ಶಿವಮೊಗ್ಗ: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿಎಸ್ ಟಿಯನ್ನು ತೆರಿಗೆಯನ್ನು ಕಡಿತಗೊಳಿಸುವ ಮೂಲಕ ಸಾರ್ವಜನಿಕರಿಗೆ ದಸರಾ ಹಬ್ಬಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಸೊರಬ ಬಿಜೆಪಿ ಮುಖಂಡ ಡಾ.ಜ್ಞಾನೇಶ್ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬದ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯ ನಡೆಸಿ,ನಂತರ ಪಟ್ಟಣದ ಆಂಜನೇಯ ಸ್ವಾಮಿ ವೃತ್ತದ ಬಳಿ ಸರಕು,ಸೇವಾ ತೆರಿಗೆ ಕಡಿತಗೊಳಿಸದ ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜಿಎಸ್ ಟಿ ಕಡಿತದಿಂದ ಸಾರ್ವಜನಿಕವಾಗಿ ದಿನಬಳಕೆ ವಸ್ತುಗಳ ಬೆಲೆ ಗಣನೀಯ ಇಳಿಕೆಯಾಗಿದೆ. ಇದರಿಂದ ಕೆಳವರ್ಗದ ಜನರ ಜೀವನ ಕ್ರಮ ಸುಧಾರಿಸುವ ಜೊತೆಗೆ ವ್ಯಾಪಾರ, ವಹಿವಾಟು ನಡೆಸುವ ವರ್ತಕರಿಗೆ ಆರ್ಥಿಕತೆಯಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ದೇಶವನ್ನು ಆರ್ಥಿಕತೆಯಲ್ಲಿ ಉನ್ನತಿಗೆ ಕೊಂಡೊಯ್ದ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿದ್ದಾರೆ. ದಿನಬಳಕೆ ವಸ್ತುಗಳಿಗೆ ಶೇ 18ರಷ್ಟು ಹಾಗೂ ಕಾರು ಮತ್ತಿತರ ವಾಹನಗಳಿಗೆ ಶೇ 28 ರಷ್ಟು ವಿಧಿಸಿಸುತ್ತಿದ್ದ ಸರಕು ಮತ್ತು ಸೇವಾ ತೆರಿಗೆಯನ್ನು ತಲಾ ಶೇ 10ರಷ್ಟು ಇಳಿಸುವ ಮೂಲಕ ಬಂಪರ್ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಡಿವಾಳ ಮಾಚೀದೇವ ನಿಗಮದ ಮಾಜಿ ರಾಜ್ಯಾಧ್ಯಕ್ಷ ರಾಜು ತಲ್ಲೂರು, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಯುವ ಮೋರ್ಚಾ ಅಧ್ಯಕ್ಷ ರಾಜು ಮಾವಿನಬಳ್ಳಿಕೊಪ್ಪ, ಮಹಿಳಾ ಅಧ್ಯಕ್ಷೆ ಹೊಳಿಯಮ್ಮ, ಪ್ರಧಾನ ಜೊವಿ ಜಾನಕಪ್ಪ ಯಲಸಿ, ಸುಧಾ,ಗೌರಮ್ಮ ಭಂಡಾರಿ, ಭಾಗ್ಯಶ್ರೀ, ದೇವೇಂದ್ರಪ್ಪ ಚನ್ನಾಪುರ, ಡಿ.ಶಿವಯೋಗಿ, ಉದ್ಯಮಿ ನಾಗರಾಜ್ ಗುತ್ತಿ, ವಿಜಯೇಂದ್ರಗೌಡ,ಮನಸ್ವಿ, ರತ್ಮಮ್ಮ, ಗುರು ಸಿಗೇಹಳ್ಳಿ, ಲಿಂಗರಾಜ್ ಬಿಳಾಗಿ ಹಾಜರಿದ್ದರು.
ವರದಿ: ರಾಘವೇಂದ್ರ ಟಿ ಜಂಗಿನಕೊಪ್ಪ, ಸೊರಬ
ಶಿವಮೊಗ್ಗ: ಹಳೇ ಸೊರಬ ಪ್ರಾಥಮಿಕ ಸಹಕಾರ ಸಂಘಕ್ಕೆ 7.26 ಲಕ್ಷ ನಿವ್ವಳ ಲಾಭ
ಶಿವಮೊಗ್ಗ: ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯಿತ’ವೆಂದು ನಮೂದಿಸಿ- ಟಿ.ಡಿ ಮೇಘರಾಜ್ ಮನವಿ
GST ಜಾರಿ ಮಾಡಿದ್ದು, ಹೆಚ್ಚು ವಿಧಿಸಿದ್ದು, ಈಗ ಬೆನ್ನು ತಟ್ಟಿಕೊಳ್ತಿರೋದು ಮೋದಿಯೇ: ಸಿದ್ದರಾಮಯ್ಯ ವ್ಯಂಗ್ಯ
Watch Video : ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಹೊಸ ‘AI’ ಅಸ್ತ್ರ ; ಮತ್ತೊಂದು ವಿಡಿಯೋ ಬಿಡುಗಡೆ