣಾ ಆಯೋಗದ ವಿರುದ್ಧ ಬೃಹತ್ ಪ್ರತಿಭಟನೆ ಮಾಡುತ್ತಿದ್ದೇವೆ. ಅದಕ್ಕೆ ಸಂಪೂರ್ಣವಾದಂತ ಸಹಕಾರವನ್ನು ಎಲ್ಲರೂ ಕೊಡ್ತಾ ಇದ್ದೇವೆ ಎಂದರು.
ವರದಿ; ವಸಂತ ಬಿ ಈಶ್ವರಗಂರೆ..,
BREAKING: ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’ ಕೇಸ್: ‘ಕಚೇರಿ ಅಧೀಕ್ಷಕ ಸುನೀಲ್’ ಸೇವೆಯಿಂದ ಅಮಾನತು